ರಸ್ತೆ, ಕಸ, ಬೀದಿದೀಪದ ಸಮಸ್ಯೆ ಇದ್ದರೆ ಆ್ಯಪಲ್ಲೇ ದೂರು ನೀಡಿ!

Published : May 02, 2022, 05:14 AM IST
ರಸ್ತೆ, ಕಸ, ಬೀದಿದೀಪದ ಸಮಸ್ಯೆ ಇದ್ದರೆ ಆ್ಯಪಲ್ಲೇ ದೂರು ನೀಡಿ!

ಸಾರಾಂಶ

* ಬಿಬಿಎಂಪಿಯಿಂದ ‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಅಭಿವೃದ್ಧಿ * ಫೋಟೋ ಸಮೇತ ಅಧಿಕಾರಿಗೆ ದೂರು ನೀಡಲು ಅವಕಾಶ * ರಸ್ತೆ, ಕಸ, ಬೀದಿದೀಪದ ಸಮಸ್ಯೆ ಇದ್ದರೆ ಆ್ಯಪಲ್ಲೇ ದೂರು ನೀಡಿ!

ಬೆಂಗಳೂರು(ಮೇ.02): ಸಾರ್ವಜನಿಕರು ಇನ್ನು ಮುಂದೆ ರಸ್ತೆ ಗುಂಡಿ, ಕಸ, ಬೀದಿ ದೀಪ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಕ್ಷಣ ಮಾತ್ರದಲ್ಲಿ ಫೋಟೋ ಸಮೇತ ದೂರು ನೀಡಬಹುದು. ಅದಕ್ಕಾಗಿ ಬಿಬಿಎಂಪಿ ‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಅಭಿವೃದ್ಧಿ ಪಡಿಸುತ್ತಿದೆ.

ಮೊಬೈಲ್‌ ಹಾಗೂ ಡೆಸ್‌್ಕಟಾಪ್‌ ಮೂಲಕ ಲಾಗಿನ್‌ ಆದ ಬಳಿಕ ಜಿಯೋ ಲೊಕೇಷನ್‌ವುಳ್ಳ ಫೋಟೋ ಸಮೇತ ದೂರು ನೀಡಬಹುದು. ಆ ದೂರು ಸಂಬಂಧಪಟ್ಟಅಧಿಕಾರಿಗಳಿಗೆ ರವಾನೆಯಾಗಲಿದ್ದು, ಕೂಡಲೇ ಸಮಸ್ಯೆ ಪರಿಹಾರಕ್ಕೆ ಪಾಲಿಕೆ ಕಾರ್ಯೋನ್ಮುಖವಾಗಲಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್‌ಗುಪ್ತಾ ಅವರು ತಿಳಿಸಿದ್ದಾರೆ.

ನಗರದ ಪುರಭವನದ ಸಭಾಂಗಣದಲ್ಲಿ ನಡೆದ ಪಾಲಿಕೆಯ ಎಲ್ಲಾ ವಲಯಗಳ ಸಾರ್ವಜನಿಕರ ಕುಂದು ಕೊರತೆಗಳ ಹಾಗೂ ಇತರೆ ಕಾರ್ಯ ಕಲಾಪಗಳ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ನಾಗರಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸಿದಾಗ ಮಾತ್ರ ಪಾಲಿಕೆ ಬಗ್ಗೆ ಉತ್ತಮ ಅಭಿಪ್ರಾಯ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಆತ್ಮಾವಲೋಕನ ಮಾಡಿಕೊಂಡು ಕೆಲಸ ಮಾಡಬೇಕು ಎಂದರು.

ಪಾಲಿಕೆಯು ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ‘ಸಹಾಯ’ ಆ್ಯಪ್‌ ಮೂಲಕ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸುತ್ತಿದೆ. ಜೊತೆಗೆ ನನ್ನ ಬೀದಿ ಸರಿಪಡಿಸಿ (ಫಿಕ್ಸ್‌ ಮೈ ಸ್ಟ್ರೀಟ್‌), ಶಿಲ್ಟ್‌ ಆ್ಯಂಡ್‌ ಟ್ರ್ಯಾಕ್ಟರ್‌ ಆ್ಯಪನ್ನು ಕೂಡ ಅಭಿವೃದ್ಧಿಪಡಿಸುತ್ತಿದೆ. ಸಮಸ್ಯೆಗಳನ್ನು ಮೂಲದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ಹೇಳಿದರು.

ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ತಂತ್ರಜ್ಞಾನದ ಸಹಾಯದೊಂದಿಗೆ ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯ. ಪಾಲಿಕೆ ಸಮರ್ಥವಾಗಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.

ಅನಾಥ ವಾಹನಗಳಿಗೆ ಮುಕ್ತಿ: ಕಮಲ್‌ ಪಂತ್‌

ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಮಾತನಾಡಿ, ನಗರದಲ್ಲಿ ಅನಾಥ ವಾಹನಗಳ ಸಮಸ್ಯೆ ಸಾಕಷ್ಟಿದೆ. ಆದರೆ, ಅವುಗಳ ತೆರವು ಕಾರ್ಯಾಚರಣೆ ಮಾಡಲು ಸ್ಥಳಾವಕಾಶದ ಅಭಾವವಿತ್ತು. ಇದೀಗ ಪಾಲಿಕೆ ಬಿಂಗೀಪುರದಲ್ಲಿ ಅನಾಥ ವಾಹನಗಳನ್ನು ತೆರವುಗೊಳಿಸಲು ಸ್ಥಳ ನೀಡಿದ್ದು, ಪಾಲಿಕೆ ಹಾಗೂ ಪೊಲೀಸ್‌ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ಮೂಲಕ ಅನಾಥ ವಾಹನಗಳ ಸಮೀಕ್ಷೆ ನಡೆಸಿ ವಾಹನ ಮಾಲಿಕರಿಗೆ ನೋಟೀಸ್‌ ನೀಡಲಾಗುತ್ತಿದೆ. ಆ ಬಳಿಕ ನಿಯಮಾನುಸಾರ ಅನಾಥ ವಾಹನಗಳನ್ನು ತೆರವುಗೊಳಿಸಲಾಗುವುದು. ಇದರಿಂದ ಪೊಲೀಸ್‌ ಇಲಾಖೆ ಮೇಲಿರುವ ಹೊರೆ ಬಹುತೇಕ ಕಡಿಮೆಯಾಗಲಿದ್ದು, ಈ ವ್ಯವಸ್ಥೆ ಇತರೆ ನಗರಗಳಿಗೆ ಮಾದರಿಯಾಗಲಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!