ಬಂಡೀಪುರ ಅರಣ್ಯದಲ್ಲಿ ಅಗ್ನಿ ನರ್ತನ ಮುಂದುವರೆದಿದೆ. ಸದ್ಯ ಸಿಎಂ ಕುಮಾರಸ್ವಾಮಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಸಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಾಮರಾಜನಗರ[ಫೆ.25]: ಸತತ 4 ದಿನಗಳಿಂದ ಬೆಂಕಿಯ ಕೆನ್ನಾಲಿಗೆಗೆ ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯದಲ್ಲಿ ಅಪಾರ ಹಾನಿ ಸಂಭವಿಸಿದ್ದು, ಸರೀಸೃಪಗಳು ಬಲಿಯಾಗಿವೆ. ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸುತ್ತಿದ್ದರೂ ಕಾಡಿನಲ್ಲಿ ಅಗ್ನಿ ನರ್ತನ ಮುಂದುವರೆದಿದೆ. ಸದ್ಯ ಸಿಎಂ ಕುಮಾರಸ್ವಾಮಿ ಬೆಂಕಿ ನಂದಿಸುವ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಸಲು ಆದೇಶಿಸಿದ್ದು, ಬೆಂಕಿ ಮತ್ತಷ್ಟು ಪ್ರದೆಶಕ್ಕೆ ಹಬ್ಬಿಕೊಳ್ಳುವ ಮೊದಲು ಸಿಬ್ಬಂದಿಗಳು ಅದನ್ನು ನಿಯಂತ್ರಿಸಲು ಯಶಸ್ವಿಯಾಗುವ ಸಾಧ್ಯತೆಗಳು ಕಂಡು ಬಂದಿವೆ.
ಈಗಾಗಲೇ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿನ ಕುರಿತಾಗಿ ಸಿಎಂ ಕುಮಾರಸ್ವಾಮಿ ಈಗಾಗಲೇ ಅಧಿಕಾರಿಗಳಿಂದ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಬೆಂಕಿಯನ್ನು ನಂದಿಸಲು ಅರಣ್ಯಾಧಿಕಾರಿಗಳಿಗೆ ಹೆಲಿಕಾಪ್ಟರ್ ಬಳಸಲು ಸೂಚಿಸಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಂಡೀಪುರ ಅರಣ್ಯದಲ್ಲಿ ಇಷ್ಟು ಪ್ರಮಾಣದ ಬೆಂಕಿ ಆವರಿಸಿದೆ. ಈ ಅಗ್ನಿ ನರ್ತನ ರಾಜ್ಯದ ಜನತೆಯಲ್ಲಿ ಆತಂಕವುಮಟು ಮಾಡಿದೆ. ಸದ್ಯ ಬೆಂಕಿ ನಂದಿಸಲು ಸಿಬ್ಬಂದಿಗಳೊಂದಿಗೆ ಸಾರ್ವಜನಿಕರೂ ಕೈ ಜೋಡಿಸಿದ್ದಾರೆ. ಇತ್ತ ಸ್ಯಾಂಡಲ್ವುಡ್ ನಟರೂ ಬಂಡೀಪುರದತ್ತ ಧಾವಿಸಿದ್ದು, ಕಾಡಿನ ರಕ್ಷಣೆಗಾಗಿ ಎಲ್ಲರೂ ಒಂದಾಗುವಂತೆ ಮನವಿ ಮಾಡಿದ್ದಾರೆ. ಈ ಕಾರ್ಯಕ್ಕೆ ಟೆಕಿಗಳೂ ಕೂಡಾ ನೂರಾರು ಸಂಖ್ಯೆಯಲ್ಲಿ ಧಾವಿಸಿದ್ದು, ಸ್ವಯಂ ಸೇವಕರಾಗಿ ಬೆಂಕಿ ನಂದಿಸಲು ಮುಂದಾಗಿದ್ದಾರೆ.