ಬಿಜೆಪಿ ಟಿಕೆಟ್‌ ವಂಚನೆ ಕೇಸ್: ಹಾಲಶ್ರೀ ಮಠದಿಂದ 56 ಲಕ್ಷ ನಗದು ವಶ

By Kannadaprabha News  |  First Published Sep 21, 2023, 4:25 AM IST

ಸ್ವಾಮೀಜಿಯವರು ಮೈಸೂರಿನಲ್ಲಿ ಅವರ ಕಾರು ಚಾಲಕನ ಮೂಲಕ ₹60 ಲಕ್ಷ ನೀಡಿದ್ದರು. ಅಭಿನವ ಹಾಲಶ್ರೀಯವರು ಮೈಸೂರು ಬಿಡುವ ಸಂದರ್ಭದಲ್ಲಿ ಈ ಹಣ ನೀಡಿದ್ದರು. ಇದರಲ್ಲಿ ಕೇಸು ನಡೆಸುವ ವಕೀಲರಿಗೆ ₹4 ಲಕ್ಷ ಹಣ ನೀಡಲು ಕಾರು ಚಾಲಕ ತೆಗೆದುಕೊಂಡಿದ್ದು, ಉಳಿದ ಹಣವನ್ನು ಮಠಕ್ಕೆ ತಲುಪಿಸಲು ಬಂದಿದ್ದೇನೆ. ಉಳಿದ ₹56 ಲಕ್ಷವನ್ನು ಮಠದಲ್ಲಿ ಇಡುತ್ತಿದ್ದೇನೆ. ಮಠದಲ್ಲಿನ ಪಲ್ಲಕ್ಕಿಯಲ್ಲಿ ಈ ಹಣ ಇಟ್ಟಿದ್ದೇನೆ’ ಎಂದು ಆ ಅಪರಿಚಿತ ವ್ಯಕ್ತಿ ಮಾತನಾಡಿರುವುದು ವಿಡಿಯೋದಲ್ಲಿದೆ.


ಹೂವಿನಹಡಗಲಿ(ಸೆ.21): ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಬೈಂದೂರು ಉದ್ಯಮಿಗೆ 5 ಕೋಟಿ ರು. ವಂಚಿಸಿದ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿಯ ಹಾಲಸ್ವಾಮಿ ಮಠಕ್ಕೆ ಸಿಸಿಬಿ ಪೊಲೀಸರು ಬುಧವಾರ ಭೇಟಿ ನೀಡಿದ್ದು, ಮಠದಲ್ಲಿದ್ದ ಸ್ವಾಮೀಜಿಗೆ ಸೇರಿದ 56 ಲಕ್ಷ ರು.ಗಳನ್ನು ಜಪ್ತಿ ಮಾಡಿದ್ದಾರೆ.

ಬಂಧನಕ್ಕೂ ಮುಂಚೆ ಸ್ವಾಮೀಜಿ ಮೈಸೂರಿಗೆ ಭೇಟಿ ನೀಡಿದ್ದು, ಮೈಸೂರಿನ ಕಚೇರಿಯೊಂದರಲ್ಲಿ ಅಪರಿಚಿತ ವ್ಯಕ್ತಿಗೆ ಈ ಹಣ ನೀಡಿದ್ದರು. ಸ್ವಾಮೀಜಿ ಸೂಚನೆಯಂತೆ ಆತ ಮಠಕ್ಕೆ ಹೋಗಿ ಈ ಹಣ ಇಟ್ಟಿದ್ದ. ಬಳಿಕ, ಹಾಲಶ್ರೀ ನೀಡಿದ ಹಣವನ್ನು ಮಠಕ್ಕೆ ಕೊಟ್ಟಿದ್ದೇನೆ ಎಂದು ಆತ ವಿಡಿಯೋ ಮಾಡಿದ್ದ.

Tap to resize

Latest Videos

undefined

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಡೀಲ್‌ ಹಣದಲ್ಲಿ ಹಾಲಶ್ರೀ 10 ಎಕರೆ ಭೂಮಿ ಖರೀದಿ, ಬಂಗಲೆ ನಿರ್ಮಾಣ..!

‘ಸ್ವಾಮೀಜಿಯವರು ಮೈಸೂರಿನಲ್ಲಿ ಅವರ ಕಾರು ಚಾಲಕನ ಮೂಲಕ ₹60 ಲಕ್ಷ ನೀಡಿದ್ದರು. ಅಭಿನವ ಹಾಲಶ್ರೀಯವರು ಮೈಸೂರು ಬಿಡುವ ಸಂದರ್ಭದಲ್ಲಿ ಈ ಹಣ ನೀಡಿದ್ದರು. ಇದರಲ್ಲಿ ಕೇಸು ನಡೆಸುವ ವಕೀಲರಿಗೆ ₹4 ಲಕ್ಷ ಹಣ ನೀಡಲು ಕಾರು ಚಾಲಕ ತೆಗೆದುಕೊಂಡಿದ್ದು, ಉಳಿದ ಹಣವನ್ನು ಮಠಕ್ಕೆ ತಲುಪಿಸಲು ಬಂದಿದ್ದೇನೆ. ಉಳಿದ ₹56 ಲಕ್ಷವನ್ನು ಮಠದಲ್ಲಿ ಇಡುತ್ತಿದ್ದೇನೆ. ಮಠದಲ್ಲಿನ ಪಲ್ಲಕ್ಕಿಯಲ್ಲಿ ಈ ಹಣ ಇಟ್ಟಿದ್ದೇನೆ’ ಎಂದು ಆ ಅಪರಿಚಿತ ವ್ಯಕ್ತಿ ಮಾತನಾಡಿರುವುದು ವಿಡಿಯೋದಲ್ಲಿದೆ.

ಈ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ, ಪೊಲೀಸರು ಮಠದಲ್ಲಿರುವ ಸ್ವಾಮೀಜಿಯವರ ಕುಟುಂಬಸ್ಥರ ವಿಚಾರಣೆ ನಡೆಸಿದ್ದಾರೆ. ವ್ಯವಹಾರ ಮಠದಲ್ಲಿ ಆಯಿತೇ? ಅಥವಾ ಬೇರೆ ಕಡೆ ಆಯಿತೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೊತೆಗೆ, ಸ್ವಾಮೀಜಿಯನ್ನೂ ಮಠಕ್ಕೆ ಕರೆ ತಂದು ತನಿಖೆ ನಡೆಸಲು ಮುಂದಾಗಿದ್ದಾರೆ. ಈ ಮಧ್ಯೆ, ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಮಠಕ್ಕೆ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಮಠದೊಳಕ್ಕೆ ಯಾರನ್ನೂ ಬಿಡಲಿಲ್ಲ.

ಮಹತ್ವದ ಸುಳಿವು ನೀಡಿದ ಸಿಸಿಟಿವಿ ದೃಶ್ಯ:

ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸ್ವಾಮೀಜಿ ಮೈಸೂರಿಗೆ ಬಂದು ಹೋಗಿದ್ದರು. ಮೈಸೂರಿನಲ್ಲಿ ಚಾಮರಾಜನಗರ-ತಿರುಪತಿ ರೈಲು ಹತ್ತಿದ್ದ ಸ್ವಾಮೀಜಿ, ತೆಲಂಗಾಣ ಮೂಲಕ ಒಡಿಶಾ ತಲುಪಿದ್ದರು. ಮೈಸೂರಿನಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳ ಆಧಾರದ ಮೇಲೆ, ಅವರು ವೇಷಭೂಷಣ ಬದಲಿಸಿರುವುದು ಪತ್ತೆಯಾಗಿತ್ತು. ಇದರ ಆಧಾರದ ಮೇಲೆಯೇ ಒಡಿಶಾದಲ್ಲಿ ಸ್ವಾಮೀಜಿಯನ್ನು ಬಂಧಿಸಲಾಗಿತ್ತು.

click me!