ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಎಲಗಿರಿ ಮಾದರಿಯಲ್ಲಿ ರಾಜ್ಯದ ಎರಡು ಕಡೆಗಳಲ್ಲಿ ಪಕ್ಷಿ ಪ್ರಪಂಚ ಸೃಷ್ಟಿಸುವ ಯೋಜನೆಗೆ ಅರಣ್ಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ9 ಮೃಗಾಲಯಗಳಿದ್ದು, ಅವುಗಳಲ್ಲಿ ಮಕ್ಕಳಿಗಾಗಿ ತೆರೆಯಲಾದ 4 ಸಣ್ಣ ಮೃಗಾಲಯಗಳಾಗಿವೆ.
ಗಿರೀಶ್ ಗರಗ
ಬೆಂಗಳೂರು (ಸೆ.02): ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಎಲಗಿರಿ ಮಾದರಿಯಲ್ಲಿ ರಾಜ್ಯದ ಎರಡು ಕಡೆಗಳಲ್ಲಿ ಪಕ್ಷಿ ಪ್ರಪಂಚ ಸೃಷ್ಟಿಸುವ ಯೋಜನೆಗೆ ಅರಣ್ಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ9 ಮೃಗಾಲಯಗಳಿದ್ದು, ಅವುಗಳಲ್ಲಿ ಮಕ್ಕಳಿಗಾಗಿ ತೆರೆಯಲಾದ 4 ಸಣ್ಣ ಮೃಗಾಲಯಗಳಾಗಿವೆ. ಈ ಮೃಗಾಲಯ ಗಳಲ್ಲಿ ಆನೆ, ಹುಲಿ, ಸಿಂಹ, ಚಿರತೆ, ಚಿಂಪಾಂಜಿ ಹೀಗೆ ದೊಡ್ಡ ಪ್ರಾಣಿಗಳು ಜೊತೆಗೆ ಸರೀಸೃಪ, ಪಕ್ಷಿಗಳನ್ನಿಡಲಾಗಿದ್ದು, ಅವುಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ. ಪಕ್ಷಿಗಳನ್ನು ಪಂಜರದೊಳಗಿರಿಸಲಾಗಿದೆ. ಮಾಡಲಾಗಿದೆ. ಪಕ್ಷಿಗಳ ಕುರಿತಂತೆ ಸಂಪೂರ್ಣ ಮಾಹಿತಿ ನೀಡುವ ಸಲುವಾಗಿ ರಾಜ್ಯದ ಎರಡು ಕಡೆ ಪಕ್ಷಿ ಪ್ರಪಂಚ ಸೃಷ್ಟಿಸಲಾಗುತ್ತದೆ.
ಅದರಲ್ಲಿ ಪಕ್ಷಿಗಳಿಗೆ ಜನರೇ ಆಹಾರ ನೀಡಿ, ಅವುಗಳನ್ನು ಸರ್ಶಿಸಿ ಅನುಭವ ಪಡೆಯುವಂತೆ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅರಣ್ಯ ಇಲಾಖೆ ನಿರ್ಧರಿಸಿರುವಂತೆ ಬೆಂಗಳೂರಿನ ಕೊತ್ತನೂರು ಹಾಗೂ ಬೀದರ್‌ನಲ್ಲಿ ಪಕ್ಷಿ ಪ್ರಪಂಚ ನಿರ್ಮಿಸಲಾಗುತ್ತದೆ. ಕೊತ್ತನೂರಿನಲ್ಲಿ ಅರಣ್ಯ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿ ದ್ದನ್ನು ಕೆಲ ತಿಂಗಳ ಹಿಂದೆ ತೆರವು ಮಾಡಲಾ ಗಿದೆ. ಒಟ್ಟು 17 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಪಡೆದಿದ್ದು, ಅದರಲ್ಲಿ 2.25 ಎಕರೆ ಭೂಮಿಯಲ್ಲಿ ಸ್ಥಾಪನೆಗೆ ಚರ್ಚಿಸಲಾಗಿದೆ. ಬೀದರ್‌ನಲ್ಲಿನ ಅರಣ್ಯ ಇಲಾ ಖೆಗೆ ಸೇರಿದ 3ರಿಂದ 4 ಎಕರೆ ಭೂಮಿಯಲ್ಲಿ ಪಕ್ಷಿ ಲೋಕ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ.
ತಮಿಳುನಾಡಿಗೆ ತೆರಳಿ ಅರಣ್ಯ ಸಚಿವರ ಪರಿಶೀಲನೆ: ರಾಜ್ಯದ ನಗರ ಪ್ರದೇಶದಲ್ಲಿ ಒತ್ತುವರಿದಾರರಿಂದ ವಶಕ್ಕೆ ಪಡೆದ ಅರಣ್ಯ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮೃಗಾಲಯ, ಟೀ ಪಾರ್ಕ್ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರ ಭಾಗ ವಾಗಿ ಪಕ್ಷಿಲೋಕ ನಿರ್ಮಾಣ ಯೋಜನೆ ಅನು ಷ್ಠಾನಗೊಳಿಸಲಾಗುತ್ತಿದೆ. ಅದಕ್ಕಾಗಿ ಹೊರ ರಾಜ್ಯಗಳಲ್ಲಿರುವ ಪಕ್ಷಿಲೋಕಗಳ ಪರಿಶೀಲನೆಗೆ ಈಶ್ವರ್ ಖಂಡ್ರೆಯೇ ಮುಂದಾಗಿದ್ದಾರೆ. ಅದರ ಭಾಗವಾಗಿ ಕಳೆದ ವಾರ ತಮಿಳು ನಾಡಿನ ವೆಲ್ಲೂರು ಜಿಲ್ಲೆಯ ಗಿರಿಯಲ್ಲಿರುವ ಪಕ್ಷಿಧಾಮಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿ ದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಪಕ್ಷಿ ಲೋಕ ಸೃಷ್ಟಿಸುವ ಬಗ್ಗೆ ಅಧಿಕಾ ರಿಗಳೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ. ಅಲ್ಲದೆ, ಪಕ್ಷಿ ಧಾಮ ನಿರ್ಮಾಣದ ಯೋಜನಾ ವರದಿ ಸಿದ್ಧಪಡಿಸುವಂತೆಯೂ ಸೂಚಿಸಿದ್ದಾರೆ.
ಬೆನ್ನು ನೋವಿದೆ, ಶೌಚಕ್ಕೆ ಕೆಳಗೆ ಕೂರಲು ಆಗಲ್ಲ, ಸರ್ಜಿಕಲ್ ಚೇರ್ ಬೇಕು: ದರ್ಶನ್ ಮನವಿ
ಎಲಗಿರಿಯಲ್ಲಿ 25ಕ್ಕೂ ಹೆಚ್ಚು ವಿಧದ ಪಕ್ಷಿಗಳು: ಎಲಗಿರಿಯಲ್ಲಿ ಖಾಸಗಿ ಸಂಸ್ಥೆ ಪಕ್ಷಿಧಾಮ ನಿರ್ಮಿ ಸಿದೆ. ದೇಸೀ ಗಿಳಿಗಳು, ಪಾರಿವಾಳಗಳು, ವಿದೇಶದ ಮಕಾವ್, ಫೀಂಚಸ್, ಎಮು, ಆಸ್ಟ್ರಿಚ್, ಬಾತು ಕೋಳಿಗಳು ಸೇರಿದಂತೆ 25ಕ್ಕೂ ಹೆಚ್ಚಿನ ಜಾತಿ ಪಕ್ಷಿಗಳಿವೆ. ಗಿಳಿಗಳನ್ನು ಏವರಿಯಲ್ಲಿಡಲಾಗಿದ್ದು, ಅಲ್ಲಿಗೆ ಜನರಿಗೆ ಪ್ರವೇಶವಿದೆ. ಆಹಾರ ತಿನ್ನಿಸುವುದಕ್ಕೆ ಅವಕಾಶವಿದೆ. ಆ ಗಿಳಿಗಳು ಜನರ ಮೈಮೇಲೆ ಬಂದು ಕುಳಿತುಕೊಳ್ಳುತ್ತವೆ. ಗಿಳಿಗಳನ್ನು ಹೊರತು ಪಡಿಸಿ ಕೋಳಿ ಜಾತಿಗೆ ಸೇರಿದ ಸಿಚಿಕನ್, ಬ್ರಹ್ಮಚಿಕನ್‌ಗಳೂಪ್ರದರ್ಶನಗೊಳ್ಳುತ್ತಿವೆ. ಹಲವು ವಿಧದ ಹಕ್ಕಿಗ ಳನ್ನಿಟ್ಟುಕೊಂಡು ಪಕ್ಷಿಧಾಮ ನಿರ್ಮಿಸಲಾಗಿದೆ.