ಟಿಬಿ ಡ್ಯಾಂಗೆ 90 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ; ಜಲಾಶಯಗಳ ಇಂದಿನ ನೀರಿನಮಟ್ಟ ಇಲ್ಲಿದೆ

Published : Jul 30, 2023, 11:37 AM IST
ಟಿಬಿ ಡ್ಯಾಂಗೆ 90 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ; ಜಲಾಶಯಗಳ ಇಂದಿನ ನೀರಿನಮಟ್ಟ ಇಲ್ಲಿದೆ

ಸಾರಾಂಶ

ತುಂಗಭದ್ರಾ ಜಲಾಶಯಕ್ಕೆ ಶನಿವಾರ 90 ಸಾವಿರ ಅಧಿಕ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಪರಿಣಾಮ ಜಲಾಶಯಕ್ಕೆ ಹರಿದುಬರುವ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ.

ಹೊಸಪೇಟೆ (ಜು.30) :  ತುಂಗಭದ್ರಾ ಜಲಾಶಯಕ್ಕೆ ಶನಿವಾರ 90 ಸಾವಿರ ಅಧಿಕ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಪರಿಣಾಮ ಜಲಾಶಯಕ್ಕೆ ಹರಿದುಬರುವ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ. ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಶುಕ್ರವಾರ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳಿಗೆ ಹರಿಸುತ್ತಿದ್ದ ನೀರಿನ ಪ್ರಮಾಣ ಮತ್ತಷ್ಟುಏರಿಕೆ ಮಾಡಲಾಗಿದೆ.

ಮಲೆನಾಡಿನಲ್ಲಿ ಮಳೆ ಕ್ಷೀಣ:

ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾದ್ದರಿಂದ ಶನಿವಾಮರ ಬೆಳಗ್ಗೆ 90 ಸಾವಿರಕ್ಕೂ ಅಧಿಕ ಕ್ಯುಸೆಕ್‌ ಹರಿದುಬರುತ್ತಿದ್ದ ಒಳಹರಿವು ಸಂಜೆ ಕ್ಷೀಣಿಸಿದ್ದು, 60 ಸಾವಿರ ಕ್ಯುಸೆಕ್‌ಗೆ ಇಳಿದಿದೆ. ಭಾನುವಾರ ಇನ್ನಷ್ಟುಕಡಿಮೆಯಾಗುವ ಸಾಧ್ಯತೆ ಇದೆ.

ಆಂಧ್ರ ಕಾಲುವೆಗೆ ನಾಳೆಯಿಂದ ತುಂಗಭದ್ರಾ ನೀರು, ರಾಜ್ಯದ ಕಾಲುವೆಗಳಿಗೆ ಯಾವಾಗ?

ಕಳೆದ ವರ್ಷ ಈ ದಿನದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. 69 ಸಾವಿರ ಕ್ಯುಸೆಕ್‌ ಒಳಹರಿವು ಇತ್ತು. 90 ಸಾವಿರ ಕ್ಯುಸೆಕ್‌ ಹೆಚ್ಚುವರಿ ನೀರನ್ನು ನದಿ ಮತ್ತು ಕಾಲುವೆಗೆ ಹರಿಸಲಾಗುತ್ತಿತ್ತು. ಪ್ರಸ್ತುತ ಜಲಾಶಯದಲ್ಲಿ 66.521 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯ ವೀಕ್ಷಣೆಗಾಗಿ ತಂಡೋಪತಂಡವಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

 

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ: ಅರ್ಧ ಭರ್ತಿಯಾದ ಆಲಮಟ್ಟಿ ಡ್ಯಾಂ

ಜಲಾಶಯ ನೀರಿನ ಮಟ್ಟ

ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ

  • ಕಬಿನಿ 96% 2284 2282.87
  • ಹೇಮಾವತಿ 77% 2922 2912.50
  • ತುಂಗಭದ್ರಾ 63% 1633 1621.80
  • ಸೂಪಾ (ಮೀ) 50% 564 543.90
  • ಕೆಆರ್‌ಎಸ್‌ 68% 124.80 112.8
  • ಘಟಪ್ರಭಾ 66% 2175.00 2150.30
  • ಲಿಂಗನಮಕ್ಕಿ 43.45% 1819 1786.30
  • ಭದ್ರಾ 60.96% 186 160.9
  • ಹಾರಂಗಿ 83% 2859 2854.77
  • ಆಲಮಟ್ಟಿ(ಮೀ) 73% 519.60 517.43
  • ನಾರಾಯಣಪುರ(ಮೀ) 87% 492.25 491.21
  • ಮಲಪ್ರಭಾ 50% 2079 2062.07

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌