ಬೆಂಗಳೂರಿನಲ್ಲಿ ದಾಖಲೆಯ ಒಣ ಹವೆ, 4 ದಶಕಗಳಲ್ಲಿ ಇದೇ ಮೊದಲು, ಇನ್ನೂ 1 ವಾರ ಮಳೆ ಇಲ್ಲ!

By Suvarna News  |  First Published Apr 16, 2024, 11:22 AM IST

ಬೆಂಗಳೂರಿನಲ್ಲಿ ಈ ಬಾರಿ ಮಳೆ ಕಾಣದಾಗಿದ್ದು, IMD ಪ್ರಕಾರ  ಬೆಂಗಳೂರು ನಗರವು ಮಳೆಯಿಲ್ಲದ  ಸತತ 146  ದಿನಗಳ ಸುದೀರ್ಘ ಸಮಯವನ್ನು ಕಳೆದಿದೆ.


ಬೆಂಗಳೂರು (ಏ.16): ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮತ್ತೆ ಸೆಕೆ ಹೆಚ್ಚಿದೆ. ಬಿಡುವುದು ನೀಡಿರುವ ಮಳೆ ಮುಂದಿ ಮೂರು ದಿನಗಳ ನಂತರ ಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದರ ನಡುವೆ ಬೆಂಗಳೂರಿನಲ್ಲಿ ಈ ಬಾರಿ ಮಳೆ ಕಾಣದಾಗಿದ್ದು, IMD ಪ್ರಕಾರ, ನಗರದಲ್ಲಿ ಕೊನೆಯದಾಗಿ ದಾಖಲಾದ ಮಳೆಯು ನವೆಂಬರ್ 21, 2023 ರಂದು ಆಗಿದೆ. ಬೆಂಗಳೂರು ನಗರವು ಮಳೆಯಿಲ್ಲದ  ಸತತ 146  ದಿನಗಳ (5 ತಿಂಗಳು) ಸುದೀರ್ಘ ಸಮಯವನ್ನು ಕಳೆದಿದೆ. ದೀರ್ಘವಾದ ಒಣಹವೆ ಇನ್ನೂ ಒಂದು ವಾರ ಮುಂದುವರಿಯುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದ್ದು, ಎಪ್ರಿಲ್ 21ರ ಒಳಗೆ ಮಳೆ ಬರುವ ಸಾಧ್ಯತೆ ಇದೆ. ತುಂತುರು ಮಳೆಯಾಗುವ ನಿರೀಕ್ಷೆ ಇದೆ ಎಂದಿದೆ.

Tap to resize

Latest Videos

undefined

ಭಾರತದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ, ಆದರೆ ಮಳೆಗಾಲ ದಿನದಲ್ಲಿ ಕುಸಿತ, IMD ವರದಿ!

ಕಳೆದ ಕೆಲವು ದಶಕಗಳಲ್ಲಿ ಬೆಂಗಳೂರಿನಲ್ಲಿ ತಾಪಮಾನ ಏರಿಕೆ:
ಇತ್ತೀಚಿನ ಅಧ್ಯಯನಗಳ ಪ್ರಕಾರ ಕಳೆದ 42 ವರ್ಷಗಳಲ್ಲಿ ಬೆಂಗಳೂರಿನ ತಾಪಮಾನವು ಸರಾಸರಿ  ಸುಮಾರು ಒಂದು ಡಿಗ್ರಿಯಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. ಕಳೆದ ಎರಡು ದಶಕಗಳಲ್ಲಿ ಈ ಹೆಚ್ಚಳವು ವಿಶೇಷವಾಗಿ ಹೆಚ್ಚಾಗಿದೆ ಇದು ನೀರಿನ ಮೂಲ ಆವಿಯಾಗುವಿಕೆಗೆ  ಕಾರಣವಾಗುತ್ತದೆ. ಕಳೆದ ಮೂರು ವರ್ಷಗಳಿಂದ ಮಳೆಯೂ ಕಡಿಮೆಯಾಗಿದ್ದು, ಅಂತರ್ಜಲ ಮಟ್ಟ ಮತ್ತು ಜಲಾಶಯಗಳ ಮಟ್ಟದ ಮೇಲೆ ನೇರ ಪರಿಣಾಮ ಬೀರಿದೆ. ಹೀಗಾಗಿ ಬೆಂಗಳೂರಿನಲ್ಲಿ  ನೀರಿನ ಕೊರತೆ ಸಮಸ್ಯೆ  ಇನ್ನಷ್ಟು ಹದಗೆಡಿಸಿದೆ ಎಂದು ವರದಿ ಹೇಳಿದೆ.

ಕರಾವಳಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಕೆಲ ದಿನಗಳ ಹಿಂದೆ ಅಲ್ಪ ಪ್ರಮಾಣದ ಮಳೆ ಆಗಿತ್ತು. ಶಿವಮೊಗ್ಗದ ಆಗುಂಬೆಯಲ್ಲಿ ಅತಿ ಹೆಚ್ಚು 8 ಸೆಂ.ಮೀ. ಮಳೆಯಾಗಿತ್ತು. ಉತ್ತರ ಕರ್ನಾಟಕದ ಜಿಲ್ಲೆಗಳ ಕೆಲ ಪ್ರದೇಶದಲ್ಲಿ ಕೂಡ ತಲಾ 2 ಸೆಂ.ಮೀ. ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗಿತ್ತು.  ಆದರೆ ಈಗ ಮತ್ತೆ ಮಳೆ ಪ್ರಮಾಣ ಕಡಿಮೆ ಆಗಿತ್ತು. ಮತ್ತೆ ಒಣಹವೆ ಮುಂದರೆದಿದೆ. 
 

click me!