
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದು, ಅವರ ಹೇಳಿಕೆಗಳು ಮತ್ತೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿವೆ. ಚಲವಾದಿ ಅವರು ಖರ್ಗೆ ಅವರ ಹಿನ್ನಲೆ ಹಾಗೂ ವೈಯಕ್ತಿಕ ವಿಚಾರಗಳನ್ನು ಉಲ್ಲೇಖಿಸುತ್ತಾ ಕಟುವಾಗಿ ಟೀಕಿಸಿದರು. ಖರ್ಗೆ ಅವರ ಮನೆಯ ಮೇಲೆ ದಾಳಿ ನಡೆಸಿದ್ದು ರಜಾಕರ್‌ಗಳು. ಅಂಥ ಸಂದರ್ಭದಲ್ಲೂ ಅವರನ್ನು ಉಳಿಸಿದವರ ಬಗ್ಗೆ ಕೃತಜ್ಞತೆ ತೋರಿಸುವ ಬದಲು ಇಂದು ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದರು.
ನೀವು 1972 ಲ್ಲಿ ನೀವು ಶಾಸಕರಾಗಿದ್ದಾಗ ನಿಮ್ಮ ತಂದೆ ದನ ಕಾಯ್ತಾ ಇದ್ದರು. ನೀವು ಕಷ್ಟದಲ್ಲಿ ಇದ್ದಾಗ ನಿಮ್ಮನ್ನು ರಜಾಕರಿಂದ ಬಚಾವ್ ಮಾಡಿ ಸಾಕಿದ್ದರು. ಅದೇ ನಿಮ್ಮ ಸಾಕಿದ ತಂದೆಯನ್ನೇ ನೀವು ಮನೆ ಒಳಗೆ ಸೇರಿಸಿಲ್ಲ. ನೀವು 1972 ರಲ್ಲಿ ಶಾಸಕ ಆಗಿದ್ದಾಗ ನಿಮ್ಮ ತಂದೆ ದನ ಕಾಯುತ್ತಿದ್ದರು. ಅವರನ್ನು ನೀವು ಮನೆಗೂ ಸೇರಿಸಿಲ್ಲ.
ಬ್ರಾಹ್ಮಣ ಸಮುದಾಯದ ಕುರಿತು ಖರ್ಗೆ ನೀಡಿದ ಹೇಳಿಕೆಗಳನ್ನೂ ಚಲವಾದಿ ಟೀಕಿಸಿದರು. ನೀವು ಬ್ರಾಹ್ಮಣರ ಬಗ್ಗೆ ಅಷ್ಟು ಮಾತಾಡ್ತಿರಿ. ನಿಮ್ಮ ಮನೆಯ ತುಂಬಾ ಯಾರನ್ನು ತುಂಬಿಸಿಕೊಂಡಿದ್ದೀರಿ. ನಿಮ್ಮ ಮನೆಯಲ್ಲಿ ಇರುವ ಬ್ರಾಹ್ಮಣರಿಗೆ ಏನು ಕೆಲಸ. ನೀವು ಯಾರನ್ನು ಮದುವೆ ಆಗಿದ್ದೀರಿ. ಬ್ರಾಹ್ಮಣರು ದಲಿತ ವಿರೋಧಿ ಎನ್ನೋದಾದರೆ ನಿಮ್ಮ ಮನೆಯಲ್ಲಿ ಇರುವವರು ಬ್ರಾಹ್ಮಣರು. ನಿಮ್ಮ ಮನೆಯವರನ್ನು ಮಕ್ಕಳನ್ನು ಸಹ ಬ್ರಾಹ್ಮಣರಿಗೆ ನೀಡಿ ಮದುವೆ ಮಾಡಿದ್ದೀರಿ. ಹಾಗಾದರೆ ನೀವು ದಲಿತರಲ್ಲವಾ? ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ,
ನಿಮಗೆ ಬ್ರಾಹ್ಮಣರ ಮೇಲೆ ಕೋಪ ಇದ್ದರೆ, ನೀವು ಮುಸ್ಲಿಂರ ಮದುವೆ ಆಗಬೇಕಿತ್ತು. ಯಾಕೆ ಬ್ರಾಹ್ಮಣರ ಮದುವೆ ಆದ್ರಿ.? ನಿಮ್ಮ ಮನೆಯ ಮಕ್ಕಳನ್ನು ಯಾಕೆ ಬ್ರಾಹ್ಮಣರಿಗೆ ಮದುವೆ ಮಾಡಿಕೊಟ್ಟಿದ್ದೀರಿ. ಮುಸ್ಲಿಂರ ಮೇಲೆ ಪ್ರೀತಿ ಇದ್ದರೆ ಅವರಿಗೆ ಕೊಟ್ಟು ಮದುವೆ ಮಾಡಿ ಕೊಡಬೇಕಿತ್ತು. ಇಲ್ಲ ದಲಿತರಿಗೆ ಯಾಕೆ ನೀವು ಮದುವೆ ಮಾಡಿ ಕೊಟ್ಟಿಲ್ಲ. ದಲಿತರಿಗೆ ನಿಮ್ಮ ಮನೆಯ ಮಕ್ಕಳನ್ನು ಸಾಕುವ ಶಕ್ತಿ ಇಲ್ಲವಾ? ಎಂದು ಜಾತಿಯನ್ನು ಮಧ್ಯೆ ತಂದು ಟೀಕಿಸಿದರು.
ಅಪ್ಪ ಅಲ್ಲಿ ಮಾತಾಡ್ತಾರೆ. ಮಗ ಇಲ್ಲಿ ಸಮರ್ಥನೆ ಮಾಡಿಕೊಳ್ತಾರೆ. ಹೇಟ್ ಸ್ಪೀಚ್ ಅಡಿ ಅಪ್ಪ ಮಗನನ್ನು ತಿಹಾರ್ ಜೈಲಿಗೆ ಹಾಕಿ. ಹತ್ತು ವರ್ಷಗಳ ಕಾಲ ಜೈಲಿಗೆ ಹಾಕುವ ಅವಕಾಶ ಇದೆ. ಮಲ್ಲಿಕಾರ್ಜುನ ಖರ್ಗೆಗೆ ಪಾಪ ವಯಸ್ಸು ಆಗಿದೆ. ಅವರಿಗೆ ರೆಸ್ಟ್ ಬೇಕಿದೆ ತಿಹಾರ್ ಜೈಲಿಗೆ ಹಾಕಿದರೆ ಅಲ್ಲಿ ವಿಶ್ರಾಂತಿ ಸಿಗುತ್ತದೆ. ಅಲ್ಲಿ ಅವರ ಮಗನ ಸಹ ಕಳಿಸಿ. ಅಪ್ಪನ ನೋಡಿಕೊಳ್ಳಲು ಮಗನು ಇದ್ದ ಹಾಗೆ ಆಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಮೇಲೆ ಸುಮೋಟೊ ಕೇಸ್ ಹಾಕಬೇಕು. ಚಲವಾದಿ ನಾರಾಯಣಸ್ವಾಮಿ ಅವರ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಗ್ವಾದ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ