ಕರ್ನಾಟಕದಲ್ಲಿ ಬುಧವಾರ ದಾಖಲೆ ಬರೆದ ಕೊರೋನಾ ಸಂಖ್ಯೆ

By Suvarna News  |  First Published Sep 9, 2020, 8:36 PM IST

ಕರ್ನಾಟಕದಲ್ಲಿ ಇಂದು (ಬುಧವಾರ) ದಾಖಲೆ ಪ್ರಮಾಣದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಪತ್ತೆಯಾಗಿದೆ. ಕೋವಿಡ್19 ಹಿಂದಿನ ವರದಿ ಈ ಕೆಳಗಿನಂತಿದೆ.


ಬೆಂಗಳೂರು, (ಸೆ.09): ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 9,540 ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, 128 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 4,21,730ಕ್ಕೆ ಏರಿಕೆಯಾಗಿದ್ದು, ಸೋಂಕಿಗೆ ಬಲಿಯಾದವ ಸಂಖ್ಯೆ 6,808ಕ್ಕೇರಿದೆ.

Latest Videos

undefined

ಸೋಂಕಿತರ ಮೃತದೇಹ ಇನ್ನು ಕುಟುಂಬಸ್ಥರಿಗೆ ಹಸ್ತಾಂತರ..!

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು (ಬುಧವಾರ) ರಾಜ್ಯದಲ್ಲಿ 6860 ಜನ ಗುಣಮುಖರಾಗಿದ್ದಾರೆ. ಇದರೊಂದಿಗೆ ಇದುವರೆಗೆ 3,15,433 ಜನರು ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ.

ಒಟ್ಟು 3,15,433 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ 99,470 ಸಕ್ರೀಯ ಕೇಸ್‌ಗಳಿದ್ದು, 776 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಕೊರೋನಾ ಅಂಕಿ-ಸಂಖ್ಯೆ
ಇನ್ನೂ ಬೆಂಗಳೂರು ನಗರದಲ್ಲಿ ಇಂದು 3,419 ಜನರಿಗೆ ಕೊರೋನಾ ದೃಢಪಟ್ಟಿದ್ದು,  41 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 1,57,044ಕ್ಕೆ ಏರಿಕೆಯಾಗಿದೆ. ಇವರಲ್ಲಿ 1,12,536 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 42,200 ಆಗಿದೆ.

ಕೋವಿಡ್19: ಇಂದಿನ ವರದಿ😷 pic.twitter.com/cxp1LoyOI5

— B Sriramulu (@sriramulubjp)
click me!