ರಾಗಿ ಕಳ್ಳ ಆರೋಪ: ಧರ್ಮಸ್ಥಳದಲ್ಲಿ ಶಿವಲಿಂಗೇಗೌಡ ಆಣೆಪ್ರಮಾಣ

By Govindaraj SFirst Published Aug 30, 2022, 5:15 AM IST
Highlights

ಬಿಜೆಪಿ ಮುಖಂಡರು ತನ್ನ ಮೇಲೆ ಮಾಡಿರುವ ರಾಗಿ ಕಳ್ಳ ಆರೋಪದ ಬಗ್ಗೆ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಆಣೆ ಪ್ರಮಾಣ ಮಾಡಿದ್ದೇನೆ. ಆರೋಪ ಮಾಡಿದವರು ಶ್ರೀಸ್ವಾಮಿಯ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಹಾಸನ ಜಿಲ್ಲೆ ಅರಸೀಕೆರೆಯ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

ಬೆಳ್ತಂಗಡಿ (ಆ.30): ಬಿಜೆಪಿ ಮುಖಂಡರು ತನ್ನ ಮೇಲೆ ಮಾಡಿರುವ ರಾಗಿ ಕಳ್ಳ ಆರೋಪದ ಬಗ್ಗೆ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಆಣೆ ಪ್ರಮಾಣ ಮಾಡಿದ್ದೇನೆ. ಆರೋಪ ಮಾಡಿದವರು ಶ್ರೀಸ್ವಾಮಿಯ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಹಾಸನ ಜಿಲ್ಲೆ ಅರಸೀಕೆರೆಯ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. 

ಬಿಜೆಪಿ ಮುಖಂಡರು ತಮ್ಮ ಮೇಲೆ ಮಾಡಿರುವ ಆರೋಪಗಳು ಸುಳ್ಳು ಎಂಬ ಬಗ್ಗೆ ಶ್ರೀ ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಿದ್ದೇನೆ ಎಂದ ಅವರು ಆರೋಪ ಮಾಡಿದವರೂ ಮಂಜುನಾಥಸ್ವಾಮಿಯ ಮುಂದೆ ಬಂದು ಪ್ರಮಾಣ ಮಾಡಲಿ ಅಥವಾ ದಾಖಲೆಗಳನ್ನು ಬಿಡುಗಡೆ ಮಾಡಲಿ. ದಾಖಲೆಗಳನ್ನು ನೀಡಿದರೆ ಕಾನೂನು ರೀತಿಯ ಹೋರಾಟಕ್ಕೂ ತಾವು ಸಿದ್ಧರಿರುವುದಾಗಿ ಅವರು ತಿಳಿಸಿದರು. ಬಿಜೆಪಿ ಮುಖಂಡ ರವಿಕುಮಾರ್‌ ಅವರು ಸಾರ್ವಜನಿಕವಾಗಿ ರಾಗಿ ಕಳ್ಳ ಎಂದು ಆರೋಪ ಮಾಡಿದ್ದಾರೆ. ಆಗಲೇ ಅವರಿಗೆ ದಾಖಲೆಗಳನ್ನು ನೀಡಿ ಅಥವಾ ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬನ್ನಿ ಎಂದು ಹೇಳಿದ್ದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಹಿತರಕ್ಷಣೆ: ಶಾಸಕ ರಮೇಶ್‌ ಕುಮಾರ್‌

ಆದರೆ ಆರೋಪ ಮಾಡಿದವರು ಯಾವುದಕ್ಕೂ ಬರಲಿಲ್ಲ. ಆದ್ದರಿಂದ ತಾನೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ತಾನು ಒಂದು ಕೆ.ಜಿ. ರಾಗಿಯನ್ನೂ ಕದ್ದಿಲ್ಲ, ನಾನು ರಾಗಿ ಕಳ್ಳ ಅಲ್ಲ ಎಂದು ಪ್ರಮಾಣ ಮಾಡಿರುವುದಾಗಿ ತಿಳಿಸಿದರು. ಜನಪ್ರತಿನಿಧಿಗಳ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುವುದು ಸರಿಯಲ್ಲ. ಇಂತಹ ಮಾತುಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ರಾಜಕೀಯ ಮಾಡುವವರು ಗೌರವಯುತವಾಗಿ ರಾಜಕೀಯ ಮಾಡಬೇಕು, ಕೊಳಕು ರಾಜಕೀಯಕ್ಕೆ ಇಳಿಯಬಾರದು. ಅದಕ್ಕಾಗಿ ಇಲ್ಲಿಗೆ ಬಂದು ಪ್ರಮಾಣ ಮಾಡಿದ್ದೇನೆ ಎಂದರು. 

ಜನೋತ್ಸವಕ್ಕೆ ಕೋಲಾರ ಜಿಲ್ಲೆಯಿಂದ 200 ಬಸ್‌: ಸಚಿವ ಮುನಿರತ್ನ

ತನ್ನ ಕ್ಷೇತ್ರದಲ್ಲಿ ಅಶಾಂತಿ ನಿರ್ಮಾಣವಾಗಿದ್ದು, ಈ ಅಶಾಂತಿ ಶಮನವಾಗಿ ನೆಮ್ಮದಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ಶಂಕರಲಿಂಗೇಗೌಡ ಅವರು ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ಹೆಗ್ಗಡೆಯರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು. ಶಾಸಕರೊಂದಿಗೆ ಅರಸೀಕೆರೆಯಿಂದ ಅವರ ನೂರಾರು ಅಭಿಮಾನಿಗಳೂ ಆಗಮಿಸಿದ್ದರು.

click me!