ಭ್ರಷ್ಟಾಚಾರ ಆರೋಪ: 8 ಬಿಬಿಎಂಪಿ ಅಧಿಕಾರಿ ವಿರುದ್ಧ ಎಫ್‌ಐಆರ್

By Ravi JanekalFirst Published Sep 29, 2022, 10:05 AM IST
Highlights

2015 ರಲ್ಲಿ ಟಿಡಿಆರ್(TDR) ಹೆಸರಲ್ಲಿ ಬಿಬಿಎಂಪಿ ಗೆ ವಂಚನೆ ಮಾಡಿರುವ ಅಧಿಕಾರಿಗಳು. ಬರೋಬ್ಬರಿ 1 ಕೋಟಿ 20 ಲಕ್ಷ ವಂಚಿಸಿರುವ ಅಧಿಕಾರಿಗಳು. ವಂಚನೆ ಮಾಡಿರುವ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬೆಂಗಳೂರು (ಸೆ.29) : ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪ ಹಿನ್ನೆಲೆ ಬಿಬಿಎಂಪಿಯ 8 ಜನ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2015 ರಲ್ಲಿ ಟಿಡಿಆರ್(TDR) ಹೆಸರಲ್ಲಿ ಬಿಬಿಎಂಪಿ ಗೆ ವಂಚನೆ ಮಾಡಿರುವ ಅಧಿಕಾರಿಗಳು. ಬರೋಬ್ಬರಿ 1 ಕೋಟಿ 20 ಲಕ್ಷ ವಂಚಿಸಿರುವ ಅಧಿಕಾರಿಗಳು. ವಂಚನೆ ಮಾಡಿರುವ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆನ್ನಲಾಗಿ ಒಟ್ಟು 8 ಜನ ಅಧಿಕಾರಿಗಳಲ್ಲಿ 6 ಅಧಿಕಾರಿಗಳು ನಿವೃತ್ತಿ ಹೊಂದಿದ್ದಾರೆ. ಇನ್ನುಳಿದ ಇಬ್ಬರು ಮೃತಪಟ್ಟಿದ್ದರೂ ಎಫ್ಐಆರ್ ದಾಖಲಾಗಿದೆ.

ಸದ್ದಿಲ್ಲದೆ ಜೆಸಿಬಿಗಳ ಘರ್ಜನೆ ಸ್ತಬ್ಧ; ಅಧಿವೇಶನ ಮುಗಿಯುತ್ತಿದ್ದಂತೆ ತೆರವು ಕಾರ್ಯಕ್ಕೆ ಬ್ರೇಕ್ ಹಾಕಿದ ಬಿಬಿಎಂಪಿ!

ಏನಿದು ಪ್ರಕರಣ?

ಕೆ.ಆರ್.ಪುರ ಹೋಬಳಿಯ ದೇವಸಂದ್ರ ಗ್ರಾಮದ ಖಾತೆ ಸಂಖ್ಯೆ  886/284/ 866/441/284 ರ ಸ್ವತ್ತಿಗೆ ಅಕ್ರಮ  ಟಿಡಿಆರ್ ತಯಾರಿಸಿರುವ ಅಧಿಕಾರಿಗಳು. ಅಕ್ರಮ ಟಿಡಿಆರ್ ರಚಿಸಿ ಪಾಲಿಕೆಗೆ 1 ಕೋಟಿ 20 ಲಕ್ಷ ರೂ. ವಂಚನೆ. ಅಂದರೆ ಕೇವಲ 40 ಲಕ್ಷ ಬೆಲೆ ಬಾಳುವ ಸ್ವತ್ತಿಗೆ 1 ಕೋಟಿ 20 ಲಕ್ಷ ರೂ. ಟಿಡಿಆರ್ ರಚನೆ ಮಾಡಿರುವ ಆರೋಪಿಗಳು.

ಡಿ.ಕೆ.ವೇಣುಗೋಪಾಲ್ ಹೆಸರಿನಲ್ಲಿ ಟಿಡಿಆರ್: ಕಡಿಮೆ ಬೆಲೆ ಬಾಳುವ ಸ್ವತ್ತಿಗೆ ಅಧಿಕ ಮೊತ್ತದ ಟಿಡಿಆರ್ ರಚಿಸಿರುವ ಅಧಿಕಾರಿಗಳು, ಕೇರ್ ರಿಯಾಲಿಟಿ ಅಂಡ್ ಇನ್ ಫ್ರಾಸ್ಟಕ್ಚರ್ ಪ್ರೈವೇಟ್ ಲಿಮಿಟೆಡ್ ಗೆ ಮಾರಾಟ ಮಾಡಿದ್ದಾರೆ. ಭೂಸ್ವಾಧೀನಾಧಿಕಾರಿ ಸ್ಥಳ ಮಹಜರ್ ಗೆ ಹೋದಾಗ ಭಷ್ಟಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಟಿಡಿಆರ್ ರಚನೆಯಲ್ಲಿ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿರುವ ಅಧಿಕಾರಿಗಳು ಭೂಮಾಲೀಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಡಿಆರ್‌ಸಿ ರಚಿಸಿ ಕಡಗಳನ್ನು ನಾಪತ್ತೆ ಮಾಡಿರುವ ಅಧಿಕಾರಿಗಳು.

ಬಾಗ್ಮನೆ ಒತ್ತುವರಿ ತೆರವಿಗೆ ‘ಲೋಕಾ ತಡೆ’ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಕೇವಲ 57 ಚ.ಮೀ ಇರುವ ಕಟ್ಟಡಕ್ಕೆ ಹೆಚ್ಚುವರಿಯಾಗಿ 895 ಚದರ ಅಡಿ ಸೇರಿಸಿ ಡಿ.ಆರ್.ಸಿ ಸಲ್ಲಿಸಿದ್ದಾರೆ. ಆ ಮೂಲಕ ತಮ್ಮ ವೈಯಕ್ತಿಕ ಹಿತಾಸಕ್ತಯಿಂದ ಪಾಲಿಕೆಯ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವುಂಟು ಮಾಡಿದ್ದಾರೆ.

ಎಫ್‌ಐಆರ್ ದಾಖಲಾಗಿರುವ ಭ್ರಷ್ಟ ಅಧಿಕಾರಿಗಳು ಯಾರು?

  • ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಬಿ.ಆರ್. ಅಗಸೇಮಣಿ
  • ನಿವೃತ್ತ ಸರ್ವೇಯರ್ ಗುಳ್ಳಪ್ಪ
  • ನಿವೃತ್ತ ಉಪ ತಹಸೀಲ್ದಾರ್  ಎಂ.ಎ ಗಂಗೇಗೌಡ
  • ನಿವೃತ್ತ ಜಂಟಿ ಆಯುಕ್ತ ಕೆ.ಎಸ್ ದೇವರಾಜ್
  • ನಿವೃತ್ತ ಜಂಟಿ ಆಯುಕ್ತ ಉಮಾನಂದ ರೈ 
  • ಕಾರ್ಯಪಾಲಕ ಅಭಿಯಂತರ ಡಿ ರಾಮೇಗೌಡ ಸೇರಿ ಒಟ್ಟು 8 ಜನರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಪಾಲಿಕೆ ಬೊಕ್ಕಸಕ್ಕೆ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಮತ್ತು ನಷ್ಟ ಭರಿಸುವಂತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
click me!