ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: 5 ಹೊಸ ಕಮಿಷನರೇಟ್‌, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ!

Published : Aug 03, 2026, 06:52 PM IST
bengaluru police commissionerate split into 5 zones

ಸಾರಾಂಶ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಪರಾಧಗಳನ್ನು ನಿಯಂತ್ರಿಸಲು, ನಗರ ಪೊಲೀಸ್ ಕಮಿಷನರೇಟ್ ಅನ್ನು ಐದು ಪ್ರತ್ಯೇಕ ಕಮಿಷನರೇಟ್‌ಗಳಾಗಿ ವಿಭಜಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬೃಹತ್ ಯೋಜನೆಗಾಗಿ 6,633 ಹೊಸ ಹುದ್ದೆಗಳನ್ನು ಸೃಷ್ಟಿಸಲು ಶಿಫಾರಸು ಮಾಡಲಾಗಿದ್ದು, ಇಡೀ ನಗರಕ್ಕೆ ಒಬ್ಬರು 'ಮುಖ್ಯ ಪೊಲೀಸ್ ಆಯುಕ್ತರು' ಮೇಲ್ವಿಚಾರಣೆ ನಡೆಸಲಿದ್ದಾರೆ.

ಬೆಂಗಳೂರು (ಆ.03): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ (Traffic Congestion), ಸೈಬರ್ ಅಪರಾಧಗಳು (Cyber Crimes) ಹಾಗೂ ಭೌಗೋಳಿಕ ವಿಸ್ತರಣೆಗೆ ತಕ್ಕಂತೆ ನಗರದ ಕಾನೂನು ಮತ್ತು ಸುವ್ಯವಸ್ಥೆಯನ್ನು (Law and Order) ಮತ್ತಷ್ಟು ಬಲಪಡಿಸಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಬೃಹತ್ ಯೋಜನೆಯೊಂದನ್ನು ರೂಪಿಸಿದೆ.

ಬೆಂಗಳೂರು ಮಹಾನಗರ ಪ್ರಾಧಿಕಾರ (GBA) ವಲಯಗಳ ಮಾದರಿಯಲ್ಲೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅನ್ನು ಐದು (5) ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ಗಳಾಗಿ (Police Commissionerates) ವಿಂಗಡಿಸಿ, ಇಡೀ ನಗರಕ್ಕೆ ಒಬ್ಬರು 'ಮುಖ್ಯ ಪೊಲೀಸ್ ಆಯುಕ್ತರನ್ನು' (Chief Commissioner of Police) ನೇಮಿಸಲು ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ.

ಐದು ಹೊಸ ಕಮಿಷನರೇಟ್‌ಗಳು ಯಾವುವು?

ಪ್ರಸ್ತುತ ಇರುವ ಬೆಂಗಳೂರು ನಗರ ಪೊಲೀಸ್ ಘಟಕವನ್ನು ಮರುಸಂಘಟಿಸಿ (Re-organisation) ಕೆಳಗಿನಂತೆ 5 ಪ್ರತ್ಯೇಕ ಕಮಿಷನರೇಟ್‌ಗಳನ್ನಾಗಿ ಮಾಡಲು ಉದ್ದೇಶಿಸಲಾಗಿದೆ:

  1. ಸೆಂಟ್ರಲ್ ಕಮಿಷನರೇಟ್ (Central COP): CBD ವಲಯ, ವಿಧಾನಸೌಧ, ಉಚ್ಚ ನ್ಯಾಯಾಲಯ ಹಾಗೂ ಪ್ರಮುಖ ವಾಣಿಜ್ಯ ಪ್ರದೇಶಗಳು.
  2. ನಾರ್ತ್ ಕಮಿಷನರೇಟ್ (North COP): ಯಲಹಂಕ, ದೇವನಹಳ್ಳಿ, ವಿಮಾನ ನಿಲ್ದಾಣ (KIAB) ಹಾಗೂ ಸುತ್ತಮುತ್ತಲ ಪ್ರದೇಶಗಳು.
  3. ಸೌತ್ ಕಮಿಷನರೇಟ್ (South COP): ಜಯನಗರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ಹಾಗೂ ದಕ್ಷಿಣ ಭಾಗಗಳು.
  4. ವೆಸ್ಟ್ ಕಮಿಷನರೇಟ್ (West COP): ವಿಜಯನಗರ, ಪೀಣ್ಯ, ಕೆಂಗೇರಿ ಹಾಗೂ ಪಶ್ಚಿಮ ವಲಯದ ಕೈಗಾರಿಕಾ ಪ್ರದೇಶಗಳು.
  5. ಈಸ್ಟ್ ಕಮಿಷನರೇಟ್ (East COP): ವೈಟ್‌ಫೀಲ್ಡ್, ಕೆ.ಆರ್. ಪುರಂ, ಮಹದೇವಪುರ ಮತ್ತು ಕೃಷ್ಣರಾಜಪುರ ಭಾಗಗಳು.

ಈ ಐದೂ ವಲಯಗಳ ಮೇಲ್ವಿಚಾರಣೆಯನ್ನು ಐಜಿಪಿ/ಡಿಐಜಿಪಿ (IGP/DIGP) ದರ್ಜೆಯ ಅಧಿಕಾರಿಗಳು ವಹಿಸಿಕೊಳ್ಳಲಿದ್ದು, ಇವರೆಲ್ಲರೂ ‘ಚೀಫ್ ಕಮಿಷನರ್ ಆಫ್ ಪೊಲೀಸ್’ (Chief Commissioner of Police) ಅವರ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

6,633 ಹೊಸ ಹುದ್ದೆಗಳ ಸೃಷ್ಟಿಗೆ ಸಿಫಾರಸು!

ಈ ಬೃಹತ್ ಬದಲಾವಣೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಒಟ್ಟು 6,633 ಹೊಸ ಹುದ್ದೆಗಳನ್ನು (New Posts Creation) ಸೃಷ್ಟಿಸಲು ಪ್ರಸ್ತಾವನೆಯಲ್ಲಿ ಕೋರಲಾಗಿದೆ.

ವಲಯವಾರು ಅಗತ್ಯವಿರುವ ಹೊಸ ಹುದ್ದೆಗಳು:

  • ಈಸ್ಟ್ ಕಮಿಷನರೇಟ್ (East COP): 2,734 ಹುದ್ದೆಗಳು
  • ವೆಸ್ಟ್ ಕಮಿಷನರೇಟ್ (West COP): 1,235 ಹುದ್ದೆಗಳು
  • ಸೌತ್ ಕಮಿಷನರೇಟ್ (South COP): 1,043 ಹುದ್ದೆಗಳು
  • ನಾರ್ತ್ ಕಮಿಷನರೇಟ್ (North COP): 944 ಹುದ್ದೆಗಳು
  • ಸೆಂಟ್ರಲ್ ಕಮಿಷನರೇಟ್ (Central COP): 677 ಹುದ್ದೆಗಳು

ಬದಲಾವಣೆಗೆ ಪ್ರಮುಖ ಕಾರಣಗಳೇನು?

ಬೃಹತ್ ಜನಸಂಖ್ಯೆ: ಬೆಂಗಳೂರಿನ ಹಾಲಿ ಜನಸಂಖ್ಯೆ ಸುಮಾರು 1.56 ಕೋಟಿಗೂ ಮೀರಿದ್ದು, ನಗರದ ವಿಸ್ತೀರ್ಣ 712 ಚದರ ಕಿಲೋಮೀಟರ್‌ಗೆ ತಲುಪಿದೆ.

ಐಟಿ-ಬಿಟಿ ವಲಯ ಮತ್ತು ಕೈಗಾರಿಕೆಗಳು: ವೈಟ್‌ಫೀಲ್ಡ್, ಪೀಣ್ಯ ಹಾಗೂ ಎಲೆಕ್ಟ್ರಾನಿಕ್ ಸಿಟಿಯಂತಹ ವಲಯಗಳಲ್ಲಿ ಭದ್ರತೆ (Security) ಮತ್ತು ಸಂಚಾರ ನಿರ್ವಹಣೆ ಅತ್ಯಂತ ಸವಾಲಿನದ್ದಾಗಿದೆ.

ತನಿಖೆಯ ವೇಗ (Fast Investigation): ಪ್ರತ್ಯೇಕ ಕಮಿಷನರೇಟ್‌ಗಳಿಂದಾಗಿ ಅಪರಾಧ ಪ್ರಕರಣಗಳ ತನಿಖೆ (Crime Investigation) ಹಾಗೂ ವಿಲೇವಾರಿ ವೇಗವಾಗಿ ನಡೆಯಲಿದೆ.

ಸಂಚಾರ ನಿಯಂತ್ರಣ (Traffic Management): ಪ್ರತಿ ಕಮಿಷನರೇಟ್‌ನಲ್ಲಿಯೂ ಪ್ರತ್ಯೇಕ ಸಂಚಾರ ವಿಭಾಗ (Traffic Division) ಇರುವುದರಿಂದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನ ಹರಿಸಬಹುದು.

ಅಂದಾಜು ವೆಚ್ಚ ಎಷ್ಟು?

ಈ ಯೋಜನೆಗಾಗಿ ಒಟ್ಟು ₹7,648.72 ಕೋಟಿ (₹764.87 Crore / 7648.72 Million) ವೆಚ್ಚವಾಗಲಿದ್ದು, ಇದರಲ್ಲಿ ಸಿಬ್ಬಂದಿ ವೇತನ ಒಳಗೊಂಡಂತೆ ಆವರ್ತಕ ವೆಚ್ಚ (Recurring Cost) ₹3,687.12 ಕೋಟಿ ಹಾಗೂ ಸಿಸಿಟಿವಿ (CCTV), ವಾಹನಗಳು, ತಂತ್ರಜ್ಞಾನ ಮತ್ತು ಮೂಲಸೌಕರ್ಯಕ್ಕಾಗಿ (Non-Recurring Cost) ₹3,961.60 ಕೋಟಿ ಅನುದಾನದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯ ಸಚಿವ ಸಂಪುಟವು (Karnataka Cabinet) ಈ ಪ್ರಸ್ತಾವನೆಗೆ ಅನುಮೋದನೆ ನೀಡಿದರೆ, ರಾಜಧಾನಿ ಬೆಂಗಳೂರಿನ ಭದ್ರತಾ ವ್ಯವಸ್ಥೆಯಲ್ಲಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ನವೀಕರಣ (Upgrade) ಆಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ರಾಜಕಾರಣದಲ್ಲಿ ಹೊಸ ಬಿರುಗಾಳಿ: ನೂತನ ಸಚಿವರ ಪದಗ್ರಹಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು!
ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ: ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು!