ಬೆಂಗಳೂರು ಮಳೆಗೆ ಪ್ರಖ್ಯಾತ ಪುಸ್ತಕ ಮಳಿಗೆಗೆ ನುಗ್ಗಿದ ನೀರು, 14 ಲಕ್ಷ ಮೌಲ್ಯದ 5000 ಬುಕ್ ನಾಶ

Published : Apr 29, 2026, 08:44 PM IST
Bengaluru Bookstore

ಸಾರಾಂಶ

ಬೆಂಗಳೂರು ಮಳೆಗೆ ಪ್ರಖ್ಯಾತ ಪುಸ್ತಕ ಮಳಿಗೆಗೆ ನುಗ್ಗಿದ ನೀರು, 14 ಲಕ್ಷ ಮೌಲ್ಯದ 5000 ಬುಕ್ ನಾಶ, ದಿಡೀರ್ ಮಳೆಯಿಂದ ಮಳಿಗೆಗ ನೀರು ನುಗ್ಗಿದೆ. ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಜನಪ್ರಿಯ ಪುಸ್ತಕ ಮಳಿಗೆಯಾಗಿ ಗರುತಿಸಿಕೊಂಡಿದೆ.

ಬೆಂಗಳೂರು (ಏ.29) ಬೆಂಗಳೂರು ಮಳೆಯ ಕಣ್ಣೀರ ಕತೆಗಳು ಹೊರಬರುತ್ತಿದೆ. ಈಗಾಗಲೇ ಒಂದೇ ಮಳೆಗೆ 7 ಮಂದಿ ಬಲಿಯಾಗಿದ್ದಾರೆ. ಇತ್ತ ಮರಗಳು ಧರೆಗುರುಳಿದೆ, ಕಾರುಗಳು ಜಖಂ ಗೊಂಡಿದೆ. 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರ ನಡುವೆ ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿರುವ ಅತ್ಯಂತ ಜನಪ್ರಿಯ ಬೂಕ್‌ವಾರ್ಮ್ ಪುಸ್ತಕ ಮಳಿಗೆಗ ನೀರು ನುಗ್ಗಿದೆ. ಪರಿಣಾಮ ಬರೋಬ್ಬರಿ 14 ಲಕ್ಷ ರೂಪಾಯಿ ಮೌಲ್ಯದ 5000 ಪುಸ್ತಕ ನಾಶವಾಗಿದೆ.

ಪುಸ್ತಕ ಪ್ರಿಯರ ನೆಚ್ಚಿನ ಮಳಿಗೆ

ಬುಕ್‌‌ವಾರ್ಮ್ ಮಳಿಗೆ ಬೆಂಗಳೂರಿನ ಅತ್ಯಂತ ಜನಪ್ರಿಯ ಪುಸ್ತಕ ಮಳಿಗೆಯಾಗಿದೆ. ಇಲ್ಲಿ ಎಲ್ಲಾ ಪಸ್ತುಗಳು ಲಭ್ಯವಿದೆ. ಅತೀ ಹಳೇ ಪುಸ್ತಕ ಸೇರಿದಂತೆ ಇತ್ತೀಚಿನ ಪುಸ್ತಕಗಳು ಇಲ್ಲಿ ಲಭ್ಯವಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಪ್ರಿಯರು ಈ ಮಳಿಗೆಗೆ ಭೇಟಿ ನೀಡುತ್ತಾರೆ. ಆದರೆ ಇಂದು ಸುರಿದ ಮಳೆಗೆ ಈ ಪುಸ್ತಕ ಮಳಿಗೆಗ ನೀರು ನುಗ್ಗಿದೆ. ನೀರಿನಲ್ಲಿ ಪುಸ್ತಗಳು ಮುಳುಗಿದೆ. ಹಲವು ಪಸ್ತುಗಳು ನೀರಿನಲ್ಲಿ ತೇಲುತ್ತಿದೆ.

ಪುಸ್ತಕ ಕಾಪಾಡಲು ಸಿಬ್ಬಂದಿಗಳಿಂದ ಹರಸಾಹಸ

ಒಂದೇ ಸಮನೆ ಆಲಿಕಲ್ಲು ಸೇರದಂತೆ ಭಾರಿ ಮಳೆ ಸುರಿದ ಕಾರಣ ಏಕಾಏಕಿ ಮಳೆ ನೀರು ಪುಸ್ತಕ ಮಳಿಗೆಗೆ ನುಗ್ಗಿದೆ. ಸಿಬ್ಬಂದಿಗಳು ಮಳಿಗೆಗೆ ನುಗ್ಗುತ್ತಿದ್ದ ನೀರು ತಡೆಯಲು ಪ್ರಯತ್ನಿಸಿದ್ದಾರೆ. ಪುಸ್ತಕಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಒಂದೇ ಬಾರಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಸುಮಾರು 5000ಕ್ಕೂ ಹೆಚ್ಚು ಪುಸ್ತಕಗಳು ನೀರಿನಲ್ಲಿ ನಾಶವಾಗಿದೆ. ಇತ್ತ ಸಿಬ್ಬಂದಿಗಳು ನೀರು ಹೊರಹಾಕುವ ಪ್ರಯತ್ನದಲ್ಲಿದ್ದಾರೆ. ಬಾಕಿ ಉಳಿದಿರುವ ಪುಸ್ತಕ ಹಾಳಾಗದಂತೆ ತಡೆಯಲು ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದ್ದಾರೆ.

ವಿಶ್ವ ಓದುಗರ ದಿನ ಉಚಿತ ಪುಸ್ತಕ ನೀಡುವ ಮಳಿಗೆ

ವಿಶ್ವ ಓದುಗರ ದಿನಕ್ಕೆ ಬುಕ್‌ವಾರ್ಮ್ ಪುಸ್ತಕ ಮಳಿಗೆಗೆ ಭೇಟಿ ನೀಡುವ ಓದುಗರಿಗೆ ಉಚಿತ ಪುಸ್ತಕ ನೀಡುತ್ತದೆ. ಇನ್ನು ಪುಸ್ತಕ ಪ್ರಿಯರ ನೆಚ್ಚಿನ ಮಳಿಗೆ ಇದಾಗಿದೆ. ಬುಕ್‌ವಾರ್ಮ್ ಮಾಲೀಕ ಕೃಷ್ಣಗೌಡ ಕಳೆದ 28 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಈ ಮಳಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಪುಸ್ತಕದ ಮೇಲಿನ ಪ್ರೀತಿಯಿಂದ ಈ ಉದ್ಯಮವನ್ನು ಕಟ್ಟಿ ಬೆಳೆಸಿದ್ದಾರೆ. ಆಧರೆ ಒಂದೇ ಮಳೆಗೆ ಈ ಮಳಿಗೆಯ ಪುಸ್ತಕಗಳು ನಾಶವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮಳೆಗೆ ಬಲಿಯಾದ ಮೃತರ ಪಟ್ಟಿ ಬಿಡುಗಡೆ, ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಣೆ
ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬೆಂಗಳೂರು, 2 ಗಂಟೆಯಲ್ಲಿ 78MM ಮಳೆ 50ಕ್ಕೂ ಹೆಚ್ಚು ಮರ ಧರಶಾಹಿ, ಪ್ರಾಣಹಾನಿ!