ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಿ, ಘೇರಾವ್ ಗೆ ಯತ್ನಿಸಿದ ಘಟನೆ ಹೊರವಲಯ ಬೋಂದೆಲ್ ಬಳಿ ಇಂದು ನಡೆಯಿತು.
ಮಂಗಳೂರು (ಫೆ.17): ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಿ, ಘೇರಾವ್ ಗೆ ಯತ್ನಿಸಿದ ಘಟನೆ ಹೊರವಲಯ ಬೋಂದೆಲ್ ಬಳಿ ಇಂದು ನಡೆಯಿತು.
ಅಡ್ಯಾರ್ ನ ಸಹ್ಯಾದಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ಕಾರನ್ನು ತಡೆದು ಘೇರಾವ್ ಹಾಕಲು ಯತ್ನಿಸಿದರು.
ಬಿಜೆಪಿಯವ್ರು ಬರ್ತಾ ಬರ್ತಾ ಸಂವಿಧಾನ ವಿರೋಧಿಗಳಾಗುತ್ತಿದ್ದಾರೆ: ಸಚಿವ ಎನ್‌ಎಸ್ ಬೋಸರಾಜು ಕಿಡಿ
ಶಾಸಕ ಭರತ್ ಶೆಟ್ಟಿ ಹಾಗೂ ವೇದವ್ಯಾಸ್ ಕಾಮತ್ ಮೇಲೆ ವಿನಾಕಾರಣ ಎಫ್ ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
| Karnataka: BJP Yuva Morcha workers show black flags at CM Siddaramaiah in Bondel, outskirt of Mangaluru.
CM was on the way to a public rally organised by KPCC in Mangaluru. The Yuva Morcha workers were showing black flags to mark their protest on FIR registered against… pic.twitter.com/AdvZejk2OW