
ನವದೆಹಲಿ(ಸೆ.17): ಬೆಂಗಳೂರಿನ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗ ನಿರ್ಮಾಣದ ಪ್ರಸ್ತಾವನೆಯು, ಈ ಯೋಜನೆಯ ಕಾರ್ಯಸಾಧ್ಯತೆ ಮತ್ತು ಸಂಪನ್ಮೂಲಗಳ ಮೇಲೆ ಅವಲಂಬನೆಯಾಗಿದೆ. ಹೀಗಾಗಿ ಈ ಯೋಜನೆಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಅನುಮೋದನೆ ನೀಡಲಾಗದು ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಬುಧವಾರ ಮೇಲ್ಮನೆ ಕಲಾಪದಲ್ಲಿ ಕರ್ನಾಟಕ ಮೂಲದ ಹಾಗೂ ಬಿಜೆಪಿ ರಾಜ್ಯಸಭೆ ಸಂಸದ ಕೆ.ಸಿ ರಾಮಮೂರ್ತಿ ಅವರು ಈ ಕುರಿತು ಪ್ರಶ್ನಿಸಿದರು. ಇದಕ್ಕೆ ಲಿಖಿತ ಉತ್ತರ ರೂಪದ ಉತ್ತರ ನೀಡಿದ ಸಚಿವ ಹರ್‌ದೀಪ್ ಪುರಿ ಸಿಂಗ್, ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ 58 ಕಿ.ಮೀ. ಉದ್ದದ ಈ ಮೆಟ್ರೋ ರೈಲು ಯೋಜನೆಗೆ ಶೀಘ್ರ ಅನುಮೋದನೆಗಾಗಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋರಿಕೆ ಸಲ್ಲಿಸಿದ್ದಾರೆ.
ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ ಎಂಬೆಸ್ಸಿ ಒಡಂಬಡಿಕೆ
ಅಲ್ಲದೆ, ಈ ಯೋಜನೆಗೆ 500 ಮಿಲಿಯನ್ ಡಾಲರ್(ಸುಮಾರು 3600 ಕೋಟಿ ರು.) ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸಾಲ ಮಂಜೂರಾತಿಗೆ ಮುಂದಾಗಿದೆ. ಜೊತೆಗೆ, ಮೆಟ್ರೋ ರೈಲುಗಳ ಯೋಜನೆಗೆ ಅಂತರ್ ಸಚಿವಾಲಯಗಳ ಜೊತೆ ಮಾತುಕತೆ ಮತ್ತು ಅವುಗಳ ಒಪ್ಪಿಗೆ ಪಡೆಯಬೇಕಿದೆ. ಹೀಗಾಗಿ, ಈ ಯೋಜನೆಯ ಭವಿಷ್ಯವು ಲಭ್ಯವಿರುವ ಸಂಪನ್ಮೂಲಗಳ ಮೇಲೆ ನಿಂತಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ