
ಬೆಂಗಳೂರು(ಏ.14): ಚೀನಾದ ವುಹಾನ್ ಪ್ರಾಂತ್ಯದಿಂದ ಹುಟ್ಟಿಕೊಂಡು ಸದ್ಯ ವಿಶ್ವದ ನಿದ್ದೆಗೆಡಿಸಿರುವ ಕೊರೋನಾ ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಸದ್ಯ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ 13ನೇ ಸ್ಥಾನಕ್ಕಿಳಿದಿದೆ. ಹೀಗಿರುವಾಗ ರಾಜ್ಯದ 11 ಜಿಲ್ಲೆಗಳನ್ನು ರೆಡ್ ಝೋನ್ ಅಗಿ ಗುರುತಿಸಲಾಗಿದ್ದು, ಬೆಂಗಳೂರು ಕೂಡಾ ಇದರಲ್ಲಿ ಒಂದು. ಆದರೀಗ ವರದಿಯೊಂದು ಪ್ರಕಟವಾಗಿದ್ದು, ಇದರ ಅನ್ವಯ ಬೆಂಗಳೂರು ರೆಡ್ ಝೋನ್‌ನಲ್ಲಿದ್ದರೂ ಸುರಕ್ಷಿತವಾಗಿದೆ ಎನ್ನಲಾಗಿದೆ. ಹೇಗೆ? ಏನಿದು ಲೆಕ್ಕಾಚಾರ? ಇಲ್ಲಿದೆ ವಿವರ
ಹೌದು ಬೆಂಗಳೂರಿನಲ್ಲಿ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಶೀಘ್ರ ಕಾರ್ಯಚರಣೆಯಿಂದ ಕರೋನಾ ಸೋಂಕು ಕಂಟ್ರೋಲ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಇಲಾಖೆಯ ಈ ಕಾರ್ಯ ಶ್ಲಾಘನೀಯ. ಇವೆಲಲ್ಲದರ ನಡುವೆ ಬೆಂಗಳೂರಿಗರಿಗೆ ಗುಡ್‌ನ್ಯೂಸ್ ಕೂಡಾ ಸಿಕ್ಕಿದೆ. ವರದಿಯೊಂದರ ಅನ್ವಯ ರೆಡ್ ಝೋನ್‌ನಲ್ಲಿದ್ದರೂ ಬೆಂಗಳೂರಿಗರು ಕೊಂಚ ನಿಟ್ಟಿಸಿರು ಬಿಡುವಂತಾಗಿದೆ. ಈ ಲೆಕ್ಕಾಚಾರದ ಅನ್ವಯ ಬಿಬಿಎಂಪಿಯ 198 ವಾರ್ಡ್ ಗಳ ಪೈಕಿ 40 ವಾರ್ಡ್‌ಗಳಲ್ಲಿ ಮಾತ್ರ ಕೊರೋನಾ ಸೋಂಕಿತರಿದ್ದಾರೆ. ಅಂದರೆ ಉಳಿದ 158 ವಾರ್ಡ್ ಗಳಲ್ಲಿ ಕೊರೋನಾ ಸೋಂಕಿಲ್ಲ.
ಕೊರೋನಾ ನಿಯಂತ್ರಣ: 3ನೇ ಸ್ಥಾನದಲ್ಲಿದ್ದ ರಾಜ್ಯ 13 ಸ್ಥಾನಕ್ಕೆ ಜಿಗಿದಿದ್ದು ಹೇಗೆ?
ಇನ್ನು ಸೋಂಕಿತರಿರುವ 40 ವಾರ್ಡ್‌ಗಳ ಪೈಕಿ 4 ವಾರ್ಡ್ ಗಳಲ್ಲಿ ತಲಾ ಎರಡು ಪ್ರಕರಣಗಳಾದರೆ, 3 ವಾರ್ಡ್ ಗಳಲ್ಲಿ ತಲಾ ಮೂರು ಪ್ರಕರಣಗಳಿವೆ. ಪಾದಾರಾಯನಪುರ, ಬಾಪೂಜಿ ನಗರದಲ್ಲಿ ಮಾತ್ರ ಅತಿ ಹೆಚ್ಚು ಅಂದರೆ 7 ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನುಳಿದಂತೆ 30 ವಾರ್ಡ್‌ಗಳಲ್ಲಿ ಕೇವಲ ವಾರ್ಡ್‌ಗೊಬ್ಬರು ಸೋಂಕಿತರಿರುವುದು ತಿಳಿದು ಬಂದಿದೆ. ಸದ್ಯ ಬೆಂಗಳೂರಿನ 77 ಸೋಂಕಿತರ ಪೈಕಿ 6 ಜನ ವಿದೇಶಿಯರೆಂಬುವುದು ಮತ್ತೊಂದು ಸಮಾಧಾನದ ವಿಚಾರ.
ರಾಜ್ಯ ರಾಜಧಾನಿಯಲ್ಲಿ ಒಟ್ಟು 77 ಮಂದಿ ಸೋಂಕಿತರಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕ್ಷೇತ್ರವಾರು ಹೆಚ್ಚು ಸೋಂಕು ತಲುಪಿಲ್ಲ ಮತ್ತು ದೇಶದ ಬೇರೆ ನಗರಗಳಿಗೆ ಹೋಲಿಸಿದ್ರೆ ಬೆಂಗಳೂರು ಈ ಕ್ಷಣದವರೆಗೂ ಸೇಫ್ ಜೋನ್ ನಲ್ಲೇ ಇದೆ.
ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರು ಇರೋ ವಾರ್ಡ್.
*ರಾಧಾಕೃಷ್ಣ ಟೆಂಪಲ್ ವಾರ್ಡ್
*ಅರಮನೆ ನಗರ
*ಮಲ್ಲೇಶ್ವರಂ
*ಜೆಸಿ ನಗರ
*ಹೂಡಿ
*ಸಿವಿ ರಾಮನ್ ನಗರ
*ಹೊಯ್ಸಳ ನಗರ
*ಗಾಂಧಿ ನಗರ
*ದೊಮ್ಮಲೂರು
*ಸಂಪಂಗಿರಾಮನಗರ
*ಹಗ್ಡೂರ್
*ಜ್ಞಾನ ಭಾರತಿ
*ಬಾಪೂಜಿ ನಗರ
*ಪಾದಾರಾಯನಪುರ
*ಜೆ.ಪಿ ನಗರ
*ವಿವಿ ಪುರಂ
*ಹೊಂಬೇಗೌಡ ನಗರ
*ಆಡುಗೋಡಿ.
*ಸುದ್ದಗುಂಟೆ ಪಾಳ್ಯ
*ಆರ್ ಆರ್ ನಗರ
*ಕತ್ರಿಗುಪ್ಪೆ
*ಗೊರಗುಂಟೆ ಪಾಳ್ಯ
*ಮಡಿವಾಳ.
*ಹೆಚ್ ಎಸ್ ಆರ್ ಲೇಔಟ್.
*ಶಾಕಾಂಬರಿ ನಗರ
*ಚಿಕ್ಕಲಸಂದ್ರ.
*ಕೋಣನಕುಂಟೆ.
*ಅಂಜನಾಪುರ
*ಹೆಮ್ಮಿಗೆಪುರ.
*ಗರುಡಾಚಾರ್ ಪಾಳ್ಯ.
*ಸಂಜಯನಗರ.
*ಮಾರುತಿ ಸೇವಾನಗರ.
*ರಾಮಸ್ವಾಮಿ ಪಾಳ್ಯ.
*ವಸಂತ್ ನಗರ.
*ಸುಧಾಮ ನಗರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ