ಇಂದು (ಶನಿವಾರ) ಕರ್ನಾಟಕದಲ್ಲಿ ಕೊರೋನಾ ಅಬ್ಬರಿಸಿದೆ. ಇದರ ಜೊತೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೂ ಹೆಚ್ಚಿದೆ.
ಬೆಂಗಳೂರು, (ಆ.29): ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 8324 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 8,110 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
115 ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ 5483ಕ್ಕೆ ತಲುಪಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 3,27,076ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಟ್ಟು 2,35,128 ಮಂದಿ ಚೇತರಿಸಿಕೊಂಡಿದ್ದಾರೆ.
IPLನಿಂದ ಸುರೇಶ್ ರೈನಾ ಔಟ್, ರಾಜಕಾರಣಿ ಪುತ್ರನಿಗೂ ಡ್ರಗ್ಸ್ ಲಿಂಕ್; ಆ.29ರ ಟಾಪ್ 10 ಸುದ್ದಿ!
ಸದ್ಯ 86,446 ಸಕ್ರಿಯ ಪ್ರಕರಣಗಳು ಇದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಬೆಂಗಳೂರಿನಲ್ಲಿ ಇಂದು 2993 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 124442 ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಕೇಸ್ ಸಂಖ್ಯೆ
ಬಾಗಲಕೋಟೆ 152, ಬಳ್ಳಾರಿ 468, ಬೆಳಗಾವಿ 276, ಬೆಂಗಳೂರು ಗ್ರಾಮಾಂತರ 182, ಬೆಂಗಳೂರು ನಗರ 2993, ಬೀದರ್ 46, ಚಾಮರಾಜನಗರ 45, ಚಿಕ್ಕಬಳ್ಳಾಪುರ 102, ಚಿಕ್ಕಮಗಳೂರು 129, ಚಿತ್ರದುರ್ಗ 100, ದಕ್ಷಿಣಕನ್ನಡ 272, ದಾವಣಗೆರೆ 319, ಧಾರವಾಡ 290, ಗದಗ 181, ಹಾಸನ 325, ಹಾವೇರಿ 93, ಕಲ್ಬುರ್ಗಿ 173, ಕೊಡಗು 46, ಕೋಲಾರ 51, ಕೊಪ್ಪಳ 238, ಮಂಡ್ಯ 194, ಮೈಸೂರು 309, ರಾಯಚೂರು 186, ರಾಮನಗರ 153, ಶಿವಮೊಗ್ಗ 333, ತುಮಕೂರು 138, ಉಡುಪಿ 172, ಉತ್ತರಕನ್ನಡ 130, ವಿಜಯಪುರ 130, ಯಾದಗಿರಿ 98 ಕೇಸ್ ಪತ್ತೆಯಾಗಿವೆ.