ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಧ್ವನಿ ಎತ್ತಿದ ಬಾಬಾ ರಾಮದೇವ್

By Suvarna NewsFirst Published Jan 29, 2020, 8:30 PM IST
Highlights

ಜನವರಿ 30 ರಿಂದ ಫೆ 3 ರವರೆಗೆ ಹುಬ್ಬಳ್ಳಿಯ ಯೋಗ ಶಿಬಿರ ಹಿನ್ನೆಲೆಯಲ್ಲಿ ನಗರಕ್ಕಾಗಮಿಸಿರುವ ಬಾಬಾ ರಾಮದೇವ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ ಸ್ವಾಮೀಜಿ ಹಾಗೂ ಸಿಎಎ ಬಗ್ಗೆ ಮಾತನಾಡಿದರು. ಹಾಗಾದ್ರೆ ಏನೆಲ್ಲ ಮಾತನಾಡಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
 

ಹುಬ್ಬಳ್ಳಿ, [ಜ.29];  ಈ ಸಾರಿ ಪದ್ಮಶ್ರಿ, ಪದ್ಮಭೂಷಣ ಪ್ರಶಸ್ತಿಗಳು ಕೆಲವು ಸಂತರಿಗೆ ನೀಡಿದೆ. ಸಾಧು ಸಂತರಿಗೆ ಭಾರತರತ್ನ ಕೂಡಾ ನೀಡಬೇಕು ಎಂದು ಹೇಳಿದರು. 

ಜನವರಿ 30 ರಿಂದ ಫೆ 3 ರವರೆಗೆ ಹುಬ್ಬಳ್ಳಿಯ ಯೋಗ ಶಿಬಿರ ಹಿನ್ನೆಲೆಯಲ್ಲಿ ನಗರಕ್ಕಾಗಮಿಸಿರುವ ಬಾಬಾ ರಾಮದೇವ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಶಿವಕುಮಾರ ಸ್ವಾಮೀಜಿಯಂತ‌ ಮಹಾನ್ ಸಂತರು ಇದ್ದಾರೆ. ಅಂತಹವರಿಗೆ ಮೋದಿ ಸರ್ಕಾರ ಭಾರತ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದರು.

ನಡೆದಾಡುವ ದೇವರಿಗೆ 'ಭಾರತ ರತ್ನ': ಪ್ರಧಾನಿಗೆ ಮತ್ತೆ ಪತ್ರ ಬರೆದ ಸಿಎಂ

ಇದೇ ವೇಳೆ ಸಿಎಎ ಬಗ್ಗೆ ಪ್ರತಿಕ್ರಿಯಿಸಿ, ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಮುಸ್ಲಿಂ ಬಾಂಧವರಲ್ಲಿ ತಪ್ಪು ಕಲ್ಪನೆ ಬಿತ್ತಲಾಗಿದೆ. ದೇಶದ ಯಾವುದೇ ನಾಗರಿಕರನ್ನು ಕೂಡ ಹೊರ ಹಾಕಲಾಗುತ್ತದೆ ಎಂದು ಎಲ್ಲಿಯೂ ಕೂಡ ಹೇಳಿಲ್ಲ. ಇದರ ಬಗ್ಗೆ ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಯೋಗಗುರು ಬಾಬಾ ರಾಮದೇವ ತಿಳಿಸಿದರು.

ಭಾರತೀಯ ಮುಸ್ಲಿಂರಲ್ಲಿ ಪ್ರತಿಶತ 90 ರಷ್ಟು ಜನ ದೇಶ ಭಕ್ತರಿದ್ದಾರೆ.ಅಲ್ಲದೇ ದೇಶದಲ್ಲಿ ಯಾವುದೇ ಜಾತಿ ನಾಗರಿಕರಿಗೂ ಕೂಡ ಪೌರತ್ವ ತಿದ್ದುಪಡಿ ಕಾಯಿದೆಯಿಂದ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದೂ ಮುಸ್ಲಿಂ ಎಲ್ಲರೂ ಸೇರಿ ದೇಶವನ್ನು ಮೇಲೆತ್ತುವ ಕೆಲಸ ಮಾಡಬೇಕು. ದೇಶದಲ್ಲಿ ಏಕತಾ ಭಾವನೆ ಬೆಳೆಸಿಕೊಂಡು ಜೀವನ ನಡೆಸಬೇಕು ಎಂದರು.

click me!