ಹೊಸ ವರ್ಷ ಬರಮಾಡಿಕೊಳ್ಳುವವರಿಗೆ ಸಿಎಂ ವಿಶೇಷ ಮನವಿ

Published : Dec 31, 2019, 07:43 PM IST
ಹೊಸ ವರ್ಷ ಬರಮಾಡಿಕೊಳ್ಳುವವರಿಗೆ ಸಿಎಂ ವಿಶೇಷ ಮನವಿ

ಸಾರಾಂಶ

ಇನ್ನೇನು 2019ಕ್ಕೆ ಗುಡ್ ಬೈ ಹೇಳಿ 2020ನ್ನು ಆಗಮಿಸಲು ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಎಲ್ಲರು ಸಜ್ಜಾಗಿದ್ದಾರೆ. ಅದರಲ್ಲೂ ಬೆಂಗಳೂರಿನ ಎಂಜಿ ರೋಡ್, ಇಂದಿರಾ ನಗರ ಸೇರಿದಂತೆ ನಾನಾ ಕಡೆ ಲೈಟಿಂಗ್ಸ್ ಝಗಮಗಿಸುತ್ತಿವೆ. ಇದರ ಮಧ್ಯೆ ಬಿಎಸ್ ವೈ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಏನದು..?

ಬೆಂಗಳೂರು, [ಡಿ.31]: ಜಗತ್ತಿನಾದ್ಯಂತ ಜನರು 2020ನೇ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದು ಈಗಿಂದಲೇ ಸಂಭ್ರಮ ಶುರುವಾಗಿದೆ.

ಇನ್ನು ಕರ್ನಾಟದ ನಾನಾ ಭಾಗಗಳಲ್ಲಿ ಯುವಕರು ವಿಶೇಷವಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿರುವ ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

2019 Flashback:1 ವರ್ಷದಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನೇನಾಯ್ತು?

 ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿರುವ ನಾಡಿನ ಸಮಸ್ತ ಜನತೆಯಲ್ಲಿ ಕಳಕಳಿಯ ಪ್ರಾರ್ಥನೆ. ಸಭ್ಯತೆ ಕಾಪಾಡಿಕೊಳ್ಳಿ, ಆಚರಣೆ ಹಿತಮಿತವಾಗಿರಲಿ. 

ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದಿರಿ. ಸುರಕ್ಷಿತವಾಗಿ ಸಿಹಿ ನೆನಪುಗಳೊಂದಿಗೆ ಈ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನು ನಿಮ್ಮ ಸುವರ್ಣ ನ್ಯೂಸ್.ಕಾಂ ವಿನಂತಿ ಇಷ್ಟೇ, ನ್ಯೂ ಇಯರ್ ಅನ್ನು ಹೊಸತನದಿಂದ ಬರಮಾಡಿಕೊಳ್ಳಿ. ಸುರಕ್ಷಿತವಾಗಿ ಆಚರಿಸಿ. ಈ ಹೊಸ ವರ್ಷ ಎಲ್ಲರ ಬಾಳಲ್ಲೂ ಹರುಷ ತರಲಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!