
ಬೆಂಗಳೂರು (ಮಾ.5): ನೀವು ಕೋಟಿ ಕೋಟಿ ರೂಪಾಯಿ ಸುರಿದು ಐಷಾರಾಮಿ ಫ್ಲಾಟ್ ಕೊಂಡುಕೊಂಡಿದ್ದೀರಾ? ನೆಮ್ಮದಿಯಾಗಿ ಇರಬಹುದು ಎಂದುಕೊಂಡಿದ್ದೀರಾ? ಹಾಗಿದ್ದರೆ ಈ ದೃಶ್ಯ ನೋಡಿ ನೀವು ಬೆಚ್ಚಿ ಬೀಳೋದು ಗ್ಯಾರಂಟಿ! ಇದು ಬೆಂಗಳೂರಿನ ಚೂಡಸಂದ್ರದ 'ಅಹದ್ ಸೆರೆನಿಟಿ' (Ahad Serenity) ಅಪಾರ್ಟ್‌ಮೆಂಟ್‌ನ ಕರಾಳ ಕಥೆ.
ಇಲ್ಲಿನ ನಿವಾಸಿಗಳು ಒಂದು ಹೆಜ್ಜೆ ಹೊರಗೆ ಇಡಬೇಕೆಂದರೂ ಕೈಯಲ್ಲಿ ಲಾಠಿ ಹಿಡಿಯಲೇಬೇಕು. ಹೌದು, ನೀವು ಕೇಳುತ್ತಿರುವುದು ನಿಜ. ಸುಮಾರು 619 ಫ್ಲಾಟ್‌ಗಳು, 1500ಕ್ಕೂ ಹೆಚ್ಚು ಜನ ವಾಸಿಸುವ ಈ ಬೃಹತ್ ಅಪಾರ್ಟ್‌ಮೆಂಟ್‌ನಲ್ಲಿ ಈಗ ಮನುಷ್ಯರಿಗಿಂತ ಬೀದಿ ನಾಯಿಗಳದ್ದೇ ದರ್ಬಾರ್! ಹತ್ತಾರು ನಾಯಿಗಳು ಗುಂಪು ಕಟ್ಟಿಕೊಂಡು ಅಟ್ಯಾಕ್ ಮಾಡುತ್ತಿದ್ದರೆ, ನಿವಾಸಿಗಳು ಪ್ರಾಣಭಯದಲ್ಲಿ ದಿನ ಕಳೆಯುತ್ತಿದ್ದಾರೆ.
ಈ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳು ನಾಯಿಗಳ ಕ್ರೂರತ್ವಕ್ಕೆ ಸಾಕ್ಷಿ ನುಡಿಯುತ್ತಿವೆ. ಅದೆಷ್ಟೋ ಬಾರಿ ಮಕ್ಕಳು ಆಟವಾಡಲು ಹೋದಾಗ ನಾಯಿಗಳು ಅಟ್ಟಾಡಿಸಿವೆ. ತಾಯಂದಿರು ತಮ್ಮ ಮಕ್ಕಳನ್ನು ಆಚೆ ಕಳುಹಿಸಲು ನಡುಗುತ್ತಿದ್ದಾರೆ. ಕೋಟಿ ಕೋಟಿ ಹಣ ನೀಡಿ ನೆಮ್ಮದಿ ಬಯಸಿ ಬಂದವರಿಗೆ ಇಲ್ಲಿ ಸಿಗುತ್ತಿರುವುದು ಮಾತ್ರ ದಿನನಿತ್ಯದ ಆತಂಕ ಬದುಕು.
ಈ ಬಗ್ಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಈಗಾಗಲೇ ರಾಯಸಂದ್ರ ತಾಲೂಕು ಪಂಚಾಯಿತಿಗೆ ದೂರು ನೀಡಿದೆ. ಆದರೆ, ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಕುಳಿತಿದ್ದಾರೆ. ಜನರ ಪ್ರಾಣಕ್ಕೆ ಕುತ್ತು ಬಂದರೂ ಪಂಚಾಯಿತಿ ಆಡಳಿತ ಮಂಡಳಿ ಕಣ್ಣು ಮುಚ್ಚಿ ಕುಳಿತಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ