ಸಾರೇ ಜಹಾಸೇ ಅಚ್ಚಾ... ದೇಶಭಕ್ತಿ ಗೀತೆ ಮೂಲಕ ಯತ್ನಾಳ್‌ಗೆ ಟಾಂಗ್ ಕೊಟ್ಟ ಮೌಲ್ವಿ ತನ್ವೀರ್ ಹಾಶ್ಮಿ! ವೈರಲ್ ವಿಡಿಯೋ

By Ravi Janekal  |  First Published Dec 7, 2023, 10:07 AM IST

ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್‌ (ISIS) ಬೆಂಬಲಿತ ವ್ಯಕ್ತಿಯೊಂದಿಇಗೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆರೋಪಕ್ಕೆ ಮೌಲ್ವಿ ತನ್ವೀರ್ ಪೀರಾ ದೇಶಭಕ್ತಿ ಗೀತೆಯ ಮೂಲಕ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.


ವಿಜಯಪುರ (ಡಿ.7): ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್‌ (ISIS) ಬೆಂಬಲಿತ ವ್ಯಕ್ತಿಯೊಂದಿಇಗೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆರೋಪಕ್ಕೆ ಮೌಲ್ವಿ ತನ್ವೀರ್ ಪೀರಾ ದೇಶಭಕ್ತಿ ಗೀತೆಯ ಮೂಲಕ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಐಸಿಸ್‌ ನಂಟು ಸಾಬೀತುಪಡಿಸಿದರೆ ದೇಶ ತೊರೆಯುವೆ; ಯತ್ನಾಳ್‌ಗೆ ತನ್ವೀರ್‌ ಹಾಶ್ಮಿ ಸವಾಲು!

Tap to resize

Latest Videos

ತನ್ನ ಫೇಸ್ಬುಕ್ ಅಕೌಂಟ್‌ನಲ್ಲಿ "ಸಾರೇ ಜಹಾಸೇ ಅಚ್ಚಾ ಹಿಂದೂ..." ಹಾಡು ಅಪ್ಲೋಡ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ತಾನೇ ಹಾಡಿದ ಸಾರೇ ಜಹಾಸೇ ಅಚ್ಚಾ ಹಾಡು ಅಪ್ಲೋಡ್ ಮಾಡಿರುವ ಮೌಲ್ವೀ ತನ್ವೀರ್.  ದೇಶಭಕ್ತಿ ಗೀತೆ ಹಾಡಿ ತನ್ನ Hafiz Khwaja ಪೇಸ್ಬುಕ್‌ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ ತನ್ವೀರ್ ಪೀರಾ ಹಾಸ್ಮೀ ಈ ಮೂಲಕ ಶಾಸಕ ಯತ್ನಾಳ್ ಐಸಿಸ್ ನಂಟಿನ ಆರೋಪಕ್ಕೆ ಟಾಂಗ್ ಕೊಟ್ಟಿರುವ ಮೌಲ್ವಿ. 

 

ಕಳೆದ ಡಿ. 4ರಂದು ಹುಬ್ಬಳ್ಳಿ ತಾಲೂಕಿನ ಪಾಳೆ ಗ್ರಾಮದ ಹಜರತ್ ಸೈಯ್ಯದ ಮೊಹಮ್ಮದ ಬಾದಶಾ ಪೀರಾ (ಭಾಷಾಪೀರಾ) ದರ್ಗಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಭಾರತ ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳ ಜೊತೆ ಐಸಿಸ್‌ ಸಂಘಟನೆಯೊಂದಿಗೆ ನಂಟು ಇದ್ದವರು ಭಾಗಿಯಾಗಿದ್ದರು ಎಂದು ಯತ್ನಾಳ ಆರೋಪಿಸಿದ್ದರು. ಆ ಕುರಿತು ದಾಖಲೆ ಬಿಡುಗಡೆ ಮಾಡಿದ್ದರು.

ಈ ಇದು ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತನ್ವೀರ್ ಹಾಶ್ಮಿ, ಸಮ್ಮೇಳನಕ್ಕೆ 150ಕ್ಕೂ ಹೆಚ್ಚು ಸೂಫಿಗಳನ್ನು ಆಹ್ವಾನಿಸಲಾಗಿತ್ತು. 100ಕ್ಕೂ ಹೆಚ್ಚು ಧರ್ಮಗುರುಗಳ ಭಾಗವಹಿಸಿದ್ದರು. ಯಾರೂ ಸಹ ಐಸಿಸ್‌ ಬೆಂಬಲಿತ ವ್ಯಕ್ತಿಗಳಿಲ್ಲ ಎಂದು ಸ್ಪಷ್ಟನೆ ನೀಡಿದರು..

Breaking: ಐಸಿಸ್‌ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ, ದಾಖಲೆ ಬಿಡುಗಡೆ ಮಾಡಿದ ಯತ್ನಾಳ್‌!

ಪೊಲೀಸ್ ಇಲಾಖೆಯ ಸೂಚನೆಯಂತೆ ವೇದಿಕೆ ಮೇಲೆ ಕೇವಲ 25 ಧರ್ಮಗುರುಗಳಿಗೆ ಅವಕಾಶ ನೀಡಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿತ್ತು. ಸಮಾರಂಭದಲ್ಲಿ ಅಂತಹ ವ್ಯಕ್ತಿ ಭಾಗವಹಿಸಿದ್ದರೆ ಗುಪ್ತಚರ ಇಲಾಖೆಗೆ ಅದರ ಬಗ್ಗೆ ಗೊತ್ತಿರಬೇಕಿತ್ತು. ಐಸಿಸ್‌ ಬೆಂಬಲಿತ ವ್ಯಕ್ತಿ ಯಾರೆಂಬುವುದನ್ನು ಯತ್ನಾಳ ಅವರೇ ಹೇಳಬೇಕು. ಈ ಬಗ್ಗೆ ನಾವು ತನಿಖೆಗೆ ಸಿದ್ಧರಿದ್ದೇವೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಲು ನಾವು ಸರ್ಕಾರಕ್ಕೆ ಮನವಿ ಮಾಡುವುದಾಗಿ ಒತ್ತಾಯಿಸಿದ್ದಾರೆ

click me!