ನಾನು ಸಿಎಂ, ಅಂದ್ರೆ ಕಾಮನ್‌ ಮ್ಯಾನ್‌: ಮಕ್ಕಳ ಪ್ರಶ್ನೆಗೆ ಹಮ್ಮುಬಿಮ್ಮಲ್ಲದೆ ಬೊಮ್ಮಾಯಿ ಉತ್ತರ!

Published : Aug 23, 2021, 08:44 AM ISTUpdated : Aug 23, 2021, 09:10 AM IST
ನಾನು ಸಿಎಂ, ಅಂದ್ರೆ ಕಾಮನ್‌ ಮ್ಯಾನ್‌: ಮಕ್ಕಳ ಪ್ರಶ್ನೆಗೆ ಹಮ್ಮುಬಿಮ್ಮಲ್ಲದೆ ಬೊಮ್ಮಾಯಿ ಉತ್ತರ!

ಸಾರಾಂಶ

* ನನ್ನ ನೆಚ್ಚಿನ ನಟ ಡಾ.ರಾಜ್‌ಕುಮಾರ್‌: ಸಿಎಂ ಬೊಮ್ಮಾಯಿ * ಮಕ್ಕಳ ಜತೆ ಸಿಎಂ ಸಂವಾದ; ವೀಡಿಯೋ ವೈರಲ್‌ * ಟೀವಿ ಕಾರ್ಯಕ್ರಮದಲ್ಲಿ ಪುಟ್ಟಮಕ್ಕಳ ಪ್ರಶ್ನೆಗೆ ಹಮ್ಮುಬಿಮ್ಮಲ್ಲದೆ ಬೊಮ್ಮಾಯಿ ಉತ್ತರ

ಬೆಂಗಳೂರು(ಆ.23): ನನ್ನ ನೆಚ್ಚಿನ ನಟ ಡಾ ರಾಜ್‌ಕುಮಾರ್‌, ನೆಚ್ಚಿನ ನಟಿಯರು ಹಲವರು ಇದ್ದಾರೆ. ಒಬ್ಬರು ಹೆಸರು ಹೇಳಿ, ಮತ್ತೊಬ್ಬರ ಹೆಸರು ಹೇಳದಿದ್ದರೆ ಅವರಿಗೆ ಬೇಸರ ಆಗುತ್ತದೆ.

- ಹೀಗೆ ಹೇಳಿ ಎಲ್ಲರಲ್ಲೂ ನಗು ಮೂಡಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಜೀ ಕನ್ನಡ ವಾಹಿನಿಯ 15ನೇ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಸಿಎಂ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ವೇದಿಕೆ ಮೇಲೆ ಮಕ್ಕಳು ಹಾಗೂ ಸಿಎಂ ನಡುವೆ ನಡೆದ ಪ್ರಶ್ನೋತ್ತರಗಳು ಇಲ್ಲಿವೆ.

* ಸಿಎಂ ಹಾಗೆ ಇರುತ್ತಾರೆ, ಹೀಗೆ ಇರುತ್ತಾರೆ ಅಂತಾರೆ. ಆದ್ರೆ ನೀವು ಇಷ್ಟುಸಿಂಪಲ್ಲಾಗಿದ್ದೀರಲ್ಲ?

-ಇವನು ಸ್ವಲ್ಪ ಪೊಲಿಟಿಕಲ್ಲಾಗಿದ್ದಾನೆ. ಅದಕ್ಕೆ ಈ ಪ್ರಶ್ನೆ ಕೇಳಿದ್ದಾನೆ. ಸಿನಿಮಾಗಳಲ್ಲಿ ಆರ್ಭಟ ಇರಬೇಕು. ಆರ್ಭಟ ಇದ್ದರೇನೆ ಜನ ಬರೋದು. ನಾವು ಇಲ್ಲಿ ಆರ್ಭಟ ಮಾಡಿದರೆ ಜನ ಕೇಳಲ್ಲ. ಹೀಗಾಗಿ ಸಿಂಪಲ್ಲಾಗಿಯೇ ಇರಬೇಕು.

* ನಿಮ್ಮ ಅಚ್ಚುಮೆಚ್ಚಿನ ನಾಯಕಿ ಯಾರು?

-ತುಂಬಾ ಟಫ್‌ ಪ್ರಶ್ನೆ ಕೇಳಿದ್ದಿಯಾ. ಯಾಕೆಂದರೆ ಮೆಚ್ಚಿನ ನಾಯಕಿಯರು ತುಂಬಾ ಮಂದಿ ಇದ್ದಾರೆ. ಒಬ್ಬರ ಹೆಸರು ಹೇಳಿ, ಮತ್ತೊಬ್ಬರ ಹೆಸರು ಹೇಳದಿದ್ದರೆ ಅವರಿಗೆ ಬೇಸರ ಆಗುತ್ತದೆ. ಆದರೂ ಹೇಳ್ತಿನಿ, ನನ್ನ ಆಲ್‌ ಟೈಮ್‌ ಫೇವರೇಟ್‌ ನಟಿ ಮಧು ಬಾಲ.

* ಕನ್ನಡಕ್ಕೇ ಅಂತ ಬಂದಾಗ ಯಾರು ಇಷ್ಟ?

-ನಮ್ಮ ಕಾಲದ ನಟಿಯರಾದ ಕಲ್ಪನಾ, ಜಯಂತಿ ಹಾಗೂ ಭಾರತಿ ಅವರು.

* ನಿಮ್ಮ ಮೆಚ್ಚಿನ ಹೀರೋ ಯಾರು?

-ಅಚ್ಚುಮೆಚ್ಚಿನ ಹೀರೋ ಡಾ ರಾಜ್‌ಕುಮಾರ್‌ ಅವರು.

* ಯಾವಾಗಲೂ ನೀವು ಮೆಲುಕು ಹಾಕುವ ಹಾಡು ಯಾವುದು?

-ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಗೂ ಬಾನಿಗೊಂದು ಎಲ್ಲೇ ಎಲ್ಲಿದೆ... ಹಾಡು.

* ನಿಮ್ಮ ತಂದೆಯವರಿಂದ ನೀವು ಕಲಿತ ಪಾಠ ಏನು?

-ನಾನು ಅವರ ಬಳಿ ಯಾವುದೋ ವಿಷಯಕ್ಕೆ ಒಮ್ಮೆ ವಾದ ಮಾಡಿದ್ದೆ. ಅದು ತಪ್ಪು ಅಂತ ಗೊತ್ತಾದ ಮೇಲೆ ಅದನ್ನು ತುಂಬಾ ಕಷ್ಟದಿಂದ ಒಪ್ಪಿಕೊಂಡೆ. ಆಗ ನಮ್ಮ ತಂದೆ ಹೇಳಿದ್ದು, ನಿನ್ನ ಕೋಪ ಕಡಿಮೆ ಆಗಬೇಕು ಅಂದರೆ ಇನ್ನೊಬ್ಬರ ಮಾತು ಕೇಳು, ಇಲ್ಲ ಪುಸ್ತಕ ಓದು ಅಂತ ಹೇಳಿದ್ದರು. ಅದನ್ನು ನಾನು ಈಗಲೂ ಮಾಡುತ್ತಿದ್ದೇನೆ.

* ಸಿಎಂ ಆಗಿದ್ದರೂ ನಮ್ಮ ಜತೆ ನಿಂತು ಸಿನಿಮಾ ಹಾಡು ಹಾಡುತ್ತಿದ್ದಾರೆ, ನಟ, ನಟಿಯರು ಹೆಸರು ಹೇಳುತ್ತಿದ್ದಾರಲ್ಲ?

-ನಾನು ಸಿಎಂ. ಅಂದ್ರೆ ಕಾಮನ್‌ ಮ್ಯಾನ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜೈಲಿನಿಂದ ಹೊರಬಂದ ಶಾಸಕ ಪಪ್ಪಿ: ನಟ ದರ್ಶನ್‌ ಭೇಟಿ, ಡಿಕೆ ಶಿವಕುಮಾರ್ ಬಗ್ಗೆ ಹೇಳಿದ್ದೇನು?
Kogilu Layout: ಶೆಡ್‌ ಧ್ವಂಸ ಕುರಿತು ಪಾಕ್‌ಗೆ ಉಗ್ರರಿಂದ ಮಾಹಿತಿ, ಇದು ಸ್ಲೀಪರ್‌ಸೆಲ್‌ಗಳ ಕೆಲಸ: ಆರ್ ಅಶೋಕ್