‘ಪುಳಿಯೋಗರೆ’ ಪದ ಹೇಳಿಸಿ ಹಾಸ್ಯ ಮಾಡಿದ್ದ ಶಿಕ್ಷಕ ಸಸ್ಪೆಂಡ್!

By Suvarna NewsFirst Published Jan 18, 2020, 11:19 AM IST
Highlights

‘ಪುಳಿಯೊಗರೆ’ ಪದ ಹೇಳಿಸಿ ಹಾಸ್ಯ ಮಾಡಿದ್ದ ಶಿಕ್ಷಕನ ಅಮಾನತು|  ಸಕ​ಲೇ​ಶ​ಪುರ ತಾಲೂಕಿನ ಕಬ್ಬಿನಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕ ನಿರ್ವಾ​ಣಪ್ಪ 

ಸಕಲೇಶಪುರ[ಜ.18]: ಒಂದನೇ ತರಗತಿ ವಿದ್ಯಾರ್ಥಿನಿಯ ಬಳಿ ‘ಪುಳಿ​ಯೊ​ಗರೆ’ ಎಂಬ ಪದ​ದ ತೊದಲು ನುಡಿಯನ್ನೇ ಹಾಸ್ಯ ಎಂದು ಅಣಕಿಸಿ, ವೀಡಿಯೋ ಮಾಡಿದ್ದ ಶಿಕ್ಷಕನನ್ನು ಕ್ಷೇತ್ರ ಶಿಕ್ಷ​ಣಾ​ಧಿ​ಕಾ​ರಿ​ಗಳು ಅಮಾ​ನತು ಮಾಡಿದ್ದು, ಸಕ​ಲೇ​ಶ​ಪುರ ತಾಲೂಕಿನ ಕಬ್ಬಿನಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕ ನಿರ್ವಾ​ಣಪ್ಪ ಎಂಬ​ವರೇ ಅಮಾ​ನ​ತು​ಗೊಂಡ​ವರು.

ವಿದ್ಯಾ​ರ್ಥಿ​ನಿಗೆ ‘ಪುಳಿ​ಯೊ​ಗರೆ’ ಉಚ್ಛಾ​ರಣೆ ಬರ​ದಿ​ದ್ದರೆ ಪದೇಪದೇ ಆಕೆ​ಯಿಂದ ಹೇಳಿ​ಸಿದ್ದು ಹಾಗೂ ವಿಡಿಯೋ ಮಾಡಿರವುದು ಸಾಬೀ​ತಾ​ಗಿದೆ. ಅಲ್ಲದೇ, ಈ ವಿಡಿಯೋ ಸಾಮಾ​ಜಿಕ ಜಾಲತಾಣ​ಗ​ಳಲ್ಲಿ ವೈರಲ್‌ ಆಗಿ​ರುವ ಹಿನ್ನೆ​ಲೆ​ಯಲ್ಲಿ ಶಿಕ್ಷಕ ನಿರ್ವಾ​ಣ​ಪ್ಪ​ನನ್ನು ಅಮಾ​ನತು ಮಾಡಿ ಆದೇಶ ಹೊರ​ಡಿ​ಸಲಾ​ಗಿದೆ ಎಂದು ಬಿಇಒ ಎಚ್‌.ಬಿ.ಶಿವಾ​ನಂದ ತಿಳಿ​ಸಿ​ದ್ದಾ​ರೆ.

ಪಕ್ಕೆಲುಬು ಬಳಿಕ ಇದೀಗ ವಿದ್ಯಾರ್ಥಿನಿ ‘ಪುಳಿಯೋಗರೆ’ ವಿಡಿಯೋ ವೈರಲ್‌

ಮಗು​ವಿಗೆ ಮಾನ​ಸಿಕ ಹಿಂಸೆ ನೀಡಿ​ರುವುದು ವಿಡಿ​ಯೋ​ದಿಂದ ಸಾಬೀ​ತಾ​ಗಿದೆ. ಒಬ್ಬ ಜವಾ​ಬ್ದಾ​ರಿ​ಯು​ತ​ ಸರ್ಕಾರಿ ನೌಕರ ಮೇಲಾಧಿ​ಕಾ​ರಿ​ಗಳ ಸುತ್ತೋಲೆ, ಆದೇ​ಶ​ಗ​ಳನ್ನು ಪಾಲನೆ ಮಾಡದೆ ಬೇಜ​ವಾ​ಬ್ದಾರಿ ವರ್ತನೆ, ಕರ್ತವ್ಯ ಲೋಪ, ಮಗು​ವಿಗೆ ಮಾನ​ಸಿಕ ಮತ್ತು ದೈಹಿಕ ಹಿಂಸೆ ನೀಡಿ​ರು​ವುದು ಸಾಬೀ​ತಾ​ಗಿ​ರು​ವು​ದ​ರಿಂದ ಶಿಕ್ಷಕ ನಿರ್ವಾ​ಣ​ಪ್ಪ​ನನ್ನು ಅಮಾ​ನತು ಮಾಡ​ಲಾ​ಗಿದೆ ಎಂದು ತಿಳಿ​ಸಿ​ದ್ದಾ​ರೆ.

‘ಪಕ್ಕೆಲುಬು’ ವಿಡಿಯೋ ಎಫೆಕ್ಟ್: ಶಿಕ್ಷಕರ ಮೊಬೈಲ್‌ ಬಳಕೆಗೆ ನಿಷೇಧ!

ಪ್ರಕ​ರಣ ವಿವ​ರ:

ಶಾಲೆಯಲ್ಲಿ 1ನೇ ತರಗತಿಯಲ್ಲಿ ಕನ್ನಡ ಪಾಠ ಮಾಡುತ್ತಿದ ಶಿಕ್ಷಕ ನಿರ್ವಾಣಪ್ಪ ವಿದ್ಯಾರ್ಥಿಯ ಬಾಯಿಯಲ್ಲಿ ಇಡ್ಲಿ, ವಡೆ ಎಂಬ ಪದವನ್ನು ಹೇಳಿಸಿದ್ದಾರೆ. ನಂತರ ಪುಳಿಯೊಗರೆ ಎಂಬ ಪದವನ್ನು ಶಿಕ್ಷಕ ಹೇಳಿಸಿದ್ದಾನೆ. ಆ ವಿದ್ಯಾರ್ಥಿನಿಯು ಪುಳಿಯೊಗರೆ ಬದಲಿಗೆ ಪು(ಕ)ಳಿಯೊಗರೆ ಎಂಬ ಪದವನ್ನು ಪ್ರಯೋಗಿಸಿತ್ತು.

‘ಪಕ್ಕೆಲುಬು’ ಶಿಕ್ಷಕ ಕೊನೆಗೂ ಪತ್ತೆ; ಸೇವೆಯಿಂದ ಅಮಾನತು!

ಅಷ್ಟಕ್ಕೇ ಶಾಲೆಯಲ್ಲಿ ಶಿಕ್ಷಕನು ಸೇರಿದಂತೆ ಇತರೆ ಸಹಪಾಠಿಗಳು ಇತರರು ನಕ್ಕಿಬಿಟ್ಟರು. ಇದು ಒಂದು ಸಲ ಹೇಳಿಸಿದ್ದರೆ ಹಾಸ್ಯವಾಗುತ್ತಿತ್ತೇನೋ ಆದರೆ, ಈ ವಿದ್ಯಾರ್ಥಿನಿಯ ಬಳಿ ಶಿಕ್ಷಕ ನಿರ್ವಾಣಪ್ಪ ಪದೇ ಪದೇ ಹೇಳಿಸಿ ನಗುತ್ತಿದ್ದುದು ಅಪಹಾಸ್ಯಕ್ಕೀಡು ಮಾಡಿತ್ತು. ಅಲ್ಲದೇ, ವಿದ್ಯಾರ್ಥಿನಿಯನ್ನು ಅಣಕಿಸುವಂತೆ ಶಿಕ್ಷಕನು ವರ್ತನೆ ತೋರಿರುವ ಹಾಗೂ ತಪ್ಪು ಉಚ್ಛಾರಣೆ ಮಾಡಿರುವ ವಿಡಿಯೋ ಮಾಡುವ ನಿಯಮ ಉಲ್ಲಂಘಿಸಿರುವ ವೈರಲ್‌ ಆಗಿತ್ತು.

ಪಕ್ಕೆಲುಬು’ ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಕ್ರಮ

click me!