
ಬೆಂಗಳೂರು (ಮೇ.22) ನಿನ್ನೆ ಸಂಜೆ ನಗರದಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಬೆಂಗಳೂರು ಜನಜೀವನ ಅಸ್ತವ್ಯಸ್ತಗೊಂಡು ನಲುಗಿಹೋಗಿದೆ.
ಭಾರೀ ಮಳೆಗೆ ನಗರದಲ್ಲಿ 65ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 80ಕ್ಕೂ ಅಧಿಕ ಮರಗಳ ಕೊಂಬೆ ಮುರಿದಿವೆ. ರಸ್ತೆಗೆ ಬಿದ್ದ ಮರಗಳು ವಾಹನ ಸವಾರರು, ಸಾರ್ವಜನಿಕರು ಪರದಾಡಿದ್ದಾರೆ ಈ ಸಂಬಂಧ ಬಿಬಿಎಂಪಿ 400ಕ್ಕೂ ಅಧಿಕ ದೂರುಗಳು ಬಂದಿವೆ. 50ಕ್ಕೂ ಅಧಿಕ ಮನೆಗಳಿಗೆ ನುಗ್ಗಿರುವೆ ಮಳೆ ನೀರು. ಮಹಾಲಕ್ಷ್ಮಿ ಲೇಔಟ್ ಒಂದರಲ್ಲೇ 15ಕ್ಕೂ ಅಧಿಕ ಕಡೆ ಮನೆಗಳಿಗ ನೀರು ನುಗ್ಗಿದೆ. ನಾಗರಿಕರು ದೂರು ನೀಡಿರುವ ಹಿನ್ನೆಲೆ ಈಗಾಗಲೇ ಬಿಬಿಎಂಪಿ 186ಕಡೆ ಬಿಬಿಎಂಪಿ ಮರಗಳ ತೆರವು ಕಾರ್ಯಾಚರಣೆಗೆ ಇಳಿದಿದೆ. 41 ಫಾರೆಸ್ಟ್ ಗ್ಯಾಂಗ್ ಗಳು ಕೆಲಸ ಮಾಡುತ್ತಿವೆ.
Bengaluru rains: ಮಳೆಗೆ ಯುವತಿ ಬಲಿ: ಬಿಬಿಎಂಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ಬೆಂಗಳೂರಿನಲ್ಲಿ ಸದ್ಯ ಗಂಟೆಗೆ 20MM ಮಳೆ ಬಿದ್ದರೆ ಕಷ್ಟ ಅನ್ನೋ ವಾತಾವರಣ ಇದೆ. ನಿನ್ನೆ ನಗರದ ಹಲವೆಡೆ 30MM+ಮಳೆಯಾಗಿದೆ. ಮಳೆ ಅವಾಂತರಗಳ ಹಿನ್ನಲೆ 24×7 ಕಂಟ್ರೋಲ್ ರೂಂ ತೆಗೆದಿರುವ ಬಿಬಿಎಂಪಿ. ಇಂದು ಮಧ್ಯಾಹ್ನದ ವೇಳೆಗೆ ಮಳೆ ಅವಾಂತರದ ರಿಪೋರ್ಟ್ ತರಿಸಿಕೊಳ್ಳಲಿರುವ ಬಿಬಿಎಂಪಿ ಆಯುಕ್ತರು. ಅವಾಂತರಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
ನಗರದಲ್ಲಿವೆ ಪ್ರಮುಖ 18-20 ಅಂಡರ್ ಪಾಸ್:
ಪ್ರತಿವರ್ಷದ ಮಳೆಗಾಲದಲ್ಲೂ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಅನಾಹುತಕ್ಕೀಡಾದ ಘಟನೆಗಳು ನಡೆಯುತ್ತಿವೆ. ಮಳೆಗಾಲದಲ್ಲಿ ನೀರು ನಿಲ್ಲುವ ಪ್ರಮುಖ 18-20 ಅಂಡರ್ ಪಾಸ್‌ಗಳನ್ನು ಬಿಬಿಎಂಪಿ ಗುರುತಿಸಿದ್ದು, ನಿನ್ನೆ ಅಂಡರ್ ಪಾಸ್ ನಲ್ಲಿ ದುರಂತ ಸಂಭವಿಸಿರುವ ಹಿನ್ನಲೆ ಇಂಥ ಘಟನೆ ಮರುಕಳಿಸದಂತೆ ನಗರಾಡಳಿತ ಅಂಡರ್ ಪಾಸ್ ಡ್ರೈನೇಜ್ ವ್ಯವಸ್ಥೆಗೆ ಒತ್ತು ಕೊಟ್ಟಿದೆ. ಈಗಾಗಲೇ ಹೂಳು, ಕಸ ಕಡ್ಡಿಗಳನ್ನು ವಿಲೇವಾರಿ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್, ಕೆ.ಆರ್, ಸರ್ಕಲ್, ವಿದ್ಯಾರಣ್ಯಪುರ ಸೇರಿದಂತೆ ಹಲವೆಡೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಲಾಗಿದೆ
ಮುಂದಿನ 7 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ:
ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕೂಡ ನಗರದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಮಹಾದೇವಪುರ, ಬೊಮ್ಮನಹಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸಾಧ್ಯತೆ. ಗರಿಷ್ಠ ತಾಪಮಾನ 34 ಡಿಗ್ರಿ, ಕನಿಷ್ಠ19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳವಾರ & ಬುಧವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದು ಗುರುವಾರದ ಬಳಿಕ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Bengaluru Rain:ಮಹಾಮಳೆಗೆ ಸಿಲುಕಿ ಯುವತಿ ಸಾವು: ಪ್ರವಾಸಕ್ಕೆ ಬಂದವಳು ದುರಂತ ಅಂತ್ಯ
ರಾಜ್ಯದಲ್ಲಿ ಇನ್ನೆರಡು ದಿನ ಮಳೆ:
ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಇಂದು ಮತ್ತು ನಾಳೆ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ