'ಯತ್ನಾಳರದು ಬಾಯಿಯದ್ದೇ ಸಮಸ್ಯೆ..', ಮುರುಗೇಶ ನಿರಾಣಿ ಹೇಳಿದ್ದೇನು?

Published : Apr 12, 2025, 04:59 PM ISTUpdated : Apr 12, 2025, 05:20 PM IST
'ಯತ್ನಾಳರದು ಬಾಯಿಯದ್ದೇ ಸಮಸ್ಯೆ..', ಮುರುಗೇಶ ನಿರಾಣಿ ಹೇಳಿದ್ದೇನು?

ಸಾರಾಂಶ

ಬಸನಗೌಡ ಪಾಟೀಲ ಯತ್ನಾಳ ನೂರಾರು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಅವರ ಬಾಯಿ ಒಂದೇ ಸಮಸ್ಯೆ ಇರುವುದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ವಿಶ್ಲೇಷಿಸಿದರು.

ಹುಬ್ಬಳ್ಳಿ (ಏ.12): ಬಸನಗೌಡ ಪಾಟೀಲ ಯತ್ನಾಳ ನೂರಾರು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಅವರ ಬಾಯಿ ಒಂದೇ ಸಮಸ್ಯೆ ಇರುವುದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ವಿಶ್ಲೇಷಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾವಣ ಬಹಳ ಒಳ್ಳೆಯವನಿದ್ದ. ಹೀಗಾಗಿಯೇ ಆತ ಆತ್ಮಲಿಂಗ ಪಡೆಯಲು ಯಶಸ್ವಿಯಾಗಿದ್ದ. ಆದರೆ, ಸೀತಾಮಾತೆ ಅಪಹರಣ ಮಾಡಿ ಕೆಟ್ಟ. ಇದರಿಂದ ರಾವಣನ ಒಳ್ಳೆಯ ಕೆಲಸಗಳೆಲ್ಲ ಗೌಣವಾದವು. ಅದೇ ರೀತಿ ಯತ್ನಾಳ ಕೂಡ ನೂರಾರು ಒಳ್ಳೆಯ ಕೆಲಸ ಮಾಡಿದ್ದುಂಟು. ಚೌಕಟ್ಟು ಮೀರಿ ಮಾತನಾಡಿದ್ದೆ ಅವರಿಗೆ ಮುಳುವಾಯಿತು ಎಂದರು.
ಯತ್ನಾಳ ಮರಳಿ ಬಿಜೆಪಿ ಸೇರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಅದು ನಮ್ಮ ಕೈಯಲ್ಲಿ ಇಲ್ಲ. ಅದನ್ನು ಹೈಕಮಾಂಡ್‌ ನಿರ್ಧಾರ ಮಾಡಬೇಕು ಎಂದರು.

ಇದನ್ನೂ ಓದಿ: ಕಾವಿ ಬಿಚ್ಚಿ ಖಾದಿ ತೊಡಲಿ: ಶ್ರೀಗಳ ವಿರುದ್ಧ ಕಾಶೆಪ್ಪನವರ್ ಕಿಡಿ!

ನನಗೆ ಯಾರೂ ವೈರಿ ಇಲ್ಲ. ಯಾರೊಂದಿಗೆ ವೈರತ್ವ ಇಟ್ಟುಕೊಳ್ಳಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮುರುಗೇಶ್ ನಿರಾಣಿ ಬಿಜೆಪಿ ‌ಅಧ್ಯಕ್ಷರಾಗುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿ.ವೈ. ವಿಜಯೇಂದ್ರ ಸದ್ಯ ರಾಜ್ಯಾಧ್ಯಕ್ಷ ಇದ್ದಾರೆ. ಮುಂದಿನ ಒಂದೂವರೆ ವರ್ಷ ಅವರೇ ಇರುತ್ತಾರೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದರು.

ಇದನ್ನೂ ಓದಿ: ಯತ್ನಾಳ್ ಬೆಂಬಲಿಗರ ಕೃತ್ಯ ಎಂದ ಮುಸ್ಲಿಂ ಮುಖಂಡರು 

ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳ ನಡವಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಸಮಾಜದ ನೂರು ಪ್ರಮುಖರನ್ನು ಕರೆದು ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಯಾವುದೇ ಸ್ವಾಮೀಜಿ ಇರುವುದಿಲ್ಲ. ಸಭೆಗೆ ಯಾವುದೇ ಪೀಠದ ಸ್ವಾಮೀಜಿಗಳನ್ನು ಕರೆಯಲ್ಲ. ಬರೀ ಟ್ರಸ್ಟ್‌ ಹಾಗೂ ಸಮಾಜದ ಹಿರಿಯರು ಮಾತ್ರ ಸಭೆಯಲ್ಲಿರುತ್ತಾರೆ. ರಾಜ್ಯದಲ್ಲಿ 80 ಲಕ್ಷ ವೀರಶೈವ ಪಂಚಮಸಾಲಿ ಜನಸಂಖ್ಯೆ ಇದೆ. ಸಮಾಜಕ್ಕಾಗಿ ಓರ್ವ ಸ್ವಾಮೀಜಿ ಬೇಕು ಎಂಬ ಕಾರಣಕ್ಕೆ 2008ಕ್ಕೆ ಪೀಠ ಹುಟ್ಟು ಹಾಕಲಾಗಿತ್ತು. ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಒಂದೇ ಪೀಠ ಆಗಬೇಕಿತ್ತು. ಆದರೆ ಮೂರು ಆಗಿವೆ. ಇದೀಗ ಐದು ಪೀಠ ಮಾಡಬೇಕು ಎನ್ನುವ ಉದ್ದೇಶವೂ ಇದೆ. ಬರುವ ಒಂದು ವಾರದಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ ಎಂದರು. ತಪ್ಪುಗಳಾಗುವುದು ಸಹಜ. ಅವುಗಳನ್ನು ತಿದ್ದಿಕೊಂಡು ಹೋಗಬೇಕಷ್ಟೇ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ