ಭಾನುವಾರವೂ ಕೊರೋನಾ ರಣಕೇಕೆ: ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

By Suvarna News  |  First Published May 24, 2020, 3:07 PM IST

ರಾಜ್ಯದಲ್ಲಿ ಭಾನುವಾರವೂ ಸಹ ಕೊರೋನಾ ರಣಕೇಕೆ ಮುಂದುವರಿದಿದ್ದು, ರಾಜ್ಯದಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ  ದಾಟಿದೆ.


ಬೆಂಗಳೂರು, (ಮೇ.24): ರಾಜ್ಯ ಆರೋಗ್ಯ ಇಲಾಖೆ ಇಂದು (ಭಾನುವಾರ) ಬಿಡುಗಡೆ ಮಾಡಿರುವ ಮೊದಲ ಹೆಲ್ತ್ ಬುಲೆಟಿನ್‌ನಲ್ಲಿ  ಮತ್ತೆ 97 ಹೊಸ ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ.

ಕೊರೋನಾಗೆ ಕಾಸರಕದ ಚಕ್ಕೆ ಮದ್ದು ತಿಂದ ಮಗ ಇನ್ನಿಲ್ಲ, ಅಪ್ಪ ಸೀರಿಯಸ್..!

Tap to resize

Latest Videos

ಚಿಕ್ಕಬಳ್ಳಾಪುರ 26, ಹಾಸನ 14, ಉಡುಪಿ 18, ಮಂಡ್ಯ 15, ತುಮಕೂರು 2, ಯಾದಗಿರಿ 6, ಕಲಬುರಗಿ 6, ದಾವಣಗೆರೆ 4, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಡಿಕೇರಿ ಜಿಲ್ಲೆಗಳಲ್ಲಿ ತಲಾ 1 ಕೇಸ್ ಪತ್ತೆಯಾಗಿವೆ. 

Mid day Bulletin 24/05/2020. pic.twitter.com/LYQS9XQcq3

— K'taka Health Dept (@DHFWKA)

ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 42 ಮಂದಿ ಮೃತಪಟ್ಟಿದ್ದು, 1378 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಪತ್ತೆಯಾದ 97 ಕೇಸ್ ಗಳಲ್ಲಿ 73 ಕೇಸ್ ಗಳು ಮಹಾರಾಷ್ಟ್ರದ ಸಂಪರ್ಕ ಇರುವ ಕೇಸ್ ಗಳಾಗಿವೆ.
 

click me!