ಲಾಕ್‌ಡೌನ್: ಕರ್ತವ್ಯಕ್ಕೆ ಹಾಜರಾಗದಿದ್ದರೂ ಸಂಬಳ| ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯನ್ನು ಜು.14ರಿಂದ 22ರ ವರೆಗೆ ಲಾಕ್‌ಡೌನ್| ಬಿಎಂಟಿಸಿಗೆ ಕಚೇರಿ ಸಿಬ್ಬಂದಿ ಹೊರತುಪಡಿಸಿ ಚಾಲಕ, ನಿರ್ವಾಹಕ ಸೇರಿ ಇತರರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ|
ಬೆಂಗಳೂರು(ಆ.13): ಲಾಕ್‌ಡೌನ್ ಅವಧಿಯಲ್ಲಿ ಸೇವೆ ಸಲ್ಲಿಸದಿದ್ದರೂ ಎಲ್ಲ ಸಿಬ್ಬಂದಿಗೆ ವೇತನವನ್ನು ನೀಡಲು ಬಿಎಂಟಿಸಿ ನಿರ್ಧರಿಸಿದೆ.
ಸೋಂಕಿನ ನಿಯಂತ್ರಣಕ್ಕಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯನ್ನು ಜು.14ರಿಂದ 22ರ ವರೆಗೆ ಲಾಕ್‌ಡೌನ್ ಮಾಡಿದ ಪರಿಣಾಮ ಬಿಎಂಟಿಸಿ ಸೇರಿ ಎಲ್ಲ ರೀತಿಯ ಸಾರಿಗೆ ಸೇವೆಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಬಿಎಂಟಿಸಿಗೆ ಕಚೇರಿ ಸಿಬ್ಬಂದಿ ಹೊರತುಪಡಿಸಿ ಚಾಲಕ, ನಿರ್ವಾಹಕ ಸೇರಿ ಇತರರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.
undefined
ಬಸ್‌ನಲ್ಲಿ ಸೈಕಲ್‌ನೊಂದಿಗೆ ಪ್ರಯಾಣಿಸಿ: ಏನಿದು ಹೊಸ ಯೋಜನೆ?
ಕೆಲಸ ಮಾಡದಿದ್ದರೂ ವೇತನ ನೀಡುವ ಕುರಿತಂತೆ ಅಧಿಕಾರಿಗಳು ಚರ್ಚಿಸಿದ ನಂತರ ಇದೀಗ ಕರ್ತವ್ಯಕ್ಕೆ ಹಾಜರಾಗದಿದ್ದರೂ, ನೌಕರರಿಗೆ ವೇತನ ನೀಡಲು ಬಿಎಂಟಿಸಿ ಮುಂದಾಗಿದೆ. ಆದರೆ, ಲಾಕ್‌ಡೌನ್ ಅವಧಿಯಲ್ಲಿ ರಜೆಗೆ ಅರ್ಜಿ ಸಲ್ಲಿಸಿದ್ದವರಿಗೆ ರಜೆ ಮಂಜೂರು ಮಾಡುವುದಾಗಿಯೂ ಹೇಳಿದೆ.