
ಬೆಂಗಳೂರು, [ಮಾ.21]: ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅದು ಬೆಂಗಳೂರಿನಲ್ಲಿ ಮಾತ್ರವಲ್ಲದೇ ಇತರೆ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ.
ಇಂದು [ಶನಿವಾರ] ಒಂದೇ ದಿನದಲ್ಲಿ 5 ಜನರಿಗೆ ಕೊರೋನಾ ಇರುವುದು ದೃಢವಾಗಿದ್ದು, ಜನರನ್ನ ಮತ್ತಷ್ಟು ಭಯಬೀತಿಗೊಳಗಾಗುವಂತೆ ಮಾಡಿದೆ. ಇನ್ನು ಐದು ಎಲ್ಲೆಲ್ಲಿ ಕಂಡುಬಂದಿವೆ ಎನ್ನುವ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
ಮೈಸೂರಿಗೂ ಕಾಲಿಟ್ಟ ಕೊರೋನಾ ವೈರಸ್: ಸೊಂಕಿತರ ಸಂಖ್ಯೆ 20ಕ್ಕೇರಿಕೆ
ಬೆಂಗಳೂರಿನ ಮೂವರು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಹಾಗೂ ಮೈಸೂರಿನ ಒಬ್ಬರಿಗೆ ಸೋಂಕು ದೃಢಟಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಶುಕ್ರವಾರವರತೆಗೆ 15 ಇದ್ದ ಕೊರೋನಾ ಸೋಂಕಿತರ ಶನಿವಾರ 20ಕ್ಕೆ ಏರಿಕೆಯಾಗಿದೆ. ಹಾಗಾದ್ರೆ ಈ ಐವರು ಎಲ್ಲಿಂದ ಬಂದುವರ ಎನ್ನುವುದನ್ನ ನೋಡಿ.
* 16ನೇ ಸೋಂಕಿತ- 53 ವರ್ಷದ ಬೆಂಗಳೂರಿನ ಮಹಿಳೆ
* 11ನೇ ಸೋಂಕಿತನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ
* ಸೋಂಕಿತರ ಸಂಪರ್ಕದಿಂದ ಮನೆಗೆಲಸದಾಕೆಗೆ ಚಿಕಿತ್ಸೆ
-----
* 17ನೇ ಸೋಂಕಿತ - 39 ವರ್ಷದ ವ್ಯಕ್ತಿ ಬೆಂಗಳೂರು ನಿವಾಸಿ
* ಮಾರ್ಚ್ 19ರಂದು ನೆದರ್ಲ್ಯಾಂಡ್ನಿಂದ ವಾಪಸ್ಸಾಗಿದ್ದರು
-----
* 18ನೇ ಸೋಂಕಿತ- 21 ವರ್ಷದ ಯುವಕ ಬೆಂಗಳೂರು ನಿವಾಸಿ
* ಮಾರ್ಚ್ 17ರಂದು ಸ್ಕಾಟ್ಲ್ಯಾಂಡ್ನಿಂದ ವಾಪಸ್ಸಾಗಿದ್ದರು
-----
* 19ನೇ ಸೋಂಕಿತ- 31 ವರ್ಷದ ಯುವಕ, ಗೌರಿಬಿದನೂರು ನಿವಾಸಿ
* ಮಾರ್ಚ್ 14ಂದು ಮೆಕ್ಕಾದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದರು
-----
* 20ನೇ ಸೋಂಕಿತ- 35 ವರ್ಷದ ಯುವಕ ಮೈಸೂರು ನಿವಾಸಿ
* ಮಾರ್ಚ್ 19ರಂದು ದುಬೈನಿಂದ ವಾಪಸ್ಸಾಗಿದ್ದರು.
ಇನ್ನು ದೇಶದಾದ್ಯಂತ ಸೋಂಕಿತರ ಸಂಖ್ಯೆ ದಿನದಿನಕ್ಕೆ ಏರುತ್ತಲೇ ಇದೆ. ದೇಶಾದ್ಯಂತ 300ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢವಾಗಿದೆ. ಮಹಾರಾಷ್ಟ್ರದಲ್ಲಂತೂ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಲೇ ಇದ್ದು, ಒಟ್ಟು 65ಕ್ಕೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ