ರಾಜ್ಯದಲ್ಲಿ ಬರಗಾಲ ಬಿದ್ದು ಸಂಕಷ್ಟದಲ್ಲಿದ್ದೇವೆ. ಬರ ಪರಿಹಾರಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಅರ್ಜಿ ಸಲ್ಲಿಕೆ ಮಾಡಿ 5 ತಿಂಗಳಾಗಿದೆ. ಆದರೂ, ಅಮಿತ್ ಶಾ ಅವರು ಬರಿಗೈಯಲ್ಲಿ ರಾಜ್ಯಕ್ಕೆ ಆಮಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಬೆಂಗಳೂರು (ಫೆ.11): ರಾಜ್ಯದಲ್ಲಿ ಬರಗಾಲ ಬಿದ್ದು ಸಂಕಷ್ಟದಲ್ಲಿದ್ದೇವೆ. ಬರ ಪರಿಹಾರಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಅರ್ಜಿ ಸಲ್ಲಿಕೆ ಮಾಡಿ 5 ತಿಂಗಳಾಗಿದೆ. ಆದರೂ, ಅಮಿತ್ ಶಾ ಅವರು ಬರಿಗೈಯಲ್ಲಿ ರಾಜ್ಯಕ್ಕೆ ಆಮಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಬರೀ ಗೈಯಲ್ಲಿ ರಾಜ್ಯಕ್ಕೆ ಬಂದಿದ್ದಾರೆ. ಬರ ಪರಿಹಾರಕ್ಕೆ ಮನವಿ ಸಲ್ಲಿಸಿ 5 ತಿಂಗಳಾಗಿದೆ. ಒಂದು ಸಭೆ ಸಹಾ ಮಾಡಿಲ್ಲ. ಬರ ಪರಿಹಾರ ಕೊಡಿ ಅಂತ ಸಾಕಷ್ಟು ಭಾರಿ ಪತ್ರ ಬರೆದಿದ್ದೇವೆ. ಆದ್ರೂ ಪರಿಹಾರ ಕೊಟ್ಟಿಲ್ಲ. ಇವತ್ತಿನವರೆಗೂ ಬರ ಬಗ್ಗೆ ಒಂದು ಸಭೆ ಮಾಡಿಲ್ಲ. ಬರ ಪರಿಹಾರ ಕೊಡಲು ಅಧ್ಯಕ್ಷರೇ ಮಿಸ್ಟರ್ ಅಮಿತ್ ಶಾ ಆಗಿದ್ದಾರೆ. ಇವತ್ತಿನವರೆಗೆ ಒಂದು ಸಭೆ ಮಾಡಿಲ್ಲ, ಐದು ತಿಂಗಳಾದವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೈಕಮಾಂಡ್‌ಗೆ ಗುಲಾಮನಲ್ಲ, ನಾನು ವಿಧೇಯನಾಗಿದ್ದೇನೆ ಅಷ್ಟೇ: ಸಚಿವ ಕೆ.ಎನ್. ರಾಜಣ್ಣ
ರೈತರ ಬಗ್ಗೆ, ದೇಶದ ಬಗ್ಗೆ, ಬಡವರ ಬಗ್ಗೆ ಅವರಿಗೆ ಮಾತಾಡುವ ನೈತಿಕತೆ ಇಲ್ಲ. ರೈತರು ಕಷ್ಟ ಪಡ್ತಿದ್ದಾರೆ, ನೀರಿಗೆ ಸಮಸ್ಯೆ ಇದೆ, ಕೆಲಸಕ್ಕೆ ಕಷ್ಟ ಇದೆ. ನರೇಗಾದಡಿ ಬರಗಾಲ ಇದ್ದಾಗ ಕೆಲಸದ ದಿನಗಳನ್ನು 150ಕ್ಕೆ ಏರಿಸಬೇಕು. ಇದರ ಬಗ್ಗೆ ಪತ್ರ ಕೊಟ್ಟಿದೀವಿ, ಇವತ್ತಿನವರೆಗೆ ಇದಕ್ಕೂ ಅನುಮತಿ ಕೊಟ್ಟಿಲ್ಲ. ಇದರೆಲ್ಲದರ ಬಗ್ಗೆ ಅಮಿತ್ ಶಾ ಅವರಿಗೆ ಮಾಧ್ಯಮಗಳು ಪ್ರಶ್ನೆ ಮಾಡಬೇಕಿದೆ, ಅವರಿಗೆ ಪ್ರಶ್ನೆ ಮಾಡಿ ನೀವು. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಿಂದ ಅಮಿತ್ ಶಾ ಚುನಾವಣಾ ರಣಕಹಳೆ ಮಾಡಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಣ ಕಹಳೆ ಅಂದರೇನು? ನೀವು ಬಳಸುವ ಪದ ಇದೆಯಲ್ಲ ಕಹಳೆ, ಏನದು? ನಾವು ಈ ಸಲ ಮೈಸೂರು, ಚಾಮರಾಜನಗರ ಎರಡೂ ಕಡೆಯೂ ಗೆಲ್ಲುತ್ತೇವೆ ಎಂದು ಹೇಳಿದರು.
ತೆರಿಗೆ ಹಂಚಿಕೆ ಕುರಿತ ನಿರ್ಮಲಾ ಸೀತಾರಾಮನ್ ಸ್ಪಷ್ಟನೆಗೆ ದೇವೇಗೌಡರ ಬೆಂಬಲ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ದೇವೇಗೌಡರು ಈಗ ಬಿಜೆಪಿಯವರ ಜತೆ ಸೇರಿಕೊಂಡಿದ್ದಾರೆ. ಅದಕ್ಕೆ ನಿರ್ಮಲಾ ಸೀತಾರಾಮನ್ ಹೇಳಿಕೆ ಸರಿ ಅಂದಿದ್ದಾರೆ. ಇದೇ ದೇವೇಗೌಡರು, ನಾನು ಮುಂದಿನ ಜನ್ಮ ಅಂತ ಇದ್ರೆ ಮುಸ್ಲಿಮನಾಗಿ ಹುಟ್ತೀನಿ ಅಂದಿದ್ದರು. ಈಗ ಏನ್ ಹೇಳ್ತಾರೆ ದೇವೇಗೌಡರು? ನಾವು ಇದನ್ನೆಲ್ಲ ಹೇಳೋಕ್ಕೆ ಹೋಗಬಾರದು. ದೇವೇಗೌಡರು ಯಜಮಾನರು, ಮಾಜಿ ಪ್ರಧಾನಿಗಳು ಹೀಗೆಲ್ಲ ಹೇಳಬಾರದು. ಬಿಜೆಪಿ ಜತೆ ಮೈತ್ರಿ ಇದೆ ಅಂತ ಅವರು ಮಾಡಿರುವ ಅನ್ಯಾಯವೆಲ್ಲ ಸರಿ ಅಂತ ಹೇಳಬಾರದು ಎಂದು ಹೇಳಿದರು.
ಈಶ್ವರಪ್ಪ ವಿರುದ್ಧ ಕೇಸ್ ಮುಖೇನ ಕಾನೂನಿದೆ ಎಂಬುದು ಸಾಬೀತು: ಸಚಿವ ಮಧು ಬಂಗಾರಪ್ಪ
ಸೆಪ್ಟೆಂಬರ್ 13ರಂದು ರಾಜ್ಯದಲ್ಲಿ ಬರ ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ನಾವು ಪರಿಹಾರ ಕ್ರಮಕೈಗೊಳ್ಳೋದಕ್ಕೆ ಬರ ಪರಿಹಾರಕ್ಕೆ ಸೆಪ್ಟೆಂಬರ್ 23 ಕ್ಕೆ ಮನವಿ ಸಲ್ಲಿಸಿದ್ದೇವೆ. ಮೂರು ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. 18,178 ಕೋಟಿ ಪರಿಹಾರವನ್ನ ನಾವು ಕೇಳಿದ್ದೆವು. ಸಿಎಂ ಜೊತೆ ನಾನು ಸಹ ತೆರಳಿ ಪ್ರಧಾನಿಯನ್ನ ಭೇಟಿ ಮಾಡಿ ಮನವಿ ಮಾಡಿದ್ದೆವು. ಬೆಂಗಳೂರಿಗೂ ಬಂದಾಗ ಸಿಎಂ ಮತ್ತೆ ಮನವಿ ಮಾಡಿದ್ದಾರೆ. ಡಿಸೆಂಬರ್ 23 ಸಭೆ ಮಾಡ್ತೀವಿ ಅಂತ ಕೇಂದ್ರ ಗೃಹ ಸಚಿವರು ಹೇಳಿದ್ದರು ಎಂದರು.