ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಫೇಸ್‌ಬುಕ್ ಗೆಳತಿ ಶ್ವೇತಾ ಗೌಡ ಚಿನ್ನದ ವ್ಯಾಪಾರದಲ್ಲಿ ವಂಚಿಸಿದ ಪ್ರಕರಣದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಹಾಗೂ ವಿನಯ್ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಶ್ವೇತಾ ಗೌಡ ಪವಿತ್ರಾ ಗೌಡ ಜೈಲಿನಲ್ಲಿದ್ದಾಗ ಭೇಟಿ ಮಾಡಿದ್ದರು.
ಬೆಂಗಳೂರು (ಡಿ.25): ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಫೇಸ್‌ಬುಕ್ ಗೆಳತಿ ಶ್ವೇತಾ ಗೌಡ ಚಿನ್ನದ ವ್ಯಾಪಾರದಲ್ಲಿ ಭಾರೀ ವಂಚನೆ ಮಾಡಿರುವ ಪ್ರಕರಣ ಹೊರಗೆ ಬೀಳುತ್ತಿದ್ದಂತೆಯೇ ಆಕೆಯ ಜೊತೆಯಲ್ಲಿ ಆಯಾರು ಲಿಂಕ್ ಇದ್ದರು ಎಂಬ ಅಂಶವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಹಾಗೂ ವಿನಯ್ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ವರ್ತೂರು ಪ್ರಕಾಶ್ ಆಪ್ತೆ ಶ್ವೇತಾಗೌಡಳಿಂದ ವಂಚನೆ ಪ್ರಕರಣದಲ್ಲಿ ಶ್ವೇತಾಳ ಲಿಂಕ್ ಬಲು ದೊಡ್ಡದಿದೆ ಎಂಬುದು ಪೊಲೀಸರಿಗೆ ತಿಳಿದುಬಂದಿದೆ. ಶ್ವೇತಾ ಗೌಡ ಕೇವಲ ವರ್ತೂರ್ ಪ್ರಕಾಶ್ ಜೊತೆ ಲಿಂಕ್ ಹೊಂದಿಲ್ಲ. ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿಗಳು ಈಕೆಗೆ ಫ್ರೆಂಡ್ಸ್ ಆಗಿದ್ದಾರೆ. ಈಕೆಗೆ ನಟ ದರ್ಶನ್‌ನ ಗೆಳತಿ ಪವಿತ್ರ ಗೌಡ ಹಾಗೂ ವಿನಯ್ ಗೆ ಫ್ರೆಂಡ್ ಆಗಿದ್ದರು. ಪವಿತ್ರಾ ಗೌಡ ಜೈಲಿನಲ್ಲಿದ್ದಾಗ ಶ್ವೇತಾಗೌಡ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿಕೊಟ್ಟು ಮಾತನಾಡಿಸಿ ಬಂದಿದ್ದರು. ಅಂದು ಸಮತಾ ಜೊತೆ ಪರಪ್ಪನ ಅಗ್ರಹಾರ ಜೈಲಲ್ಲಿ ಇಬ್ಬರ ಭೇಟಿ ಮಾಡಿದ್ದಳು.
undefined
ಇದೀಗ ವಂಚನೆ ಕೇಸಲ್ಲಿ ಅರೆಸ್ಟ್ ಆಗಿರೊ ಶ್ವೇತಾ ಗೌಡ. ವರ್ತೂರ್ ಪ್ರಕಾಶ್ ನೋಡಿದರೆ ಆಕೆ ಗಿಫ್ಟ್ ಆಗಿ ಕೊಟ್ಟಿದ್ಲು ಅಂತಿದ್ದಾರೆ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಒದೊಂದೆ ರೋಚಕ ಕಥೆಗಳು ರಿವೀಲ್ ಆಗುತ್ತಿವೆ. ಶ್ವೇತಾಳ ಜೊತೆ ಈ ಇಬ್ಬರ ರೋಲ್ ಏನಾದರೂ ಇದ್ಯಾ ಅಂತಾ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶ್ವೇತಾ ಗೌಡ ಜತೆ ಮದ್ವೆಗೆ ಸಜ್ಜಾಗಿದ್ದ ವರ್ತೂರು ಪ್ರಕಾಶ್: ಪೊಲೀಸ್ ವಿಚಾರಣೆ ವೇಳೆ ಬಹಿರಂಗ
ವರ್ತೂರ್ ಪ್ರಕಾಶ್ ಸ್ನೇಹಿತೆ ಶ್ವೇತಗೌಡಳಿಂದ ವಂಚನೆ ಪ್ರಕರಣದಲ್ಲಿ ವರ್ತೂರು ಪ್ರಕಾಶ್ ಅವರು ಹೊರಗೊಂದು ಒಳಗೊಂದು ಹೆಳಿಕೆ ಕೊಡುತ್ತಿದ್ದಾರೆ. ಪೊಲೀಸರ ಬಳಿ ಒಂದು ಹೇಳಿಕೆ ಮಾಧ್ಯಮದವರ ಬಳಿ ಒಂದು ಹೇಳಿಕೆ ನೀಡುತ್ತಾ ಕಳ್ಳಾಟ ಮಾಡುತ್ತಿದ್ದಾರೆ. ನಿನ್ನೆ ಮಾಧ್ಯಮದವರ ಮುಂದೆ ಈ ಕೇಸ್ ಸುಳ್ಳು ಸುದ್ದಿ ಎಂದಿದ್ದ ವರ್ತೂರ್ ಪ್ರಕಾಶ್, ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ನನಗು ಆಕೆಗೆ ಯಾವುದೇ ಸಂಬಂಧವಿಲ್ಲ. ಆಕೆ ನನ್ನ ಸ್ನೇಹಿತೆಯೇ ಅಲ್ಲಾ ಐದಾರು ತಿಂಗಳ ಹಿಂದೆ ಪರಿಚಯ ಆಗಿದೆ. ನನ್ನ ಹೆಸರು ಬಳಸಿಕೊಂಡು ಚಿನ್ನಾಭರಣ ಖರೀದಿ ಮಾಡಿಕೊಂಡಿದ್ದಾಳೆ. ನನ್ನ ಮನಸಿಗೂ ನೋವಾಗಿದೆ 2 ಕೋಟಿ ರೂ. ಚಿನ್ನಭಾರಣ ಕೊಟ್ಟಿದ್ದಾರೆ. ಚಿನ್ನದ ಅಂಗಡಿಯವರು ಹೇಗೆ ಚಿನ್ನ ಕೊಟ್ಟರು ನನಗೆ ಗೊತ್ತಿಲ್ಲ. ನನ್ನ ತರ ಕೆಲ ರಾಜಕಾರಣಿಗಳು ಹೆಸರು ,ಫೋಟೊ ತೆಗೆದುಕೊಂಡು ವಂಚನೆ ಮಾಡಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಎಲ್ಲಾ ಮಾಹಿತಿಯನ್ನ ಕೊಟ್ಟಿದ್ದಿನಿ ಎಂದು ಹೇಳಿಕೆ ನೀಡಿದ್ದರು.
ಆದರೆ, ಪೊಲೀಸರ ಮುಂದೆ ವರ್ತೂರ್ ಪ್ರಕಾಶ್ ಕೊಟ್ಟಿರೋ ಹೇಳಿಕೆಯೇ ಬೇರೆ. ಪೊಲೀಸರ ಬಳಿ ಶ್ವೇತ ಜೊತಗೆ ಒಳ್ಳೆಯ ಪರಿಚಯ ಸ್ನೇಹ ಇತ್ತು. ಅಷ್ಟೇ ಅಲ್ಲದೆ ಆಕೆ ನೀಡಿದ್ದ ಸುಮಾರು 100 ಗ್ರಾಂ.ಗಿಂತ ಹೆಚ್ಚು ಚಿನ್ನ ಹಾಗೂ 12.5 ಲಕ್ಷ ರೂ. ಹಣವನ್ನು ಇದೀಗ ವಾಪಸ್ಸು ನೀಡುತ್ತೇನೆ. ಶ್ವೇತಾ ಕೊಟ್ಟ ಹಣ ಮತ್ತು ಚಿನ್ನವನ್ನು ಮಗನಿಗೆ ಕೊಟ್ಟಿದ್ದೆ ಎಂದು ಆಕೆಯ ಜೊತೆಗಿನ ಸ್ನೇಹ ಸಂಬಂಧ ಮತ್ತು ಒಟ್ಟಿಗೆ ವ್ಯವಹಾರದ ಬಗ್ಗೆ ಒಪ್ಪಿಕೊಂಡಿದ್ದಾರೆ. ಮುಂದುವರೆದು, ತಾನು ಸಹ ಶ್ವೇತ ನಿವಾಸಕ್ಕೆ ಹೋಗಿದ್ದು, ಶ್ವೇತಾಳ ಮೊಬೈಲ್ ನಂಬರ್ ನ್ನ ಚಿನ್ನ ಎಂದು ಸೇವ್ ಮಾಡಿಕೊಂಡಿದ್ದಾಗಿ ಬಾಯಿ ಬಿಟ್ಟಿದ್ದಾರೆ. ಇನ್ನು ನವರತ್ನ ಜುವೆಲರಿ ಶಾಪ್ ಗೆ ಚಿನ್ನ ಪಡೆಯುವಾಗ ಒಮ್ಮೆ ಶ್ವೇತ ಜೊತೆಗೆ ಹೋಗಿದ್ದೆ ಎಂದು ಹೇಳಿದರು. ಸದ್ಯ ಶ್ವೇತ ಗೌಡ ಬಳಿ ಚಿನ್ನ ಪಡೆದು ಕರಗಿಸಿ ಮಾರಾಟ ಮಾಡಿಕೊಡ್ತಿದ್ದ ಒರ್ವನಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಏನೇ ಚಿನ್ನ ನಿನ್ನ ಗುನ್ನಾ: ಶ್ವೇತಾ ಗೌಡ ಕೊಟ್ಟ ಹಣ, ಚಿನ್ನಾಭರಣ ವಾಪಸ್ ಕೊಟ್ಟ ವರ್ತೂರು ಪ್ರಕಾಶ್!