ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ಕರ್ತವ್ಯದ ಮಧ್ಯೆ ಅಂಧ ವ್ಯಕ್ತಿಯೊಬ್ಬರ ಸಹಾಯಕ್ಕೆ ರಸ್ತೆ ದಾಟಿಸಿ ಮಾನವೀಯತೆ ಮೆರೆದ ಘಟನೆ ವೈಟ್‌ಫೀಲ್ಡ್‌ನ ಓ ಫಾರಂ ಸಿಗ್ನಲ್ ಬಳಿ ನಡೆದಿದೆ. ವೈಟ್‌ಫೀಲ್ಡ್ ಟ್ರಾಫಿಕ್ ಠಾಣೆ ಹೆಡ್ ಕಾನ್ಸ್‌ಟೇಬಲ್ ಆಗಿರುವ ಹೆಚ್ ಸಿ ಸದಾಶಿವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ
ಬೆಂಗಳೂರು (ಜ.19): ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ಕರ್ತವ್ಯದ ಮಧ್ಯೆ ಅಂಧ ವ್ಯಕ್ತಿಯೊಬ್ಬರ ಸಹಾಯಕ್ಕೆ ರಸ್ತೆ ದಾಟಿಸಿ ಮಾನವೀಯತೆ ಮೆರೆದ ಘಟನೆ ವೈಟ್‌ಫೀಲ್ಡ್‌ನ ಓ ಫಾರಂ ಸಿಗ್ನಲ್ ಬಳಿ ನಡೆದಿದೆ.
ವೈಟ್‌ಫೀಲ್ಡ್ ಟ್ರಾಫಿಕ್ ಠಾಣೆ ಹೆಡ್ ಕಾನ್ಸ್‌ಟೇಬಲ್ ಆಗಿರುವ ಹೆಚ್ ಸಿ ಸದಾಶಿವ. ಕರ್ತವ್ಯದಲ್ಲಿದ್ದ ವೇಳೆ ರಸ್ತೆ ದಾಟಲು ಅಂಧ ವ್ಯಕ್ತಿಯೊಬ್ಬರು ಪರದಾಡುತ್ತಿರುವುದನ್ನು ಗಮನಿಸಿದ್ದ ಕಾನ್ಸ್‌ಟೇಬಲ್. ಈ ವೇಳೆ ಅಂಧ ವ್ಯಕ್ತಿಯ ಕೈಹಿಡಿದು ರಸ್ತೆ ದಾಟಿಸಿದ್ದಾರೆ. ಘಟನೆ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸ್ ಸದಾಶಿವರ ಹೆಲ್ಪಿಂಗ್ ಹ್ಯಾಂಡ್‌ಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್‌ಸಿ ಸದಾಶಿವರ ಮಾನವೀಯ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಶ್ಲಾಘಿಸಿದ್ದಾರೆ.
ನಂಜನಗೂಡು: ಕಪಿಲಾ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ!
ಟ್ರಾಫಿಕ್ ಪೊಲೀಸರೆಂದರೆ ಹಣ ಪೀಕುವ, ವಾಹನ ಸವಾರರಿಗೆ ತೊಂದರೆ ಕೊಡುವ ಭ್ರಷ್ಟರು ಎಂಬ ಮಾತುಗಳು, ತಪ್ಪು ಕಲ್ಪನೆಗಳು ಜನಮಾನಸದಲ್ಲಿ ಗಟ್ಟಿಕುಳಿತುಬಿಟ್ಟಿವೆ. ಅದಕ್ಕೆ ಕೆಲವು ಭ್ರಷ್ಟ, ಹಣದ ಆಸೆಗೆ ಬಿದ್ದ ಕೆಲವು ಪೊಲೀಸರು ಕಾರಣವಿರಬಹುದು. ಆದರೆ ಎಲ್ಲ ಟ್ರಾಫಿಕ್ ಪೊಲೀಸರು ಭ್ರಷ್ಟರು ಅಲ್ಲ, ಮಾನವೀಯತೆ ಮರೆತವರಲ್ಲ ಅವರಲ್ಲೂ ಅಸಹಾಯಕರು, ದುರ್ಬಲರು, ಅಂಗವಿಕಲರಿಗೆ ಮಿಡಿಯುವ ಮಾನವೀಯ ಗುಣವುಳ್ಳವರು ಇದ್ದಾರೆಂಬುದು ಇಂಥ ಘಟನೆಗಳು ತಿಳಿಸುತ್ತವೆ.
ಇದೇನು ಕಾಂಗ್ರೆಸ್ ಸರ್ಕಾರವೇ?, RSS ಸರ್ಕಾರವೇ? ಸ್ವಪಕ್ಷದ ವಿರುದ್ಧ ಬಿಕೆ ಹರಿಪ್ರಸಾದ್ ಮತ್ತೆ ಕಿಡಿ