ಮುರುಡೇಶ್ವರಕ್ಕೆ ರೈಲು ವಿಸ್ತರಣೆಯ ಟಿಕೆಟ್ ಬುಕಿಂಗ್ ಓಪನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಎಲ್ಲ ಸೀಟು ಭರ್ತಿಯಾಗಿದ್ದು, 231 ಮಂದಿ ವೇಟಿಂಗ್ ಲೀಸ್ಟ್‌ನಲ್ಲಿದ್ದಾರೆ.
ಬೆಂಗಳೂರು (ಸೆ.16): ಕರಾವಳಿ ಕರ್ನಾಟಕ ಹಾಗೂ ಮೈಸೂರಿನ ಜನತೆಗೆ ಕೇಂದ್ರ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರು- ಮೈಸೂರು-ಮಂಗಳೂರು ಎಕ್ಸ್‌ಪ್ರೆಸ್‌ಅನ್ನು ಅರ್ಧ ಕರಾವಳಿಗೆ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿತ್ತು. ಮುರುಡೇಶ್ವರಕ್ಕೆ ರೈಲು ವಿಸ್ತರಣೆಯ ಟಿಕೆಟ್ ಬುಕಿಂಗ್ ಓಪನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಎಲ್ಲ ಸೀಟು ಭರ್ತಿಯಾಗಿವೆ. ಇನ್ನೂ 231 ಮಂದಿ ಪ್ರಯಾಣಿಕರು ವೇಟಿಂಗ್ ಲೀಸ್ಟ್‌ನಲ್ಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ಹಂಚಿಕೊಂಡಿದ್ದಾರೆ.
ನಾಳೆಯಿಂದ (ಸೆಪ್ಟೆಂಬರ್ 17 ರಿಂದ) ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ಮೈಸೂರು ಮೂಲಕ ಮುರ್ಡೇಶ್ವರದವರೆಗೆ ಸಂಚಾರ ಮಾಡಲಿದೆ. ರೈಲು ಸಂಖ್ಯೆ 16585/586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು (ಎಸ್‌ಎಂವಿಟಿಬಿ)-ಮಂಗಳೂರು ಸೆಂಟ್ರಲ್ ರಾತ್ರಿಯ ಎಕ್ಸ್‌ಪ್ರೆಸ್ ಅನ್ನು ಮೈಸೂರು ಮೂಲಕ ಉತ್ತರ ಕನ್ನಡದ ಮುರ್ಡೇಶ್ವರದವರೆಗೆ ವಿಸ್ತರಿಸಲು ಆದೇಶಿಸಿದ 10 ದಿನಗಳ ನಂತರ, ರೈಲ್ವೆ ಸಚಿವಾಲಯ ಶುಕ್ರವಾರ ಎಸ್‌ಎಂವಿಟಿಬಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16585 ಎಂದು ತಿಳಿಸಿದೆ. ಈ ವಿಸ್ತರಣೆಯು ಗಣೇಶ ಚತುರ್ಥಿ ಉತ್ಸವದ ಮುಂಚೆಯೇ ಬಂದಿದೆ, ಈ ಸಮಯದಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳ ನಡುವೆ ಹೆಚ್ಚುವರಿ ಪ್ರಯಾಣ ಸೌಲಭ್ಯಗಳಿಗಾಗಿ ಭಾರಿ ಬೇಡಿಕೆಯಿದೆ. ಇದರಿಂದ ಟಿಕೆಟ್ ಬುಕಿಂಗ್ ಓಪನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಬುಕಿಂಗ್ ಫುಲ್ ಆಗಿದೆ.
ಬೆಂಗಳೂರು-ಮಂಗಳೂರು ರೈಲು ಮುರ್ಡೇಶ್ವರಕ್ಕೆ ವಿಸ್ತರಣೆ, ಪ್ರತಾಪ್ ಸಿಂಹ ಮನವಿ ಒಪ್ಪಿದ ರೈಲ್ವೆ ಇಲಾಖೆ!
ಬೆಂಗಳೂರು -ಮಂಗಳೂರು ವಿಸ್ತೃತ ಸೇವೆಯು ಮುರ್ಡೇಶ್ವರವನ್ನು ಮಧ್ಯಾಹ್ನ 1.35 ಕ್ಕೆ ತಲುಪುತ್ತದೆ. ಜೊತೆಗೆ, ಮುರ್ಡೇಶ್ವರದಿಂದ ವಾಪಸ್ ಬರುವಾಗ ರೈಲು ಸಂಖ್ಯೆ 16586 ಮಧ್ಯಾಹ್ನ 2.10 ಕ್ಕೆ ಹೊರಡುತ್ತದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಅವರ ಸಚಿವಾಲಯದೊಂದಿಗೆ ರೈಲು ವಿಸ್ತರಣೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಹೆಚ್ಚಿನ ಕಸರತ್ತು ಮಾಡಿದ್ದರು. ಜೊತೆಗೆ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಳೂರು ಸೆಂಟ್ರಲ್‌ನಲ್ಲಿ ವಿಸ್ತೃತ ಸೇವೆಗೆ ಚಾಲನೆ ನೀಡುವ ಸಾಧ್ಯತೆಯಿದೆ.
ಮೋದಿ ಜನ್ಮದಿನಾಚಣೆಗಾಗಿ ಕರಾವಳಿ ಜನತೆಗೆ ಕೊಡುಗೆ: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ರೈಲಿನ ವಿಸ್ತರಣೆಯು ಕರಾವಳಿ ಕರ್ನಾಟಕ ಮತ್ತು ಮೈಸೂರು ಪ್ರದೇಶಕ್ಕೆ ಸೂಕ್ತವಾದ ಕೊಡುಗೆಯಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೊಂಡಿದ್ದಾರೆ. ಇನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೂ ಸಂಸದ ಪ್ರತಾಪ್ ಸಿಂಹ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸೇವೆಯು ಪ್ರಸ್ತುತ ವಾರದ ಆರು ದಿನಗಳಿಂದ ಪ್ರತಿದಿನ ಕಾರ್ಯ ನಿರ್ವಹಿಸುತ್ತದೆ ಎಂದು ರೈಲ್ವೆ ಇಲಾಖೆ ಆಧಿಕಾರುಗಳು ತಿಳಿಸಿದ್ದಾರೆ.
ಬಾಗಲಕೋಟೆ- ಕುಡಚಿ, ಗದಗ- ವಾಡಿ ರೈಲ್ವೆ ಮಾರ್ಗದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಎಂ.ಬಿ. ಪಾಟೀಲ
ಇಲ್ಲಿದೆ ರೈಲು ವೇಳಾಪಟ್ಟಿ: ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣದಿಂದ 16585 ಸಂಖ್ಯೆಯ ರೈಲು ರಾತ್ರಿ 8.15ಕ್ಕೆ ಹೊರಡಲಿದೆ. ಇನ್ನು ರಾತ್ರಿ 11.30 ಕ್ಕೆ ಮೈಸೂರು ನಿಲ್ದಾಣ, ಬೆಳಿಗ್ಗೆ 8.55ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಇನ್ನು ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 9.20ಕ್ಕೆ ರೈಲು ಹೊರಟು ಮಧ್ಯಾಹ್ನ 1.35ಕ್ಕೆ ಮುರ್ಡೇಶ್ವರ ತಲುಪುತ್ತದೆ. ನಂತರ, ರೈಲು ಸಂಖ್ಯೆ 16586 ಮುರ್ಡೇಶ್ವರದಿಂದ ಮಧ್ಯಾಹ್ನ 2.10ಕ್ಕೆ ಹೊರಡಲಿದೆ. ಅದು ಸಂಜೆ 6.35ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ, ಬೆಳಗ್ಗಿನ ಜಾವ 3.15ಕ್ಕೆ ಮೈಸೂರು ನಿಲ್ದಾಣ ಹಾಗೂ ಬೆಳಗ್ಗೆ 7.15ಕ್ಕೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ತಲುಪಲಿದೆ.