
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಡಿ.21): ಸಾಮಾನ್ಯವಾಗಿ ಒಂದು ಸಿನಿಮಾ ರಿಲೀಜ್ ಆಗ್ತಿದ್ರೆ ಅದಕ್ಕೆ ಅವರ ಅಭಿಮಾನಿಗಳು ಕಂಡ ಕಂಡಲ್ಲಿ ಪೋಸ್ಟರ್ ಹಚ್ಚೊದು, ಪಟಾಕಿ ಸಿಡಿಸೋದು, ಸಿಹಿ ಹಂಚಿ ಸಂಭ್ರಮಿಸೊದು ಕಾಮನ್.
ಆದರೆ ಇಲ್ಲೊಂದು ಸಿನಿಮಾಕ್ಕೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾಕ್ಕೆ ಪ್ರಮೋಟಿವ್ ಸಾಂಗ್‌ವೊಂದನ್ನ ರೂಪಿಸಿ ಯೂಟೂಬ್ ನಲ್ಲಿ ಎರಡೇ ದಿನದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನ ನೋಡುವಂತೆ ಮಾಡಿ ಗಮನ ಸೆಳೆದಿದ್ದು, ಪುಲ್ ಹವಾ ಕ್ರಿಯೆಟ್ ಮಾಡಿದ್ದಾರೆ.
ಹೀಗೆ ಗೆಳೆಯರೊಂದಿಗೆ ಸೇರಿ ಬಾಗಲಕೋಟೆಯ ಯುವಕರು ತಮ್ಮ ನೆಚ್ಚಿನ ನಟನ ಸಿನಿಮಾಕ್ಕೆ ಭರ್ಜರಿ ಪ್ರಮೋಟಿವ್ ಸಾಂಗ್‌ವೊಂದನ್ನ ತಯಾರಿಸಿದ್ದಾರೆ. ಆ ಸಿನಿಮಾ ಬೇರೆ ಯಾವುದೂ ಅಲ್ಲ ಅದುವೇ ರಾಜ್ಯಾದ್ಯಂತ ಬಿಡುಗಡೆ ಮುನ್ನವೇ ಸುದ್ದಿ ಮಾಡಿರೋ ರಾಕಿಂಗ್ ಸ್ಟಾರ್ ನಟಿಸಿರೋ ಕೆಜಿಎಫ್ ಸಿನಿಮಾ.
ಹೌದು. ಮುಳುಗಡೆ ನಗರಿಯ ಯುವ ಗಾಯಕ ವಿನಾಯಕ ದಂಡಗಿ ತಮ್ಮ ಗೆಳೆಯರೊಂದಿಗೆ ಸೇರಿ ರಾಜ್ಯಾದ್ಯಂತ ಸುದ್ದಿ ಮಾಡ್ತಿರೋ ತಮ್ಮ ನೆಚ್ಚಿನ ನಟ ಯಶ್ ಅವರ ಸಿನಿಮಾಕ್ಕಾಗಿ ಒಂದು ಪ್ರಮೋಟಿವ್ ಹಾಡೊಂದನ್ನು ಪ್ರೆಂಡ್ಸ್ ಕ್ರಿಯೇಷನ್ ಅಡಿಯಲ್ಲಿ ರವಿತೇಜ್ ಅವರ ಸಂಗೀತದಲ್ಲಿ ರೂಪಿಸಿದ್ದಾರೆ.
ಕೆಜಿಎಫ್ ಹಾಡುಗಳಂತೆ 3 ನಿಮಿಷ 25 ಸೆಕೆಂಡ್‌ನ ಹಾಡು ಇದಾಗಿದ್ದು, ಕೆಜಿಎಪ್ ಸಿನಿಮಾದ ವಿಶೇಷತೆ ಮತ್ತು ಯಶ್ ಅವರ ಅಭಿಯಾನದ ಕುರಿತು ಇರುವ ಹಾಡಾಗಿದೆ. ಇನ್ನು ಈ ಹಾಡನ್ನು ಯೂಟೂಬ್‌ನಲ್ಲಿ ಅಪಲೋಡ್ ಮಾಡಿದ್ದೆ ತಡ ಎರಡೇ ದಿನದಲ್ಲಿ 1 ಲಕ್ಷ 84 ಸಾವಿರ ಜನ್ರು ವೀಕ್ಷಣೆ ಮಾಡಿದ್ದರೆ, ಇತ್ತ 7 ಸಾವಿರ ಜನ ಲೈಕ್ ಮಾಡಿದ್ದಾರೆ.
"
ಹೀಗಾಗಿ ತಮ್ಮ ನೆಚ್ಚಿನ ನಟ ಯಶ್‌ಗಾಗಿ ಇಂತಹ ಹಾಡು ಮಾಡಿದ್ದಕ್ಕೆ ಸಾರ್ಥಕವಾಗಿದೆ ಅಂತಾರೆ ಪ್ರಮೋಟಿವ್ ಸಾಂಗ್‌ನ ಯುವ ಗಾಯಕ ವಿನಾಯಕ ದಂಡಗಿ.
ಇನ್ನು ಕೆಜಿಎಫ್ ಗಾಗಿ ಮತ್ತೊಬ್ಬ ಯಶ್ ಅಭಿಮಾನಿ ಪ್ರಕಾಶ್ ಎಂಬಾತ ಬರೆದು ರೂಪಿಸಿದ " ಕನ್ನಡದ ಹೆಮ್ಮೆ ಕೂಗಿ ಹೇಳು ಒಮ್ಮೆ" ಎಂಬ ಪ್ರಮೋಟಿವ್ ಹಾಡಿನ ಮೇಲೆ ಬಹಳಷ್ಟು ನಿರೀಕ್ಷೆಯನ್ನು ಬಾಗಲಕೋಟೆ ಹುಡುಗರು ಹೊಂದಿದ್ದಾರೆ. ಇತ್ತ ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪತ್ನಿ ಲಿಖಿತಾ ಕೂಡ ಲೈಕ್ ಮಾಡಿದ್ದು, ಇನ್ಸಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
ಈ ಹಿಂದೆ ರಾಜ್‌ಕುಮಾರ ಸಿನಿಮಾಗೂ ಹಾಡೊಂದನ್ನು ತಯಾರಿಸಿದ್ದ ಈ ಹುಡುಗರು ಇದೀಗ ಕೆಜಿಎಫ್ ಸಿನಿಮಾಕ್ಕೆ ಪ್ರಮೋಟಿವ್ ಸಾಂಗ್ ಮಾಡಿದ್ದು, ಈ ಹಾಡು ನಟ ಯಶ್ ಅವರಿಗೆ ಮುಟ್ಟಿದ್ರೆ ಸಾಕು ತಮ್ಮ ಪ್ರಯತ್ನ ಸಾರ್ಥಕ ಅಂತ ಆಶಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯಾದ್ಯಂತ ಬಿಡುಗಡೆ ಮುನ್ನವೇ ಬಹಳಷ್ಟು ನಿರೀಕ್ಷೆ ಹುಟ್ಟಿಸಿರೋ ಕೆಜಿಎಫ್ ಸಿನಿಮಾಗಾಗಿ ನಟ ಯಶ್ ಅವರ ಅಭಿಮಾನಿಗಳು ಒಂದಿಲ್ಲೊಂದು ಪ್ರಯೋಗಕ್ಕೆ ಮುಂದಾಗಿದ್ದರೆ ಇತ್ತ ಬಾಗಲಕೋಟೆ ಹುಡುಗರು. ತಯಾರಿಸಿದ ಪ್ರಮೋಟಿವ್ ಸಾಂಗ್ ಮಾತ್ರ ಸಖತ್ ಆಗಿಯೇ ಮೂಡಿ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ