ಬೆಂಗಳೂರಿನ ಪೀಣ್ಯ ಫ್ಲೈಓವರ್ ಮೇಲೆ 4 ದಿನ ಎಲ್ಲಾ ವಾಹನ ಸಂಚಾರ ಬಂದ್, ಬದಲಿ ಮಾರ್ಗ ಪಟ್ಟಿ

Published : May 01, 2026, 09:37 PM IST
Peenya Flyover

ಸಾರಾಂಶ

ಬೆಂಗಳೂರಿನ ಪೀಣ್ಯ ಫ್ಲೈಓವರ್ ನಾಲ್ಕು ದಿನ ಎಲ್ಲಾ ವಾಹನ ಸಂಚಾರ ಬಂದ್, ಬದಲಿ ಮಾರ್ಗ ಪಟ್ಟಿ ಬಿಡುಗಡೆ ಮಾಡಲಾಗಿದೆ. ಯಾವ ದಿನದಿಂದ ಫ್ಲೈಓವರ್ ಬಂದ್ ಮಾಡಲಾಗುತ್ತಿದೆ. ಪರ್ಯಾಯ ಮಾರ್ಗ ವಿವರ ಇಲ್ಲಿದೆ. 

ಬೆಂಗಳೂರು (ಮೇ.01) ಬೆಂಗಳೂರು ಸಂಚಾರ ಪೊಲೀಸರು ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಪ್ರೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ) ನಾಲ್ಕು ದಿನಗಳ ಕಾಲ ಬಂದ್ ಆಗುತ್ತಿದೆ. ಎಲ್ಲಾ ವಾಹನಗಳನ್ನು ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ನಿರ್ಬಂಧಿಸಲಾಗುತ್ತಿದೆ. ದುರಸ್ತಿ ಕಾಮಗಾರಿಗಳ ಟೆಸ್ಟಿಂಗ್ ಸಲುವಾಗಿ ನಾಲ್ಕು ದಿನ ಬಂದ್ ಮಾಡಲಾಗುತ್ತಿದೆ ಮೇ 5 ರ ಬೆಳಗ್ಗೆ 5 ಗಂಟೆಯಿಂದ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗುತ್ತಿದ್ದು, ಮೇ8 ರ ಬೆಳಗ್ಗೆ 11 ಗಂಟೆವರೆಗೆ ಬಂದ್ ಆಗಿರಲಿದೆ.

ಪೀಣ್ಯ ಫ್ಲೈಓವರ್ ಮೇಲೆ ಅಳವಡಿಸಲಾದ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಗಳ ದುರಸ್ತಿಗಳ ಪರಿಶೀಲನೆ ನಡೆಯಲಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರೀಕ್ಷೆ ನಡೆಸಲಿದೆ. ಮೇ 5 ರಿಂದ ಮೇ 8ರ ವರೆಗೆ ಪೀಣ್ಯ ಫ್ಲೈಓವರ್ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಫೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲೆತುವ ಮೇಲೆ ಕೆನ್ನಮೆಟಲ್ ವಿಡಿಯಾ Upper ramp ಎಸ್.ಆರ್.ಎಸ್ Down ramp ವರೆಗೆ ಎರಡು ಕಡೆಯಲ್ಲಿ ಫೈಓವರ್‌ ಮೇಲೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.

ಬದಲಿ ಮಾರ್ಗ ವ್ಯವಸ್ಥೆ

1. ನೆಲಮಂಗಲ ಬೆಂಗಳೂರು ಕಡೆಗೆ:

ಕೆನ್ನಮೆಟಲ್ ಫ್ಯಾಕ್ಟರಿಹತ್ತಿರ ಫೈಓವರ್‌ನ ಫೈಓವರ್ ಕೆಳಭಾಗದ ಎನ್.ಹೆಚ್.4 ಮತ್ತು ಸರ್ವಿಸ್ ರಸ್ತೆ ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಮೂಲಕ 8ನೇ ಮೈಲಿ ಎಸ್.ಆರ್.ಎಸ್ ಜಂಕ್ಷನ್ ದಾಸರಹಳ್ಳಿ ಗೊರಗುಂಟೆಪಾಳ್ಯ

2. ಸಿಎಂಟಿಐ ನಿಂದ ನೆಲಮಂಗಲ ಕಡೆಗೆ

ಫೈಓವ‌ರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ -ಎಸ್.ಆರ್.ಎಸ್ ಜಂಕ್ಷನ್ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಜಾಲಹಳ್ಳಿ ಕ್ರಾಸ್ ದಾಸರಹಳ್ಳಿ 8ನೇ ಮೈಲಿ ಪಾರ್ಲೆಜಿ ಟೋಲ್

ಪೀಣ್ಯ ಮೇಲೇತುವೆ ಮೂಲಕ ಸಾಗುವ ವಾಹನಗಳ ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಮೇಲ್ಕಂಡ ಮಾರ್ಪಾಡುಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗಿದೆ.

ಈ ಮೊದಲು ಆದೇಶ ಹೊರಡಿಸಿ ರದ್ದು ಮಾಡಿದ್ದ ಸರ್ಕಾರ

ಎಪ್ರಿಲ್ ತಿಂಗಳಲ್ಲಿ ರಾಜ್ಯ ಸರ್ಕಾರ ಪೀಣ್ಯ ಫ್ಲೈಓವರ್ ಬಂದ್ ಮಾಡಿ ದುರಸ್ತಿ ಕಾಮಗಾರಿ ಹಾಗೂ ಪರಿಶೀಲನೆ ಮಾಡಲು ನಿರ್ಧರಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯದ ನಾಗಮಂಗಲಕ್ಕೆ ಆಗಮಿಸುವ ಕಾರಣ ಈ ಆದೇಶ ರದ್ದು ಮಾಡಲಾಗಿತ್ತು. ಇದೀಗ ಮೇ.5 ರಿಂದ ಟೆಸ್ಟಿಂಗ್ ಕಾರ್ಯಕ್ಕಾಗಿ ವಾಹನ ಸಂಚಾರ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಈಗ 'ತಾತ'ನ ಸಂಭ್ರಮ: ಮಗಳು ಐಶ್ವರ್ಯಾಗೆ ಹೆಣ್ಣು ಮಗು ಜನನ!
Vasudeva Kutumba Serial: ತಿಂಗಳಾದರೂ ಸಂಭಾವನೆ ಕೊಡದ ಪ್ರೊಡಕ್ಷನ್‌ ಹೌಸ್; ತಿರುಗಿಬಿದ್ದ ಸೀರಿಯಲ್ ಕಲಾವಿದರು