ರೈತ ಕೇಂದ್ರದಲ್ಲಿ ವಿಮೆ ಏಜೆಂಟ್‌ ಹಾಜರಿ ಕಡ್ಡಾಯ; ಬಿ.ಸಿ.ಪಾಟೀಲ್

By Kannadaprabha NewsFirst Published Sep 17, 2022, 8:11 AM IST
Highlights
  • ರೈತ ಕೇಂದ್ರದಲ್ಲಿ ವಿಮೆ ಏಜೆಂಟ್‌ ಹಾಜರಿ ಕಡ್ಡಾಯ
  • ಏಜೆಂಟರಿಂದ ರೈತರಿಗೆ ವಿಮೆ ಕಂಪನಿ ಬಗ್ಗೆ ಮಾಹಿತಿ,
  • - ಪರಿಷತ್ತಿನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿಕೆ

ವಿಧಾನ ಪರಿಷತ್ತು (ಸೆ.17) : ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪನಿ ಪ್ರತಿನಿಧಿ ಹಾಜರಿರುವುದು ಕಡ್ಡಾಯ. ರೈತರು ಫಸಲ್‌ ವಿಮೆಯನ್ನು ಯಾವ ಕಂಪನಿಯಲ್ಲಿ ಮಾಡಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿಯಬೇಕು ಎಂಬ ಕಾರಣಕ್ಕೆ ಈ ಆದೇಶ ಮಾಡಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿಳಿಸಿದರು. ಶುಕ್ರವಾರ ಸದಸ್ಯ ಕೆ.ಹರೀಶ್‌ಕುಮಾರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರೈತರು ಯಾವ ಕಂಪನಿಯಲ್ಲಿ ವಿಮೆ ಮಾಡಿಸುತ್ತಿದ್ದಾರೆ ಎಂದು ತಿಳಿಯುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪನಿ ಪ್ರತಿನಿಧಿ ಹಾಜರಾಗಿರಬೇಕು ಎಂದು ಆದೇಶ ಮಾಡಲಾಗಿದೆ ಎಂದು ಹೇಳಿದರು

Crop Damage: ಬೆಳೆಹಾನಿ ಪರಿಹಾರಕ್ಕೆ ಶೀಘ್ರ ಕ್ರಮವಹಿಸಿ: ಸಚಿವ ಬಿ.ಸಿ.ಪಾಟೀಲ್‌ ಸೂಚನೆ

ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ವಿಮಾ ಘಟಕವಾರು ವಿವಿಧ ಬೆಳೆಗಳನ್ನು ಬೆಳೆ ವಿಮೆ ನೋಂದಣಿಗಾಗಿ ಸೂಚಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಬೆಳೆ ಆವರಿಸಿದ ವಿಸ್ತೀರ್ಣಕ್ಕೆ ಅನುಗುಣವಾಗಿ ಕೊಡಗು, ದಕ್ಷಿಣ ಕನ್ನಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ 27 ಜಿಲ್ಲೆಗಳಲ್ಲಿ ನೋಂದಣಿ ಮಾಡಬಹುದು. ಹಾಗೆಯೇ ಬೇಸಿಗೆ ಹಂಗಾಮಿನಲ್ಲಿ ಉಡುಪಿ, ಕೊಡಗು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಬೀದರ್‌ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 26 ಜಿಲ್ಲೆಗಳಲ್ಲಿ ಬೆಳೆ ವಿಮೆ ನೋಂದಣಿಗಾಗಿ ಅಧಿಸೂಚಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕೆ.ಹರೀಶ್‌ಕುಮಾರ್‌ ಅವರು, ರೈತರು ಬೆಳೆ ವಿಮೆ ಹಣವನ್ನು ಸೊಸೈಟಿಯಲ್ಲಿ ಕಟ್ಟುತ್ತಿದ್ದಾರೆ. ಆದರೆ, ಯಾವ ಕಂಪನಿಯಲ್ಲಿ ತಮ್ಮ ವಿಮೆ ಇದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಅಲ್ಲದೇ ಮೂರ್ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಬಗ್ಗೆ ಯಾರಲ್ಲೂ ಆಸಕ್ತಿ ಇಲ್ಲದಂತಾಗುತ್ತಿದೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ರೈತರ ಸಮಾವೇಶ: ಸಚಿವ ಬಿ.ಸಿ.ಪಾಟೀಲ್‌

click me!