
ಬೆಂಗಳೂರು (ಅ.23): ರಾಜ್ಯದ ಅಭಿವೃದ್ಧಿಯನ್ನೇ ಈ ಸರ್ಕಾರ ಮರೆತಿದೆ. ಬಿಹಾರ ಚುನಾವಣಗೆ ಫಂಡಿಂಗ್ ಮಾಡಲು ಬ್ಯುಸಿ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರಿನ ಅಭಿವೃದ್ಧಿಗೆ ಮಾಡಿರುವ ಒಂದೇ ಒಂದು ಪ್ರಾಜೆಕ್ಟ್ ತೋರಿಸಿ ಎಂದು ಸಂಸದ ತೇಜಸ್ವಿ ಸೂರ್ಯ ಸವಾಲು ಹಾಕಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ರಾಜ್ಯದಲ್ಲಿ 2300 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾರಿಗೆ ನೌಕರರು ಸಂಬಳ ಇಲ್ಲದೆ ಪ್ರತಿಭಟನೆ ಮಾಡ್ತಿದ್ದಾರೆ. ಹಿಂದಿನ ಸರ್ಕಾರದ ಫ್ಲೈಓವರ್ ಪ್ರಾಜೆಕ್ಟ್ ಇಂದಿಗೂ ಮುಗಿದಿಲ್ಲ. ಶಿಕ್ಷಕರ ನೇಮಕಾತಿ ಅಂತೂ ಆಗ್ತಿಲ್ಲ. ವರ್ಗಾವಣೆ ದಂಧೆ ಮಾತ್ರ ಎಗ್ಗಿಲ್ಲದೆ ನಡೆತಿದೆ. ಬೆಂಗಳೂರಿನಲ್ಲಿ ಸೈಟ್‌ಗೆ ರೇಟ್ ಚಾರ್ಟ್ ಆಗ್ತಿದೆ. ರಾಜ್ಯದ ಅಭಿವೃದ್ಧಿಯನ್ನೇ ಈ ಸರ್ಕಾರ ಮರೆತುಬಿಟ್ಟಿದೆ. ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಲು ಬ್ಯುಸಿ ಆಗಿದ್ದೀರಿ ನೀವು ಎಂದು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರಿಗೆ ಒಂದೇ ಒಂದು ಪ್ರಾಜೆಕ್ಟ್ ತೋರಿಸಿ. ರೆವೆನ್ಯು ಸರ್‌ಪ್ಲಸ್ ಬಜೆಟ್ ಕೊಟ್ಟಿದ್ದು ಬಿಜೆಪಿ. ಈಗ ನೀವು ಗುತ್ತಿಗೆದಾರರಿಗೆ ಹಣವನ್ನೇ ಕೊಡ್ತಿಲ್ಲ. ಹಣ ಕೇಳಿದರೆ ಗುತ್ತಿಗೆದಾರರಿಗೆ ಬೆದರಿಕೆ ಹಾಕ್ತಿದೆ ನಿಮ್ಮ ಸರ್ಕಾರ. ನಿಮ್ಮ ಶಾಸಕರೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಬೆಂಗಳೂರಿಗೆ ಮಾಡಿದ ಒಂದೇ ಒಂದು ಪ್ರಾಜೆಕ್ಟ್ ತೋರಿಸಿ ಎಂದು ಸಂಸದ ತೇಜಸ್ವಿ ಸೂರ್ಯ ಸವಾಲು ಹಾಕಿದರು.
100 ರೂ. ಆದಾಯದಲ್ಲಿ 18 ರೂ. ಬಡ್ಡಿಗೆ ಹೋಗ್ತಿದೆ. ವಿವಿದ ಇಲಾಖೆಗೆ ಮೀಸಲಿಟ್ಟ ಹಣಕ್ಕಿಂತ ಹೆಚ್ಚು ಗ್ಯಾರಂಟಿಗೆ ಹೋಗ್ತಿದೆ. ಬಡವರು ಸರ್ಕಾರದ ಮೇಲೆ ಅವಲಂಬಿತರಾಗುವಂತೆ ಮಾಡಿದ್ದೀರಿ. ಅಮಾವಾಸ್ಯೆ ಹುಣ್ಣಿಮೆಯಲ್ಲಿದ್ದೀರಿ. ಇನ್ನೆರಡು ವರ್ಷದಲ್ಲಿ ರಾಜ್ಯ ಹಿಡಿದ ಗ್ರಹಣ ಬಿಡಲಿದೆ. ರಾಜಕೀಯ ನಿವೃತ್ತಿ ಬಳಿಕ ನಿಮ್ಮ ಕೊಡುಗೆ ಏನು? ಸಾಲದಲ್ಲಿ ಮುಳುಗುಸಿದ್ದು, ಅತಿಯಾದ ಅತ್ಯಾ೧ಚಾರ, ಕೈಗಾರಿಕೋದ್ಯಮಿಗಳು ಬಿಟ್ಟು ಹೋಗಿದ್ದು. ಇದೇ ನಿಮ್ಮ ಆಡಳಿತಾವಧಿ ಎಂದು ಆಗಬಾರದು. ಅಮವಾಸ್ಯೆ, ಹುಣ್ಣಿಮೆ, ಗ್ರಹಣ, ಸೂರ್ಯ ಎಲ್ಲ ಜ್ಯೋತಿಷಿಗಳಿಗೆ ಬಿಡಿ
ಐಟಿ ಸಚಿವರಿಗೆ ಬಂಡವಾಳ ತರಲು ಹೇಳಿ. ಗೃಹ ಸಚಿವರು ಕಾನೂನು ಸುವ್ಯವಸ್ಥೆ ನೋಡಲು ಹೇಳಿ. ಸರ್ಕಾರಿ ನೌಕರರಿಗೆ ಸಂಬಳ ಕೊಡಿ, ಕೊನೆದಾಗಿ ಮೋದಿಗೆ ಪ್ರಶ್ನೆ ಕೇಳೋದು ಬಿಡಿ ಎಂದು ತಿವಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ