CM Medal 25 ಅರಣ್ಯ ಅಧಿಕಾರಿ, ಸಿಬ್ಬಂದಿಗೆ ಸಿಎಂ ಪದಕ

By Kannadaprabha NewsFirst Published Nov 20, 2021, 7:58 AM IST
Highlights
  • 2020ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ 
  •  ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ವನ್ಯಜೀವಿಗಳಿಂದ ಮಾನವರ ರಕ್ಷಣೆ ಮತ್ತು ಅರಣ್ಯ ಸಂಪತ್ತು ಕಾಪಾಡುವಲ್ಲಿ ಶ್ರಮಿಸಿರುವ ಸುಮಾರು 25 ಮಂದಿಯನ್ನು ಆಯ್ಕೆ

 ಬೆಂಗಳೂರು (ನ.20):  2020ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ( Chief Minister Medal ) ಭಾಜನರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಅರಣ್ಯ (Firest) ಮತ್ತು ವನ್ಯ ಜೀವಿಗಳ ಸಂರಕ್ಷಣೆ, ವನ್ಯ ಜೀವಿಗಳಿಂದ ಮಾನವರ ರಕ್ಷಣೆ ಮತ್ತು ಅರಣ್ಯ ಸಂಪತ್ತು ಕಾಪಾಡುವಲ್ಲಿ ಶ್ರಮಿಸಿರುವ ಸುಮಾರು 25 ಮಂದಿಯನ್ನು ಆಯ್ಕೆ ಮಾಡಲಾಗಿದೆ.

2020ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ (Medal) ಅರ್ಹರಾಗಿರುವವರ ಹುದ್ದೆ ಹಾಗೂ ವಿಭಾಗದ ವಿವರ ಕ್ರಮವಾಗಿ ಈ ರೀತಿ ಇದೆ.

ವಿ. ಗಣೇಶ್‌ (ವಲಯ ಅರಣ್ಯ ಅಧಿಕಾರಿ- ವನ್ಯಜೀವಿ ಸಂರಕ್ಷಣೆ),ಎಂ.ಸಂತೋಷ್‌ ಕುಮಾರ್‌ (ಅರಣ್ಯ ರಕ್ಷಕ-ವನ್ಯಜೀವಿ ಸಂರಕ್ಷಣೆ), ಎಂ.ರಾಮಚಂದ್ರ(ವಾಹನ ಚಾಲಕ -ವನ್ಯಜೀವಿ ಸಂರಕ್ಷಣೆ), ಕೆ.ಮಹೇಶ್‌ (ವಲಯ ಅರಣ್ಯಾಧಿಕಾರಿ-ಶೌರ್ಯ ಮತ್ತು ದಿಟ್ಟತನ), ಎಸ್‌.ವಿವೇಕ್‌ (ವಲಯ ಅರಣ್ಯ ಸಂರಕ್ಷಣಾಧಿಕಾರಿ-ಶೌರ್ಯ ಮತ್ತು ದಿಟ್ಟತನ), ರಾಜುಚಂದ್ರ (ಅರಣ್ಯರಕ್ಷಕ-ಶೌರ್ಯ ಮತ್ತು ದಿಟ್ಟತನ), ಎಲ್‌.ರವಿ ನಂದನ್‌ (ಅರಣ್ಯ ರಕ್ಷಕ-ಶೌರ್ಯ ಮತ್ತು ದಿಟ್ಟತನ).

ಎಸ್‌.ಡಿ.ಬಬಲಾದಿ (ವಲಯ ಅರಣ್ಯಾಧಿಕಾರಿ-ಅಭಿವೃದ್ಧಿ), ನಾಗಪ್ಪ ಎಸ್‌.ಸಿದ್ದರ್‌ (ಅರಣ್ಯರಕ್ಷಕ-ಅಭಿವೃದ್ಧಿ), ಎಚ್‌.ದೇವರಾಜಪಾಣ (ಅರಣ್ಯ ರಕ್ಷಕ-ಅಭಿವೃದ್ಧಿ), ಟಿ.ಸುನೀತಾ (ವಲಯ ಅರಣ್ಯಾಧಿಕಾರಿ-ಅರಣ್ಯ ಸಂರಕ್ಷಣೆ), ಕಾಂತರಾಜ (ಉಪವಲಯ ಅರಣ್ಯಾಧಿಕಾರಿ-ಅರಣ್ಯ ಸಂರಕ್ಷಣೆ), ಪರಮೇಶ್‌ (ಅರಣ್ಯ ಸಂರಕ್ಷಕ-ಅರಣ್ಯ ಸಂರಕ್ಷಣೆ), ಅನ್ಸರ್‌ (ವಾಹನ ಚಾಲಕ-ಅರಣ್ಯ ಸಂರಕ್ಷಣೆ), ಎಚ್‌.ಸಿ.ಪ್ರಿಯದರ್ಶಿನಿ (ವಲಯ ಅರಣ್ಯ ಸಂರಕ್ಷಣಾಧಿಕಾರಿ-ಕಾರ್ಯಯೋಜನೆ), ಸತ್ಯಬೋಧ ಕೆ.ಪುರೋಹಿತ (ಕ್ಷೇಮಾಭಿವೃದ್ಧಿ ನೌಕರ-ಕಾರ್ಯಯೋಜನೆ).

ಸಿ.ಅಂತೋಣಿ ಲಾರೆನ್ಸ್‌ (ಉಪವಲಯ ಅರಣ್ಯಸಂರಕ್ಷಣಾಧಿಕಾರಿ-ತರಬೇತಿ) ಕೆ.ರಾಮಚಂದ್ರ(ಅರಣ್ಯ ರಕ್ಷಕ-ಸಂಶೋಧನೆ), ಜಿ.ಬಾಲಕೃಷ್ಣ (ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ-ಮಾನವ ಪ್ರಾಣಿ ಸಂಘರ್ಷ), ಮೋಹನ್‌ ಎಸ್‌. ನಾಯ್ಕ (ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ-ಮಾನವ ಪ್ರಾಣಿ ಸಂಘರ್ಷ), ಕೆ.ಜಿ.ಮೋಹನ್‌ ಕುಮಾರ್‌ (ಅರಣ್ಯ ವೀಕ್ಷಕ-ಮಾನವ ಪ್ರಾಣಿ ಸಂಘರ್ಷ), ಶ್ರೀನಿವಾಸ್‌ ನಾಯಕ್‌ (ವಲಯ ಅರಣ್ಯಾಧಿಕಾರಿ-ನವೀನತೆ), ಎಚ್‌.ವೆಂಕಟೇಶ್‌ ನಾಯ್ಕ (ಉಪವಲಯ ಅರಣ್ಯಾಧಿಕಾರಿ-ನವೀನತೆ), ಅಮೃತ್‌ ದೇಸಾಯಿ(ಉಪವಲಯ ಅರಣ್ಯಾಧಿಕಾರಿ-ನವೀನತೆ), ಎಂ.ಡಿ.ಅಯ್ಯಪ್ಪ (ಅರಣ್ಯ ರಕ್ಷಕ-ನವೀನತೆ).

ಹಲವು ಸಾಧಕರಿಗೆ ಪದ್ಮ ಗೌರವ :  ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ (Rashtrapati Bhavan) ಐತಿಹಾಸಿಕ ದರ್ಬಾರ್ ಹಾಲ್‌ನಲ್ಲಿ 2021ನೇ ಸಾಲಿನ ಪದ್ಮ ಪ್ರಶಸ್ತಿ (Padma Awards 2021) ಪ್ರಧಾನ ಸಮಾರಂಭ ನಡೆದಿದೆ. 7 ಪದ್ಮವಿಭೂಷಣ (, 10 ಪದ್ಮಭೂಷಣ ಹಾಗೂ 102 ಪದ್ಮಶ್ರೀ (Padma Shri) ಪ್ರಶಸ್ತಿ ಸೇರಿದಂತೆ ಒಟ್ಟು 119 ಪದ್ಮ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಸ್ತಿ ಪ್ರಧಾನ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 

ಈ ಸಮಾರಂಭದಲ್ಲಿ ಕವಿ, ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರರಿಗೆ (Chandrashekhara Kambara) ಪದ್ಮಭೂಷಣ (Padma Bhushan) ನೀಡಿ ಗೌರವಿಸಲಾಗಿದೆ. ಇವರನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಹಾಜಬ್ಬ (Harekala Hajabba), ಮಾತಾ ಬಿ. ಮಂಜಮ್ಮ ಜೋಗತಿ ಸೇರಿ ಇನ್ನೂ ಕೆಲ ಕನ್ನಡಿಗರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ.

 ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಒಲಿಂಪಿಯನ್ ಪಿವಿ ಸಿಂಧು, ನಟಿ ಕಂಗನಾ ರಣಾವತ್ ಸೇರಿದಂತೆ ಪ್ರಮುಖರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು. ಸುಷ್ಮಾ ಸ್ವರಾಜ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಪುತ್ರಿ ಬಾನ್ಸುರಿ ಸ್ವರಾಜ್ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಬಾರಿ ಒಟ್ಟು 119 ಪದ್ಮ ಪ್ರಶಸ್ತಿ ಪಡೆದವರಲ್ಲಿ, 29 ಮಹಿಳೆಯರು, ಒಬ್ಬರು ತೃತೀಯ ಲಿಂಗಿ ಹಾಗೂ 16 ಮಂದಿ ಮರಣೋತ್ತರ ಪ್ರಶಸ್ತಿ ಪುರಸ್ಕೃತರಿದ್ದಾರೆ. 

ಪದ್ಮವಿಭೂಷಣ ಪ್ರಶಸ್ತಿ ಪಡೆದವರ ಪಟ್ಟಿ

ಜಪಾನ್‌ನ ಮಾಜಿ ಪ್ರಧಾನಿ ಶಿಂಬೊ ಅಬೆ'

ಕರ್ನಾಟಕದ ಡಾ. ಬಿ. ಎಂ. ಹೆಗ್ಡೆ

ಗಾಯಕ ಎಸ್‌. ಪಿ. ಬಾಲಸುಬ್ರಮಣ್ಯಂ (ಮರಣೋತ್ತರ)

ನರಿಂದರ್ ಸಿಂಗ್ ಕಪಾನಿ (ಮರಣೋತ್ತರ)

ಮೌಲಾನಾ ವಹೀದುದ್ದೀನ್ ಖಾನ್

ಬಿ. ಬಿ. ಲಾಲ್

ಸುದರ್ಶನ್ ಸಾಹೋ 

ಪದ್ಮಭೂಷಣ ಪ್ರಶಸ್ತಿ ಪಡೆದವರ ಪಟ್ಟಿ

ಕೃಷ್ಣನ್ ನಾಯರ್ ಶಾಂತಾ ಕುಮಾರಿ ಚಿತ್ರಾ'

ತರುಣ್ ಗೊಗಯ್ (ಮರಣೋತ್ತರ)

ಚಂದ್ರಶೇಖರ ಕಂಬಾರ'

ಸುಮಿತ್ರಾ ಮಹಾಜನ್

ನೃಪೇಂದ್ರ ಮಿಶ್ರಾ

ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ)

ಕೇಶುಭಾಯ್ ಪಟೇಲ್ (ಮರಣೋತ್ತರ)

ಕಲ್ಬೆ ಸಾದಿಕ್ (ಮರಣೋತ್ತರ)

ರಜನಿಕಾಂತ್ ದೇವಿದಾಸ್ ಶ್ರಾಫ್

ತರ್‌ಲೋಚನ್ ಸಿಂಗ್ 

click me!