ಬೆಂಗಳೂರಲ್ಲಿ ಬಾಂಬ್‌ ಸ್ಫೋಟಿಸಲು 1 ತಿಂಗಳ ಹಿಂದೆಯೇ ಜಾಗ ಗುರುತಿಸಿದ್ದ..!

By Kannadaprabha NewsFirst Published Sep 23, 2020, 7:26 AM IST
Highlights

2008ರಲ್ಲಿ ನಡೆದಿದ್ದ ಸ್ಫೋಟ ಪ್ರಕರಣ| ಸ್ಫೋಟಿಸಲು ಉದ್ದೇಶಿಸಿದ್ದ ಜಾಗಗಳ ರೂಟ್‌ ಮ್ಯಾಪ್‌ ರೂಪಿಸಿದ್ದ|  ಬಾಂಬ್‌ ತಯಾರಿಸಲು ಕಚ್ಚಾವಸ್ತು ಸಂಗ್ರಹಿಸಿ ಕೊಟ್ಟಿದ್ದ| ಬಂಧಿತ ಶಂಕಿತ ಉಗ್ರನ ತನಿಖೆ ವೇಳೆ ಬಹಿರಂಗ| 
 

ಬೆಂಗಳೂರು(ಸೆ.23): ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ವಿಧ್ವಂಸ ಕೃತ್ಯಕ್ಕೆ ಒಂದು ತಿಂಗಳ ಮುನ್ನವೇ ನಗರದಲ್ಲಿ ಬಾಂಬ್‌ ಸ್ಫೋಟಕಕ್ಕೆ ಶಂಕಿತ ಉಗ್ರ ಶೋಯೆಬ್‌ ಜಾಗಗಳ ಗುರುತು ಮಾಡಿದ್ದ ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕೇರಳದಲ್ಲಿ ಸೋಮವಾರ ಬಂಧಿಸಿದ ಶಂಕಿತ ಉಗ್ರನನ್ನು ನಗರಕ್ಕೆ ಕರೆತಂದ ಸಿಸಿಬಿ ಎಟಿಎಸ್‌ ವಿಭಾಗದ ಎಸಿಪಿ ವೇಣುಗೋಪಾಲ್‌ ಅವರು, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಸಲುವಾಗಿ ವಶಕ್ಕೆ ಪಡೆದಿದ್ದಾರೆ.

Latest Videos

2008ರ ಸೆಪ್ಟೆಂಬರ್‌ನಲ್ಲಿ 25ರಂದು ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟವಾಗಿತ್ತು. ಈ ಕೃತ್ಯಕ್ಕೆ ಪೂರ್ವ ತಯಾರಿ ನಡೆಸಿದ್ದ ಶೋಯೆಬ್‌, ಒಂದು ತಿಂಗಳ ಮುನ್ನವೇ ನಗರಕ್ಕೆ ಬಂದು ಬಾಂಬ್‌ ಸ್ಫೋಟಕಕ್ಕೆ ಸೂಕ್ತ ಸ್ಥಳಗಳನ್ನು ಪತ್ತೆ ಹಚ್ಚಿ ನಿಗದಿಪಡಿಸಿದ್ದ. ಆನಂತರ ಈ ಜಾಗಗಳ ರೂಟ್‌ ಮ್ಯಾಪ್‌ ಸಹ ರೂಪಿಸಿ ತನ್ನ ತಂಡದ ಇತರೆ ಸದಸ್ಯರಿಗೆ ರವಾನಿಸಿದ್ದ. ಇದಾದ ಮೇಲೆ ಬಾಂಬ್‌ ತಯಾರಿಕೆಗೆ ಬೇಕಾಗಿದ್ದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ತಂಡಕ್ಕೆ ಪೂರೈಸಿದ್ದ ಎಂದು ಸಿಸಿಬಿ ಮೂಲಗಳು ಹೇಳಿವೆ.

ಡಿಜೆ-ಕೆಜಿ ಹಳ್ಳಿ ಗಲ​ಭೆಯ 2 ಕೇಸ್‌ ಎನ್‌ಐಎ ತನಿಖೆ

ಈ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿ ನಡೆಸಿದ್ದ ರಹಸ್ಯ ಸಭೆಗಳಲ್ಲಿ ಶೋಯೆಬ್‌ ಭಾಗವಹಿಸಿದ್ದ. ಪ್ರಕರಣದ ಮೊದಲ ಆರೋಪಿ ಜತೆ ನೇರ ಸಂಪರ್ಕದಲ್ಲಿದ್ದ ಶೋಯೆಬ್‌, ತನ್ನ ಸರಚರರ ಜತೆ ಬೆಂಗಳೂರಿಗೆ ಬಂದು ಜೀವಂತ ಬಾಂಬ್‌ಗಳನ್ನು ಸಾಗಾಟ ಮಾಡಿದ್ದ. ಬಳಿಕ ನಗರದ 9 ಕಡೆಗಳಲ್ಲಿ ಬಾಂಬ್‌ ಅಳವಡಿಸಿದ್ದ ಆರೋಪವಿದೆ. ಈಗಾಗಲೇ ಸಾಕಷ್ಟುಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮತ್ತಷ್ಟುವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಸರಣಿ ಬಾಂಬ್‌ ಸ್ಫೋಟ ಬಳಿಕ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೋಮವಾರ ಸ್ವದೇಶಕ್ಕೆ ಮರಳುವ ಮಾಹಿತಿ ಪಡೆದು ಸಿಸಿಬಿ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿದ್ದವು. ಕೊನೆಗೆ 12 ವರ್ಷಗಳ ಬಳಿಕ ಶಂಕಿತ ಉಗ್ರ ಸಿಸಿಬಿ ಬಲೆಗೆ ಬಿದ್ದಿದ್ದಾನೆ.
 

click me!