ತುಂಗಭದ್ರಾ ಜಲಾಶಯ ಇತಿಹಾಸದಲ್ಲಿಯೇ ದೊಡ್ಡ ದುರಂತ: ಶಾಸಕ ಹಿಟ್ನಾಳ

Published : Aug 12, 2024, 12:49 PM IST
ತುಂಗಭದ್ರಾ ಜಲಾಶಯ ಇತಿಹಾಸದಲ್ಲಿಯೇ ದೊಡ್ಡ ದುರಂತ: ಶಾಸಕ ಹಿಟ್ನಾಳ

ಸಾರಾಂಶ

ತುಂಗಭದ್ರಾ ಜಲಾಶಯ ಇತಿಹಾಸದಲ್ಲಿಯೇ ದೊಡ್ಡ ದುರಂತವಾಗಿದ್ದು, ಇದನ್ನು ಕೇಳಿದ ನಮಗೆ ನಿಜಕ್ಕೂ ಶಾಕ್ ಆಗಿತ್ತು, ಆದಷ್ಟು ಬೇಗನೆ ದುರಸ್ತಿಯಾಗಬೇಕಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

 ಕೊಪ್ಪಳ (ಆ.12) : ತುಂಗಭದ್ರಾ ಜಲಾಶಯ ಇತಿಹಾಸದಲ್ಲಿಯೇ ದೊಡ್ಡ ದುರಂತವಾಗಿದ್ದು, ಇದನ್ನು ಕೇಳಿದ ನಮಗೆ ನಿಜಕ್ಕೂ ಶಾಕ್ ಆಗಿತ್ತು, ಆದಷ್ಟು ಬೇಗನೆ ದುರಸ್ತಿಯಾಗಬೇಕಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ತಡರಾತ್ರಿ ಮಾಹಿತಿ ದೊರೆಯುತ್ತಿದ್ದಂತೆ ಅಷ್ಟೊತ್ತಿನಲ್ಲಿಯೇ ಆಗಮಿಸಿದ್ದೇನೆ, ಇಡೀ ರಾತ್ರಿ ಇಲ್ಲಿಯೇ ಇದ್ದು, ಪರಿಹಾರ ಏನು ಎನ್ನುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ, ಇಂಥ ದುರಂತ ಕನಸಿನಲ್ಲಿಯೂ ಊಹೆ ಮಾಡಿರಲಿಲ್ಲ. ಈಗೇನಿದ್ದರೂ ಮೊದಲು ದುರಸ್ತಿ ಕಾರ್ಯ ಆಗಬೇಕಾಗಿದೆ ಎಂದರು.

ಡ್ಯಾಂ ಗೇಟ್‌ ಒಡೆದ ಸುದ್ದಿ ಕೇಳಿ ಎದೆ ಧಸಕ್‌ ಅಂತು, ಎದ್ನೊ ಬಿದ್ನೋ ಅಂತಾ ಜಲಾಶಯದ ಕಡೆ ಓಡಿದೆ: ಸಚಿವ ಶಿವರಾಜ ತಂಗಡಗಿ

ತಡರಾತ್ರಿ ಜಲಾಶಯಕ್ಕೆ ಬಂದು, ಕ್ರಸ್ಟ್ ಗೇಟ್‌ ಮುರಿದು, ನೀರು ಹೋಗುತ್ತಿರುವುದನ್ನು ನೋಡಿ ಭಯವಾಗಿತ್ತು. ಇನ್ನೇನು ಏನೋ ಆಗಿಯೇ ಬಿಡುತ್ತದೆ ಎನ್ನುವಂತೆ ಜಲಾಶಯದಲ್ಲಿ ನಡುಗುತ್ತಿತ್ತು, ನಾವು ನಿಂತಿರುವ ನೆಲವೇ ಅದುರುತ್ತಿತ್ತು, ಆದರೂ ಅಧಿಕಾರಿಗಳು ತಜ್ಞರೊಂದಿಗೆ ಚರ್ಚೆ ಮಾಡಿ, ಕ್ರಸ್ಟ್ ಗೇಟ್ ಒಂದಕ್ಕೆ ನೀರು ಹೋಗುತ್ತಿದ್ದರಿಂದ ಹೀಗಾಗುತ್ತದೆ, ಉಳಿದ ಕ್ರಸ್ಟ್ ಗೇಟ್ ತೆಗೆದು ನೀರು ಬಿಡುವಂತೆ ಸಲಹೆ ಬಂದಿದ್ದರಿಂದ ಅದನ್ನು ಅಧಿಕಾರಿಗಳು ಕಾರ್ಯಗತ ಮಾಡಿದ ಮೇಲೆ ಸಮಸ್ಯೆ ಒಂಚೂರು ಕಡಿಮೆಯಾಯಿತು. ಆದರೂ ಆತಂಕ ಇದ್ದೇ ಇತ್ತು.

ತುಂಗಾಭದ್ರ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ತುಂಗಾಭದ್ರ ಜಲಾಶಯದ ಕ್ರಸ್ಟ್ಗೇಟ್ ನಂ. 19 ಶನಿವಾರ ತಡರಾತ್ರಿ ಚೈನ್ ಲಿಂಕ್ ಮುರಿದಿದ್ದು, ನದಿಗೆ ೬೦ ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಈ ಕುರಿತು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಅಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುತ್ತದೆ. ಈ ಸಂದರ್ಭದಲ್ಲಿ ಜಲಾಶಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಸಾರ್ವಜನಿಕರು ಅಣೆಕಟ್ಟು ವೀಕ್ಷಣೆಗೆ ಬರುತ್ತಿದ್ದು, ಜಲಾಶಯದ ಭದ್ರತೆ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ವಹಿಸುವುದು ಅವಶ್ಯಕವಾಗಿರುತ್ತದೆ. ಹಾಗಾಗಿ ತಜ್ಞರ ಸಲಹೆ ಮೇರೆಗೆ ಜಲಾಶಯದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆ ಸುತ್ತ-ಮುತ್ತ ಇರುವ ಸೇತುವೆಗಳ ವ್ಯಾಪ್ತಿ ಪ್ರದೇಶದಲ್ಲಿ ಸಾರ್ವಜನಿಕರು ಸೇರದಂತೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ೨೦೨೩ ಕಲಂ 163 ರಂತೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ