ಸಚಿವ ಸತೀಶ್ ಜಾರಕಿಹೊಳಿ ಹೊಸ ಭರವಸೆ

By Web DeskFirst Published Jan 17, 2019, 9:02 AM IST
Highlights

ಅರಣ್ಯ ಮತ್ತು ಪರಿಸರ ಜೀವಶಾಸ್ತ್ರ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಹೊಸ ಭರವಸೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಇರುವ ಮೃಗಾಲಯಗಳನ್ನು ಮೇಲ್ದರ್ಜೆಗೆ ಏರಿಸುವುದರ ಜೊತೆಗೆ ಜಿಲ್ಲೆಗಳಲ್ಲಿ ಸ್ಥಾಪಿಸುವುದಾಗಿ ತಿಳಿಸಿದರು. 

ಆನೇಕಲ್‌: ರಾಜ್ಯದಲ್ಲಿ ಇರುವ ಮೃಗಾಲಯಗಳನ್ನು ಮೇಲ್ದರ್ಜೆಗೆ ಏರಿಸುವುದರ ಜೊತೆಗೆ ರಾಜ್ಯದ ಪ್ರತಿ ಜಿಲ್ಲೆಗೊಂದು ಮೃಗಾಲಯ ಆರಂಭಿಸಲು ಚಿಂತಿಸಲಾಗುತ್ತಿದೆ ಎಂದು ಅರಣ್ಯ ಮತ್ತು ಪರಿಸರ ಜೀವಶಾಸ್ತ್ರ ಇಲಾಖೆಯ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಲವು ಯೋಜನೆಗಳಿಗೆ ಹಸಿರು ನಿಶಾನೆ ತೋರಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಂದಿನ ದಿನಗಳಲ್ಲಿ ಕಾಡು ಮತ್ತು ಕಾಂಡಂಚಿನ ಹಳ್ಳಿಗರ ಪ್ರಗತಿಗೆ ಹೊಸ ಯೋಜನೆಗಳನ್ನು ರೂಪಸಲಾಗುವುದು ಎಂದು ಅವರು ಹೇಳಿದರು.

ಚಾಲನೆ: 19 ಆಸನದ ಹವಾನಿಯಂತ್ರಿತ ಬಸ್‌, 2 ಬ್ಯಾಟರಿ ಚಾಲಿತ ವಾಹನ, ಚಿಟ್ಟೆಆವರಣದ ದ್ವಾರದಲ್ಲಿನ ಚಿಟ್ಟೆಮಾದರಿ, ಗುಳ್ಳೆ ನರಿ ಆವರಣಕ್ಕೆ ಚಾಲನೆ ನೀಡಲಾಯಿತು.  ಹೈನಾ, ವೈಲ್ಡ್‌ ಡಾಂಗ್‌ (ಕಾಡುನಾಯಿ), ನರಿ, 2 ಪ್ರಭೇದದ ಮೊಸಳೆಗಳ ಆವರಣಗಳ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

ಸಂಸದ ಡಿ.ಕೆ.ಸುರೇಶ್‌, ವಿಧಾನ ಪರಿಷತ್‌ ಸದಸ್ಯರಾದ ನಾರಾಯಣಸ್ವಾಮಿ, ಅರಣ್ಯ ಇಲಾಖೆಯ ಪ್ರಧಾನ ಕಾರ‍್ಯದರ್ಶಿ ಗೋಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಪುನಾಟಿ ಶ್ರೀಧರ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜಯರಾಂ, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ‍್ಯದರ್ಶಿ ಬಿ.ಪಿ.ರವಿ, ಬನ್ನೇರುಘಟ್ಟಉದ್ಯಾನವನದ ಕಾರ‍್ಯನಿರ್ವಾಹಕ ನಿರ್ದೇಶಕ ಡಾ ಸಂಜಯ್‌ ಬಿಜ್ಜೂರ್‌, ಉಪ ನಿದೇರ್ಶಕ ಎಚ್‌.ಟಿ.ಕುಶಾಲಪ್ಪ, ಕೆ.ಎಸ್‌.ಉಮಾಶಂಕರ್‌, ಪಶುವೈದ್ಯ ಸೇವೆಯ ಸಹಾಯಕ ನಿರ್ದೇಶಕ ಕೆ.ಎಸ್‌.ಉಮಾಶಂಕರ್‌, ಎಇಇ ಎಚ್‌.ಎಲ್‌.ನಾಗೇಂದ್ರಪ್ಪ, ವಲಯ ಅರಣ್ಯಾಧಿಕಾರಿಗಳಾದ ಭಾಗ್ಯಲಕ್ಷ್ಮೀ, ಭೀಮರಾಯ್‌, ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಶ್ರೀ ಅಚ್ಯುತ್‌ ರಾಜ್‌, ಗ್ರಾಪಂ ಅಧ್ಯಕ್ಷ ಶಾಂತ ಕುಮಾರಿ ಇದ್ದರು.

click me!