ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರಾಕ್ಷಸರನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಬಂದಿದ್ದಾರೆ'ಮಹಿಷಾ ದಸರಾಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರ, ಮಹಿಷಾ ದಸರಾ ಅಯೋಜಕರ ವಿರುದ್ದ ಕಿಡಿಕಾರಿದ ನಮೋ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.
ದಾವಣಗೆರೆ (ಅ.12): 'ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರಾಕ್ಷಸರನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಬಂದಿದ್ದಾರೆ'ಮಹಿಷಾ ದಸರಾಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರ, ಮಹಿಷಾ ದಸರಾ ಅಯೋಜಕರ ವಿರುದ್ದ ಕಿಡಿಕಾರಿದ ನಮೋ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.
ಇಂದು ದಾವಣಗೆರೆಯಲ್ಲಿ ಜನಗಣಮನ ನಮೋ 2.O ಬೈಕ್ ರ್ಯಾಲಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಇಂಥ ಕೆಲಸಗಳು ಹೊಸದೇನಲ್ಲ. ರಾಕ್ಷಸ ಪ್ರವೃತ್ತಿ ಮಾಡಿದವರನ್ನೇ ಅವರೆಲ್ಲ ಸಮರ್ಥನೆ ಮಾಡಿಕೊಂಡು ಬಂದಿದ್ದಾರೆ. ಅದು ಯಾವಾಗಲೂ ರಾಕ್ಷಸರ ಪರ. ಇತ್ತ ಮಹಿಷಾ ದಸರಾ ಬೆಂಬಲಿಸುತ್ತೆ ಅತ್ತ ಇಸ್ರೇಲ್ ಹಮಾಸ್ ಯುದ್ಧದಲ್ಲಿ ಪ್ಯಾಲೆಸ್ತೇನ್ ಹಮಾಸ್ ಉಗ್ರರರನ್ನು ಬೆಂಬಲಿಸುತ್ತೆ ಎಂದು ಕಿಡಿಕಾರಿದರು. ಮಹಿಷಾ ದಸರಾಕ್ಕೆ ಅನುಮತಿ ನೀಡಿರುವುದರಿಂದ ಮೈಸೂರು ಜನತೆ ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವುದು ಸರಿಯಾಗೇ ಇದೆ.
ವಿವಾದಿತ ಮಹಿಷ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ