ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ರಾಜೀನಾಮೆಗೆ ಬಿಜೆಪಿ ಆಗ್ರಹ. ಸಚಿವ ಸತೀಶ್ ಜಾರಕಿಹೊಳಿ, ಆರೋಪ ನಿಜವಾದರೆ ರಾಜೀನಾಮೆ ಪಡೆಯುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ತನಿಖೆ ಬಳಿಕ ಸತ್ಯ ಹೊರಬೀಳಲಿದೆ ಎಂದಿದ್ದಾರೆ.
ಬೆಂಗಳೂರು (ಜ.2) ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಸಚಿವರ ರಾಜೀನಾಮೆಗೆ ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ರಾಜೀನಾಮೆ ಪಡೆಯುವ ಕುರಿತು ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಂಬಂಧ ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, 'ಆರೋಪ ನಿಜವಾದ್ರೆ ರಾಜೀನಾಮೆ ಪಡೆಯುವ ಕುರಿತು ನೋಡೋಣ. ಅದಕ್ಕೂ ಮೊದಲ ಪ್ರಕರಣದ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ.
ದಲಿತ ಸಮುದಾಯದ ನಾಯಕ ಪ್ರಿಯಾಂಕ್ ಖರ್ಗೆ ಐಟಿಬಿಟಿ ಸಚಿವನಾಗಿದ್ದಕ್ಕೆ ಬಿಜೆಪಿಗೆ ಅಸೂಯೆ: ಡಿಕೆ ಶಿವಕುಮಾರ್
ಯಾವುದೋ ಒಂದಲ್ಲ, ಒಂದು ವಿಚಾರದಲ್ಲಿ ಬಿಜೆಪಿ ರಾಜೀನಾಮೆ ಕೇಳುತ್ತೆ. ಎಲ್ಲರೂ ರಾಜೀನಾಮೆ ಕೊಡುತ್ತಾ ಹೋದರೆ ಮಂತ್ರಿ ಮಂಡಲ ಖಾಲಿಯಾಗುತ್ತೆ. ಪ್ರಕರಣ ತನಿಖಾ ಹಂತದಲ್ಲಿರಬೇಕು, ಆರೋಪ ನಿಜವಾಗಿರಬೇಕು. ಆಗ ಒತ್ತಡ ಹಾಕಿದ್ರೆ ಸರಿ ಎನ್ನಬಹುದು. ಎಲ್ಲದಕ್ಕೂ ರಾಜೀನಾಮೆ ಕೇಳೋದು ಎಷ್ಟು ಸರಿ ಅನ್ನೋದು ಅವರೇ ಯೋಚಿಸಬೇಕು. ಈಶ್ವರಪ್ಪ ಪ್ರಕರಣವನ್ನ ಸ್ವತಃ ಗುತ್ತಿಗೆದಾರ ಸಂತೋಷ್ ಅವರೇ ಹೇಳಿದ್ದು. ಕೆಲಸ ಮಾಡಿದ್ದೀನಿ, ಬಿಲ್ ಕೊಡಿ ಅಂತ ನೂರಾರು ಬಾರೀ ಭೇಟಿ ಮಾಡಿದ್ರು. ಅವರ ಹೆಸರನ್ನ ಬರೆದು ಆತ್ಮಹತ್ಯೆ ಮಾಡಿಕೊಂಡರು. ಆ ಪ್ರಕರಣಕ್ಕೂ ಇದಕ್ಕೂ ವ್ಯತ್ಯಾಸ ಇದೆ, ಲಿಂಕ್ ಮಾಡೋಕೆ ಆಗೊಲ್ಲ. ತನಿಖೆ ಆಗ್ತಾ ಇದೆ ಆಗಲಿ, ಸಿಎಂ ಇದ್ದಾರೆ, ಸರ್ಕಾರ ಇದೆ ಎಲ್ಲ ವಿಚಾರಣೆ ಆಗುತ್ತೆ ಎಂದರು.
ದಲಿತ ಸಮುದಾಯದ ನಾಯಕ ಪ್ರಿಯಾಂಕ್ ಖರ್ಗೆ ಐಟಿಬಿಟಿ ಸಚಿವನಾಗಿದ್ದಕ್ಕೆ ಬಿಜೆಪಿಗೆ ಅಸೂಯೆ: ಡಿಕೆ ಶಿವಕುಮಾರ್
ಸಚಿನ್ ಪಾಂಚಾಳ ಗುತ್ತಿಗೆದಾರನಲ್ಲ ಎಂಬ ವಿಚಾರಕ್ಕೆ, 'ಆ ಬಗ್ಗೆ ನನಗೆ ಮಾಹಿತಿ ಇಲ್ಲ,ಯಾವ ಕಾಮಗಾರಿಗೆ ಟೆಂಡರ್ ಆಗಿದೆ, ಬಾಕಿ ಬಿಲ್ ಏನಿದೆ ಎಂಬ ಮಾಹಿತಿ ಇಲ್ಲ. ವಿಚಾರಣೆ ಬಳಿಕ ಎಲ್ಲವೂ ಹೊರಗಡೆ ಬರಲಿದೆ ಎಂದರು ಇದೇ ವೇಳೆ ಸಚಿವ ಸಂಪುಟ ಪುನರ್ ರಚನೆ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನನಗೆ ಸಂಪುಟ ಪುನರ್ ರಚನೆ ಆಗುವ ಕುರಿತು ಮಾಹಿತಿ ಇಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಬಳಿಯೇ ಕೇಳಬೇಕು. ಆ ವಿಚಾರ ಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇಲಾಖೆಯ ಕೆಲಸ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೈಕಮಾಂಡ್ ನಮ್ಮ ಬಳಿ ರಿಪೋರ್ಟ್ ಕೇಳಿತ್ತು ಕೊಟ್ಟಿದ್ದೀವಿ. ಸಚಿವರೆಲ್ಲ ಅವರವರ ಕಾರ್ಯ ವೈಖರಿ ಬಗೆ ರಿಪೋರ್ಟ್ ನೀಡಿದ್ದಾರೆ ಎಂದರು.