ರಾಜ್ಯ ಸರ್ಕಾರ, ಪೊಲೀಸರ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ: ಸಿಬಿಐ ತನಿಖೆಗೆ ಒತ್ತಾಯಿಸಿದ ಸಚಿನ್ ಕುಟುಂಬ

By Ravi Janekal  |  First Published Dec 30, 2024, 4:28 PM IST

ಬೀದರ್‌ನ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರ ಮುಚ್ಚಿಹಾಕುವ ಯತ್ನ ನಡೆಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.


ಬೀದರ್ (ಡಿ.30) : ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನಿಂದ ಕೊಲೆ ಬೆದರಿಕೆ ಹಿನ್ನೆಲೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬೀದರ್ ಗುತ್ತಿಗೆದಾರ ಸಚಿನ್ ಪಂಚಾಳ ಪ್ರಕರಣವನ್ನು ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿಹಾಕುವ ಯತ್ನ ನಡೆಸಿದ್ದಾರೆಂದು ಮೃತನ ಕುಟುಂಬಸ್ಥರು ಆರೋಪಿದ್ದಾರೆ.

ಆರೋಪಿ ರಾಜು ಕಪನೂರು ಸಹೋದರ ಪ್ರಕಾಶ್ ದಾಖಲೆ ಬಿಡುಗಡೆ ಮಾಡಿದ ವಿಚಾರಕ್ಕೆ ಮೃತ ಗುತ್ತಿಗೆದಾರನ ಸಹೋದರಿ ಪ್ರತಿಕ್ರಿಯಿಸಿದ್ದು, ನನ್ನ ತಮ್ಮ ಡೆತ್‌ ನೋಟ್‌ನಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾನೆ. ಯಾವ್ಯಾವ ಹಣ ಎಲ್ಲೆಲ್ಲಿ ವರ್ಗಾವಣೆಯಅಗಿದೆ. ಯಾರು ಕೊಲೆ ಬೆದರಿಕೆ ಹಾಕಿದ್ದಾರೆ, ಸಾವಿಗೆ ಯಾರು ಕಾರಣ ಎಂಬುದೆಲ್ಲ ಸ್ಪಷ್ತವಾಗಿ ಬರೆದಿದ್ದಅನೆ. ಹೀಗಿರುವಾಗ ನನ್ನ ತಮ್ಮ ಅತ್ಮಹತ್ಯೆ ಮಾಡಿಕೊಂಡ ಬಳಿಕ ದಾಖಲೆ ಮಾಡಿರೋದ್ಯಾಕೆ? ದಾಖಲೆ ಬಿಡುಗಡೆ ಮಾಡುವುದಿದ್ದರೆ ಮೊದಲ ದಿನವೇ ಮಾಡಬೇಕಿತ್ತಲ್ಲವೇ? ನನ್ನ ತಮ್ಮ 1 ಕೋಟಿ ಕೊಡಬೇಕಿತ್ತು ಅಂತಾ ಹೇಳ್ತಿದ್ದಾರೆ ಈಗ 60 ಲಕ್ಷ ರೂ. ಅಂತಾ ಹೇಳ್ತಿದ್ದಾರೆ. 60 ಲಕ್ಷ ರೂ. ದಾಖಲೆ ತೋರಿಸುತ್ತಿದ್ದಾರೆ, ಇನ್ನುಳಿದ 40 ಲಕ್ಷ ರೂ.ಗೆ ದಾಖಲೆ ಎಲ್ಲಿವೆ? ನನ್ನ ತಮ್ಮನ ಸಾವಿಗೆ  ಈ ಸರ್ಕಾರ, ಪೊಲೀಸರಿಂದ ನ್ಯಾಯ ಸಿಗುವ ಭರವಸೆ ಎಳ್ಳಷ್ಟೂ ಇಲ್ಲ ಎನ್ನುವ ಮೂಲಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದರು.

Tap to resize

Latest Videos

'ನೀವೆಲ್ಲ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಗುಲಾಮಗಿರಿ ಮಾಡಿ': ಸಚಿನ್ ಪಾಂಚಾಳ ಪ್ರಕರಣದಲ್ಲಿ ಪೊಲೀಸರ ನಡೆಗೆ ಛಲವಾದಿ ಆಕ್ರೋಶ

ತಪ್ಪು ಮಾಡಿಲ್ಲ ಎಂದರೆ ಸಿಬಿಐ ತನಿಖೆ ಎದುರಿಸಲಿ:

 ಅವರದ್ದು ತಪ್ಪಿಲ್ಲ ಎಂದರೆ ಸಿಬಿಐ ತನಿಖೆ ಎದುರಿಸಲಿ. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ತನಿಖಾ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಹಲವು ಪ್ರಕರಣಗಳು ಕಣ್ಣಮುಂದೆ ಇದೆ. ನನ್ನ ತಮ್ಮನ ಆತ್ಮಹತ್ಯೆಗೆ ಕಾರಣನಾದವನು ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತ ಸಹಾಯಕ. ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಇರುವುದಕ್ಕೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳದೇ ಕುಟುಂಬಸ್ಥರ ವಿರುದ್ಧವೇ ಕೆಟ್ಟದಾಗಿ ನಡೆದುಕೊಂಡರು. ಹೀಗಿರುವಾಗ ರಾಜ್ಯ ಪೊಲೀಸರ ತನಿಖೆಯಿಂದ ನ್ಯಾಯ ಸಿಗುವ ಯಾವ ಭರವಸೆಯೂ ಇಲ್ಲ. ನನ್ನ ತಮ್ಮನ ಸಾವಿಗೆ ನ್ಯಾಯ ಬೇಕು ಎಂದು ಸಿಬಿಐ ತನಿಖೆಗೆ ಒತ್ತಾಯಿಸಿದರು.

ಈ ಪೊಲೀಸರು ಎಷ್ಟು ಕ್ರೂರಿಗಳು ಸಾರ್…!; ಬಿಜೆಪಿ ನಿಯೋಗದ ಮುಂದೆ ಸಚಿನ್ ಕುಟುಂಬಸ್ಥರು ಶಾಕಿಂಗ್ ಹೇಳಿಕೆ!

ಇನ್ನು ಸಚಿವ ಈಶ್ವರ್ ಖಂಡ್ರೆ ಪರಿಹಾರ ಘೋಷಣೆ ಮಾಡಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಹೋದರಿ, ರಾಜ್ಯ ಸರ್ಕಾರ ಕೊಡುವ ಪರಿಹಾರ ನಮಗೆ ಬೇಕಾಗಿಲ್ಲ. ನನ್ನ ತಮ್ಮ ಸಾವಿಗೆ ನ್ಯಾಯ ಬೇಕು, ಆರೋಪಿಗಳಿಗೆ ಶಿಕ್ಷೆ ಆಗಬೇಕು. ಸಚಿವ ಈಶ್ವರ್ ಖಂಡ್ರೆ ಚೆಕ್ ಕೊಡೋಕೆ ಬಂದ್ರೂ ನಾವು ತಿರಸ್ಕರಿಸಿದ್ದೇವೆ. ನಿನ್ನೆ ಬಿಜೆಪಿ ನಿಯೋಗದವರು ಕೊಡೋಕೆ ಬಂದ್ರೂ ತಿರಸ್ಕರಿಸಿದ್ದೇವೆ. ನಮಗೆ ಹಣಕ್ಕಿಂತ ತಮ್ಮನ ಸಾವಿಗೆ ನ್ಯಾಯ ಸಿಗಬೇಕು. ಕೊಡೋದಾದ್ರೆ ನನ್ನ ತಮ್ಮನ ಸಾವಿಗೆ ನ್ಯಾಯ ಕೊಡಿ, ಪರಿಹಾರ ಹಣ ಅಲ್ಲ ಎಂದ ಮೃತ ಸಚಿನ್ ಸಹೋದರಿ.

click me!