
ಬೆಳಗಾವಿ(ಜೂ.18): ಬೆಳಗಾವಿಯ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿ ಬಿ.ವೈ.ಪವಾರ್ ಅವರ ವಿಶ್ವೇಶ್ವರಯ್ಯ ನಗರದ ಸರ್ಕಾರಿ ನಿವಾಸದಲ್ಲಿ ಲಕ್ಷಾಂತರ ನಗದು ಹಣವನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಧಿಕಾರಿಗಳಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ 5 ಲಕ್ಷ ರು. ಹಣ ಇಟ್ಟು ಅದನ್ನು ಬಾತ್‌ರೂಮ್‌ನಲ್ಲಿರುವ ಮೊಳೆಗೆ ನೇತು ಹಾಕಿದ್ದರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಜೂ.30ರಂದು ನಿವೃತ್ತಿಯಾಗಬೇಕಿದ್ದ ಬಿ.ವೈ.ಪವಾರ್ ಮನೆ, ಕಚೇರಿ ಸೇರಿದಂತೆ ಒಟ್ಟು 6 ಕಡೆಗಳಲ್ಲಿ ಏಕಕಾಲಕ್ಕೆ ಶುಕ್ರವಾರ ದಾಳಿ ನಡೆಸಿದ್ದಾರೆ. ಬೆಳಗಾವಿ ಜಕ್ಕೇರಿ ಹೊಂಡದಲ್ಲಿರುವ ಸ್ವಂತ ಮನೆ ತಪಾಸಣೆ ವೇಳೆ ಪವಾರ್ ಹಣವನ್ನು ಬಾತ್‌ರೂಂನಲ್ಲಿ ಇಟ್ಟಿದ್ದರು. ನೇತು ಹಾಕಿರುವ ಪ್ಲಾಸ್ಟಿಕ್ ಕವರ್‌ನಲ್ಲಿ ಬ್ರಶ್ ಮತ್ತು ಇನ್ನಿತರೆ ವಸ್ತುಗಳು ಇಡುತ್ತಾರೆಂದುಕೊಂಡು ಅದನ್ನು ಎಸಿಬಿ ಅಧಿಕಾರಿಗಳು ಗಮನಿಸದೇ ಇರಬಹುದು ಎಂಬ ಲೆಕ್ಕಾಚಾರ ಅಧಿಕಾರಿಯದ್ದಾಗಿತ್ತು. ಆದರೆ ಎಸಿಬಿ ಅಧಿಕಾರಿಗಳು ಅದನ್ನು ಪತ್ತೆ ಮಾಡಿ ಅದರಲ್ಲಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂ ಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದ 80 ಕಡೆ ದಾಳಿ!
ಎಸಿಬಿ ದಾಳಿಯಾದರೂ ತಲೆಕೆಡಿಸಿಕೊಳ್ಳದ ಪವಾರ್ ಅವರು ಮೊಬೈಲ್‌ನಲ್ಲಿ ಮಾತನಾಡುತ್ತ ಕೂಲ್ ಕೂಲ್ ಆಗಿರುವುದು ಕಂಡುಬಂದಿತು. ಬಳಿಕ ಅವರ ಅವರ ಮೊಬೈಲ್‌ನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ