ಭಾರತದಲ್ಲಿ ಕೊರೋನಾಗೆ ಮೊದಲ ಬಲಿ? ಕರ್ನಾಟಕದ ವ್ಯಕ್ತಿ ಸಾವು!

By Suvarna NewsFirst Published Mar 11, 2020, 12:35 PM IST
Highlights

ಭಾರತದಲ್ಲಿ ಶಂಕಿತ ಕೊರೋನಾಗೆ ಮೊದಲ ಬಲಿ| ದುಬೈನಿಂದ ಬಂದಿದ್ದ ವ್ಯಕ್ತಿ ಮೃತ| ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ರವಾನೆ ಮಾಡಲಾಗಿತ್ತು| ಕೊರೋನಾಗೆ ಬಲಿಯಾಗಿರುವ ಶಂಕೆ

ಕಲಬುರಗಿ[ಮಾ.11]: ಡೆಡ್ಲಿ ಕೊರೋನಾಗೆ ದೇಶದಲ್ಲಿ ಮೊದಲ ಬಲಿಯಾದ ಶಂಕೆ ವ್ಯಕ್ತವಾಗಿದೆ. ಕಲಬುರ್ಗಿಯ 75 ವರ್ಷದ ವೃದ್ಧ ಶಂಕಿತ ಕೊರೋನಾದಿಂದ ಬಳಲುತ್ತಿದ್ದು, ನಿನ್ನೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

"

ದುಬೈನಿಂದ ಬಂದಿದ್ದ ಕಲಬುರಗಿಯ 75 ವರ್ಷದ ವೃದ್ಧ ಶಂಕಿತ ಕೊರೋನಾ ವೈರಸ್‌ನಿಂದ ಬಳಲುತ್ತಿದ್ದ. ವೈದ್ಯಾಧಿಕಾರಿಗಳು ಇವರ ಮೇಲೆ ನಿಗಾ ವಹಿಸಿದ್ದು, ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಕೊರೋನಾ ವೈರಸ್‌: ಹೆಚ್ಚಿದ ಆತಂಕ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊರೋನಾಗೆ ಬಲಿಯಾಗಿರುವ ಶಂಕೆ

ಕೊರೋನಾದಿಂದ ಇವರು ಸಾವನ್ನಪ್ಪಿರುವ ಅನುಮಾನ ವ್ಯಕ್ತಪಡಿಸಲಾಗಿದ್ದು, ಈ ಮಾಹಿತಿ ಇಂದು ಸಂಜೆ ಬರಲಿರುವ ವರದಿಯಿಂದ ದೃಢಪಡಬೇಕಿದೆ. ಕೆಮ್ಮು, ಜ್ವರದಿಂದ ಬಳಲುತ್ತಿದ್ದ ವೃದ್ಧನಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿದ್ದವು. ಸದ್ಯ ವೈದ್ಯಕೀಯ ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ.

ಹಾಸನದಲ್ಲಿ ಕೊರೋನಾ ವೈರಸ್‌ ಪತ್ತೆ ಕೇಂದ್ರ

ಏನಾಗಿತ್ತು?

ಉಮ್ರಾ ಯಾತ್ರೆಗಾಗಿ ಸೌದಿಗೆ ಹೋಗಿದ್ದ ವೃದ್ಧ, ಫೆಬ್ರವರಿ 29ರಂದು ಕಲಬುರಗಿಗೆ ವಾಪಸ್ಸಾಗಿದ್ದರು. ಸೌದಿಯಿಂದ ವಾಪಸ್ಸಾದ ವೇಳೆ ಕೆಮ್ಮು, ಜ್ವರದಿಂದ ಬಳಲುತ್ತಿದ್ದ ವೃದ್ಧನನ್ನು ಮಾರ್ಚ್ 5ರಂದು ಕಲಬುರಗಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಿನ್ನೆ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಕರೆದೊಯ್ಯಲಾಗಿತ್ತು. ಆದರೆ ಇಲ್ಲಿ ವರಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗಿದ್ದು, ಇಂದು ಬೆಳಗ್ಗೆ ಅವರನ್ನು ಕಲಬುರಗಿಗೆ ವಾಪಸ್ ತರಲಾಗಿತ್ತು. ಇಲ್ಲಿ ಗಂಟಲ ದ್ರವವನ್ನು ಪರೀಕ್ಷೆಗೆಂದು ಬೆಂಗಳೂರಿಗೆ ಕಳುಹಿಸಲಾಗಿತ್ತು. ಕೊರೋನಾ ಸೋಂಕಿನ ವರದಿ ಇಂದು ಸಂಜೆ ಬರುವ ನಿರೀಕ್ಷೆ ಇದೆ.

click me!