
ಬೆಂಗಳೂರು (ಜ.06): ಬೆಂಗಳೂರು ನಗರದ ಯಲಹಂಕ ಸಮೀಪದ ಕೋಗಿಲು (Kogilu) ಅಕ್ರಮ ನಿವಾಸಿಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಪ್ರಕ್ರಿಯೆ ಈಗ ಅಂತಿಮ ಹಂತಕ್ಕೆ ತಲುಪಿದೆ. ಮನೆ ಕಳೆದುಕೊಂಡವರ ಪೈಕಿ ಹೊಸ ಮನೆ ಪಡೆಯಲು ಸಲ್ಲಿಕೆಯಾಗಿದ್ದ 262 ಅರ್ಜಿಗಳ ಪೈಕಿ ಕೇವಲ 37 ಮಂದಿ ಮಾತ್ರ ಅರ್ಹರಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ದಾಖಲೆಗಳ ಕೂಲಂಕಷ ಪರಿಶೀಲನೆ
ರಾಜೀವ್ ಗಾಂಧಿ ವಸತಿ ನಿಗಮದ (Rajiv Gandhi Housing Corporation) ಕಠಿಣ ಷರತ್ತುಗಳ ಅನ್ವಯ ಅಧಿಕಾರಿಗಳು ಅಂತಿಮ ಹಂತದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು 262 ಮಂದಿ ಪುನರ್ವಸತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ನಡೆಸಿದ ಸರ್ವೇಯ ನಂತರ ಕೇವಲ 35 ರಿಂದ 40 ಜನರ ದಾಖಲೆಗಳು ಮಾತ್ರ ಸರಿಯಾಗಿರುವುದು ಕಂಡುಬಂದಿದೆ. ಈ ಪೈಕಿ ಬೆಂಗಳೂರಿನಲ್ಲಿ ದೀರ್ಘಕಾಲದಿಂದ ವಾಸವಿರುವ 37 ಮಂದಿಯನ್ನು ಮಾತ್ರ ಮನೆ ಪಡೆಯಲು ಅರ್ಹರು ಎಂದು ಗುರುತಿಸಲಾಗಿದೆ.
ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜಿಬಿಎ (GBA) ಅಧಿಕಾರಿಗಳು ಸಚಿವ ಕೃಷ್ಣಬೈರೇಗೌಡ (Krishna Byre Gowda) ಹಾಗೂ ಸಚಿವ ಜಮೀರ್ ಅಹ್ಮದ್ (Zameer Ahmed) ಅವರಿಗೆ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ, ತೆರವುಗೊಳಿಸಲಾದ ಮನೆಗಳ ಸಂಖ್ಯೆ 83 ಆಗಿದ್ದರೂ, 119 ಮನೆಗಳ ಸರ್ವೇ ನಡೆಸಲಾಗಿತ್ತು. ಇದರಲ್ಲಿ 118 ಮಂದಿ ಆಧಾರ್ ಕಾರ್ಡ್ ಹೊಂದಿದ್ದರೆ, ಕೇವಲ 77 ಕುಟುಂಬಗಳ ಬಳಿ ರೇಷನ್ ಕಾರ್ಡ್ (Ration Card) ಇದೆ. ಆದಾಯ ಪ್ರಮಾಣ ಪತ್ರ (Income Certificate) ಕೇವಲ 63 ಕುಟುಂಬಗಳ ಬಳಿ ಮಾತ್ರ ಇರುವುದು ಪತ್ತೆಯಾಗಿದೆ.
ಅರ್ಹತೆಗೆ ಮಾನದಂಡವೇನು? ಅರ್ಹ ಫಲಾನುಭವಿಗಳನ್ನು ಗುರುತಿಸಲು ಅಧಿಕಾರಿಗಳು ಹಲವು ಕಠಿಣ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳ ದಾಖಲಾತಿ ಪರಿಶೀಲನೆ ಕಾರ್ಯಕ್ಕೆ ಚುರುಕು ನಿಡಲಾಗಿದೆ. ಶತಾಯ ಗತಾಯ ಇವ್ತೇ ಪಟ್ಟಿ ಫೈನಲ್ ಮಾಡಲು ಸರ್ಕಸ್ ಮಾಡಲಾಗುತ್ತಿದೆ. ಕಳೆದ ಚುನಾವಣೆಯ ಮತದಾನದ ಪಟ್ಟಿ ಪರಿಶೀಲನೆ ಮಾಡಲಾಗುತ್ತಿದೆ. ಇಲ್ಲಿರುವ ಜನರು ವೋಟ್ ಹಾಕಿದ್ದಾರಾ ಅನ್ನೋದರ ಪರಿಶೀಲನೆಯನ್ನೂ ಮಾಡಲಾಗುತ್ತಿದೆ. ಜೊತೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂಂ) ಅಧಿಕಾರಿಗಳಿಂದ ಕರೆಂಟ್ ಕನೆಕ್ಷನ್ ಹೇಗೆ ಪಡೆದುಕೊಮಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸರ್ಕಾರದಿಂದ ರೇಷನ್ ಕಾರ್ಡ್ ವಿತರಣೆ ಮಾಡಿಲ್ಲ. ಆದರೂ, ಇವರು ಯಾವಾಗ ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ, ಇದಕ್ಕೆ ಏನೆಲ್ಲಾ ಆಧಾರಗಳನ್ನು ಒದಗಿಸಿದ್ದಾರೆ ಎಂಬ ಮಾಹಿತಿ ಕಲೆಹಾಕಲಾಗಿದೆ.
ಕೋಗಿಲು ಬಡಾವಣೆಯಲ್ಲಿ ಅಕ್ರಮ ನಿವಾಸಿಗಳ ಬಳಿ ಕಳೆದ 5 ವರ್ಷದ ಡಾಕ್ಯುಮೆಂಟ್ ಇದೆಯಾ ಅನ್ನೋದರ ಪರಿಶೀಲನೆ ಕಾರ್ಯವನ್ನು ಮಾಡಲಾಗಿದೆ. ಇದರಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಯಾವಾಗ ವಿತರಣೆಯಾಗಿದ್ದು ಅನ್ನೋದರ ತನಿಖೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ 5 ವರ್ಷಗಳ ದಾಖಲಾತಿ ಇದ್ದವರಿಗೆ ಮಾತ್ರ ರಾಜೀವ್ ಗಾಂಧಿ ವಸತಿ ನಿಗಮದಡಿ ನಿರ್ಮಿಸಲಾದ ಮನೆಯನ್ನು ನೀಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ ಎಂಬುದು ಹೊರಬಿದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ