ಬೆಂಗಳೂರಿಗೆ ಉಪರಾಷ್ಟ್ರಪತಿ ಆಗಮನದಿಂದ ನಾಳೆ ಈ ಮಾರ್ಗ ಬಂದ್, ಟ್ರಾಫಿಕ್ ಮಾರ್ಗಸೂಚಿ!

By Suvarna NewsFirst Published Mar 7, 2024, 7:19 PM IST
Highlights

ಮಾರ್ಚ್ 8 ರಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಗಮಿಸುತ್ತಿರುವ ಕಾರಣ ಹಲವು ಮಾರ್ಗಗಳನ್ನು ಬಂದ್ ಮಾಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾರ್ಗಸೂಚಿ ಪ್ರಕಟಿಸಿದ್ದಾರೆ.
 

ಬೆಂಗಳೂರು(ಮಾ.07) ರಾಷ್ಟ್ರಪತಿ ಜಗದೀಪ್ ಧನ್ಕರ್ ಒಂದು ದಿನ ದಕ್ಷಿಣ ಭಾರತ ಪ್ರವಾಸ ಕೈಗೊಂಡಿದ್ದಾರೆ. ನಾಳೆ(ಮಾ.08) ದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಜಗದೀಪ್ ಧನ್ಕರ್ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಹೆಚ್‌ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಇಸ್ರೋ ಕೇಂದ್ರಕ್ಕೆ ತೆರಳುವ ಕಾರಣ ಈ ಪ್ರದೇಶದ ಸುತ್ತ ಮುತ್ತಲಿನ ರಸ್ತೆಗಳಲ್ಲೂ ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆ ಇದೆ. ಮಾರ್ಚ್ 8 ರಂದು ಬೆಂಗಳೂರಿನ ಕೆಲ ಮಾರ್ಗಗಳು ಬಂದ್ ಆಗುತ್ತಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ರಾಷ್ಟ್ರಪತಿಗಳು ಸಂಚರಿಸುವ ಮಾರ್ಗಗಳನ್ನು ಬಂದ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.

ಮಾರ್ಚ್ 8 ರ ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಈ ರಸ್ತೆ ಬದಲು ಪರ್ಯಾಯ ಮಾರ್ಗ ಬಳಸಿ
ವರ್ತೂರು ರಸ್ತೆ(ಸುರಂದನದಾಸ್ ರಸ್ತೆ ಜಕ್ಷಂನ್‌ನಿಂದ ಮಾರ್ಥಳ್ಳಿ ಬ್ರಿಡ್ಜ್)
ಔಟರ್ ರಿಂಗ್ ರೋಡ್( ಕಾರ್ತಿಕ್ ನಗರ್ ಜಂಕ್ಷನ್‌ನಿಂದ ಮಾರ್ಥಳ್ಳಿ ಬ್ರಿಡ್ಜ್) 
ದೊಡ್ಡನಕುಂದಿ ಮುಖ್ಯ ರಸ್ತೆ( ವರ್ತೂರು ರಸ್ತೆಯಿಂದ ದೊಡ್ಡನಕುಂದಿ ಇಸ್ರೋವರೆಗೆ)
ಬಸವನಗರ ಮುಖ್ಯರಸ್ತೆ
ಯಮಲೂರು ಮುಖ್ಯರಸ್ತೆ
ಸುರಂಜನ್ ದಾಸ್ ರಸ್ತೆ
ಹಳೇ ವಿಮಾನ ನಿಲ್ದಾಣ ರಸ್ತೆ(ಒಲ್ಡ್ ಏರ್‌ಪೋರ್ಟ್ ರೋಡ್)

ರಾಜ್ಯದಲ್ಲಿ ಈ ಬೇಸಗೆಗೆ ಭಾರೀ ತಾಪಮಾನ ಹೆಚ್ಚಳ! ಐಎಂಡಿ ವಿಜ್ಞಾನಿ ಹೇಳಿದ್ದೇನು?

ವಾಹನ ಸಂಚಾರದ ಜೊತೆ ಕೆಲ ಪ್ರದೇಶ, ಮಾರ್ಗಗಳಲ್ಲಿ ವಾಹನ ನಿಲುಗಡೆ ಕೂಡ ನಿರ್ಬಂಧಿಸಲಾಗಿದೆ. ರಾಷ್ಟ್ರಪತಿಗಳು ಸಂಚರಿಸುವ ವೇಳೆ ಯಾವುದೇ ವಾಹನ ನಿಲುಗಡೆ, ಓಟಾಡಕ್ಕೂ ಅವಕಾಶವಿಲ್ಲ. 

ವಾಹನ ನಿಲುಗಡೆ ನಿರ್ಬಂಧಿಸಿದ ರಸ್ತೆ
ವರ್ತೂರು ರಸ್ತೆ(ಸುರಂದನದಾಸ್ ರಸ್ತೆ ಜಕ್ಷಂನ್‌ನಿಂದ ಮಾರ್ಥಳ್ಳಿ ಬ್ರಿಡ್ಜ್) ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ವಾಹನ ನಿಲುಗಡೆ ಮಾಡುವಂತಿಲ್ಲ
ಔಟರ್ ರಿಂಗ್ ರೋಡ್( ಕಾರ್ತಿಕ್ ನಗರ್ ಜಂಕ್ಷನ್‌ನಿಂದ ಮಾರ್ಥಳ್ಳಿ ಬ್ರಿಡ್ಜ್) ರಸ್ತೆ ಎರಡೂ ಬದಿಯಲ್ಲಿ ಯಾವುದೇ ವಾಹನ ನಿಲುಗಡೆ ಇಲ್ಲ
ದೊಡ್ಡನಕುಂದಿ ಮುಖ್ಯ ರಸ್ತೆ( ವರ್ತೂರು ರಸ್ತೆಯಿಂದ ದೊಡ್ಡನಕುಂದಿ ಇಸ್ರೋವರೆಗೆ)ರಸ್ತೆ ಎರಡೂ ಬದಿಯಲ್ಲಿ ಯಾವುದೇ ವಾಹನ ನಿಲುಗಡೆ ಇಲ್ಲ

Bengaluru: ಮಹಿಳಾ ದಿನಾಚರಣೆಯಂದು ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ!

ಮಾರ್ಚ್ 8 ರಂದು ಬೆಂಗಳೂರಿ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ರಾಷ್ಟ್ರಪತಿ ಧನ್ಕರ್, ಇಸ್ರೋದ ಸ್ಯಾಟಲೈಟ್ ಇಂಟಿಗ್ರೇಶನ್ ಹಾಗೂ ಟೆಸ್ಟಿಂಗ್ ಕೇಂದ್ರಕ್ಕೆ ಬೇಟಿ ನೀಡಲಿದ್ದಾರೆ. ಈ ವೇಳೆ ಇಸ್ರೋ ವಿಜ್ಞಾನಿಗಳ ಜೊತೆ ಮಾತನಾಡಲಿದ್ದಾರೆ. ಇಸ್ರೋ ಕಾರ್ಯಕ್ರಮ ಮುಗಿಸಿ ಮತ್ತೆ ಹೆಚ್‌ಎಎಲ್ ವಿಮಾನ ನಿಲ್ದಾಣದದ ಮೂಲಕ ಕೇರಳದ ತಿರುವನಂತಪುರಂಗೆ ತೆರಳಲಿದ್ದಾರೆ. ತಿರುವನಂತಪುರಂನಲ್ಲಿ ರಾಜಾಂಕಾ ಪುರಸ್ಕಾರ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದರೆ. ಇದಾದ ಬಳಿಕ ಕೊಯಂಬತ್ತೂರಿನ ಇಶಾ ಫೌಂಡೇಶನ್‌ಗೆ ತೆರಳಲಿರುವ ಧನ್ಕರ್ ಮಹಾಶಿವರಾತ್ರಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

 

pic.twitter.com/6rMsm78jda

— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP)

 

click me!