Siddaramaiah : ಸದನದಲ್ಲಿ ಮೊದಲಸಲ 40% ಕಮಿಷನ್ ಕದನ

By Kannadaprabha News  |  First Published Feb 15, 2023, 1:17 AM IST

ಸರ್ಕಾರದ ವಿರುದ್ಧದ ‘40 ಪರ್ಸೆಂಟ್‌’ ಕಮಿಷನ್‌ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಕೊನೆಗೂ ಯಶಸ್ವಿಯಾಯಿತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಮಂಗಳವಾರ ಈ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಬಗ್ಗೆ ನ್ಯಾಯಾಂಗ ಆಯೋಗದ ತನಿಖೆಗೆ ಒತ್ತಾಯಿಸಿದರು.


ವಿಧಾನಸಭೆ (ಫೆ.15) : ಸರ್ಕಾರದ ವಿರುದ್ಧದ ‘40 ಪರ್ಸೆಂಟ್‌’ ಕಮಿಷನ್‌ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಕೊನೆಗೂ ಯಶಸ್ವಿಯಾಯಿತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಮಂಗಳವಾರ ಈ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಬಗ್ಗೆ ನ್ಯಾಯಾಂಗ ಆಯೋಗದ ತನಿಖೆಗೆ ಒತ್ತಾಯಿಸಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷ ಬಿಜೆಪಿ(BJP), ಆರೋಪಕ್ಕೆ ಸಾಕ್ಷಿ ಇಟ್ಟು ಮಾತನಾಡಿ ಎಂಬ ಸವಾಲು ಹಾಕಿತು. ಇದಕ್ಕೆ ಕಾಂಗ್ರೆಸ್‌ ಸದಸ್ಯರು(Congress members) ನಮ್ಮ ಸರ್ಕಾರದ ಮೇಲೆ ಯಾವ ಸಾಕ್ಷಿ ಇಟ್ಟುಕೊಂಡು 10 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದಿರಿ, ಬಹಿರಂಗಪಡಿಸಿ ಎಂದು ಪ್ರತಿಸವಾಲು ಹಾಕಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ಏರ್ಪಟ್ಟು ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ(Santosh Patil suicide), ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ(Kempanna President of the Contractors Association) ಪತ್ರ, ಡಿವೈಎಸ್‌ಪಿ ಗಣಪತಿ(Dysp Ganapati), ಜಿಲ್ಲಾಧಿಕಾರಿ ಡಿ.ಕೆ.ರವಿ(DK Ravi) ಸಾವು ಸೇರಿದಂತೆ ಮೊದಲಾದ ವಿಷಯಗಳೂ ಪ್ರಸ್ತಾಪವಾಗಿ ಇನ್ನಿಲ್ಲದ ವಾಗ್ವಾದ, ಆರೋಪ-ಪ್ರತ್ಯಾರೋಪಗಳು ಏರ್ಪಟ್ಟು ಕೆಲಕಾಲ ಗದ್ದಲ, ಕೋಲಾಹಲ ಉಂಟಾಯಿತು.

Tap to resize

Latest Videos

ಸಮವಸ್ತ್ರ ವಿತರಣೆಗೆ ಸರ್ಕಾರದ ನಿರ್ಲಕ್ಷ್ಯ: ಅಧಿಕಾರಿಯನ್ನ ಜೈಲಿಗೆ ಕಳಿಸ್ತೇವೆ; ಹೈಕೋರ್ಟ್ ಎಚ್ಚರಿಕೆ

40 ಪರ್ಸೆಂಟ್‌ ಕಮಿಷನ್‌ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರು ಕಳೆದ ಎರಡು ಅಧಿವೇಶನಗಳಿಂದ ನಿರಂತರ ಪ್ರಯತ್ನ ಮಾಡಿದ್ದರು. ಚರ್ಚೆಗೆ ಅವಕಾಶ ಕೋರಿ ಸ್ಪೀಕರ್‌ಗೆ ನೋಟಿಸ್‌ ನೀಡಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಕುರಿತು ಭಾಷಣ ಮಾಡಲು ದೊರಕಿದ ಅವಕಾಶದ ವೇಳೆ ವಿಷಯವನ್ನು ಪ್ರಸ್ತಾಪಿಸಿದರು. ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುವಾಗ ಸಾಂದರ್ಭಿಕವಾಗಿ ಎಲ್ಲ ವಿಷಯಗಳನ್ನು ವಿಪಕ್ಷ ನಾಯಕ ಪ್ರಸ್ತಾಪಿಸಬಹುದು. ಈ ಹಿನ್ನೆಲೆಯಲ್ಲಿ ಶೇಕಡಾ 40ರಷ್ಟುಲಂಚದ ವಿಷಯವನ್ನು ಸಿದ್ದರಾಮಯ್ಯ ಕೈಗೆತ್ತಿಕೊಂಡರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy) ಹಾಗೂ ಇನ್ನಿತರ ಸಚಿವರು, ಸದನದಲ್ಲಿ ಸರ್ಕಾರದ ವಿರುದ್ಧ ಆಧಾರ ರಹಿತವಾಗಿ ಇಂತಹ ಆರೋಪ ಮಾಡುವುದಲ್ಲ. ದಾಖಲೆ ನೀಡಿ ಮಾತನಾಡಿ ಎಂದು ಪಟ್ಟು ಹಿಡಿದರು. ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ಹಿಂದೆ ನಮ್ಮ ಸರ್ಕಾರದ ಮೇಲೆ ಪ್ರಧಾನಿ ಮೋದಿ ಹಾಗೂ ಇನ್ನಿತರೆ ಬಿಜೆಪಿ ನಾಯಕರು 10 ಪರ್ಸೆಂಟ್‌ ಸರ್ಕಾರ ಎಂದು ಆರೋಪ ಮಾಡಿದ್ದರಲ್ಲ. ಯಾವ ಸಾಕ್ಷಿ ಇಟ್ಟುಕೊಂಡು ಆರೋಪ ಮಾಡಿದ್ದಿರಿ ಹೇಳಿ ಎಂದು ಪ್ರಶ್ನಿಸಿದರು.

ಈ ವೇಳೆ ಬಿಜೆಪಿ ಸದಸ್ಯ ಸಿ.ಟಿ.ರವಿ(CT Ravi) ಅವರು ಡಿ.ಕೆ.ರವಿ ಅವರ ತಾಯಿ ತಮ್ಮ ಮಗನ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾಜ್‌ರ್‍ ಅವರ ಹೆಸರೇಳಿದ್ದರಿಂದ ನಾವು ತನಿಖೆಗೆ ಆರೋಪ ಮಾಡಿದ್ದು, ನಂತರ ತನಿಖೆಯಲ್ಲಿ ಕ್ಲೀನ್‌ ಚಿಟ್‌ ಸಿಕ್ಕಿದೆಯಲ್ಲಾ ಎಂದರು. ಆಗ ಸಿದ್ದರಾಮಯ್ಯ ಅವರು, ನಾವು ಕೂಡ ಅನಗತ್ಯವಾಗಿ ಮಾತನಾಡುತ್ತಿಲ್ಲ. ಗುತ್ತಿಗೆದಾರರ ಸಂಘ ಮಾಡಿದ ಆರೋಪವನ್ನು ಹೇಳುತ್ತಿರುವೆ ಅಷ್ಟೇ. ಸರ್ಕಾರದ ಅಧಿಕೃತ ಮಾನ್ಯತೆ ಇರುವ ಸಂಘ ಪ್ರಧಾನಿ ಅವರಿಗೆ ಪತ್ರ ಬರೆದಿದೆ. ನಾವು ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಮನೆಗೆ ಹೋಗಿದ್ದವು. ಅವರ ಸಾವಿಗೆ ಈ ಹಿಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಕಾರಣ ಎಂದು ಸಂತೋಷ್‌ ಪತ್ನಿಯೇ ಆರೋಪಿಸಿದ್ದರು. ಇದು ನನ್ನ ವೈಯಕ್ತಿಕ ಆರೋಪವಲ್ಲ. ನಮ್ಮ ಸರ್ಕಾರದಲ್ಲಿ ಇಂತಹ ಆರೋಪ ಬಂದಾಗ ನೀವು ಪ್ರತಿಪಕ್ಷದಲ್ಲಿದ್ದು ಆಗ್ರಹಿಸಿದಂತೆ ಸಿಬಿಐ ತನಿಖೆಗೆ ನೀಡಿದ್ದೆವು. ಹಾಗಾಗಿ ಸರ್ಕಾರಕ್ಕೆ 40 ಪರ್ಸೆಂಟ್‌ ಬಗ್ಗೆ ಭಯ ಇಲ್ಲ ಅಂದರೆ ಹಾಲಿ ಸುಪ್ರೀಂ ಕೋರ್ಚ್‌ ನ್ಯಾಯಮೂರ್ತಿ ಅವರ ನೇತೃತ್ವದ ನ್ಯಾಯಾಂಗ ಆಯೋಗದ ತನಿಖೆಗೆ ವಹಿಸಬೇಕು. ಆಗ ಸಾಕ್ಷ್ಯ ಇರುವವರು ತಂದು ಕೊಡುತ್ತಾರೆ ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಅಲಿಬಾಬಾ ಸರ್ಕಾರವಿದೆ: ಸಿದ್ದರಾಮಯ್ಯ

ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. 40 ಪರ್ಸೆಂಟ್‌ ಕಮಿಷನ್‌ ಆರೋಪ ನಾವು ಮಾಡಿದ್ದಲ್ಲ, ಗುತ್ತಿಗೆದಾರರೇ ಮಾಡಿರುವುದು. ಇದನ್ನು ತನಿಖೆ ಮಾಡಿ ಎಂದರೆ ತಪ್ಪಾ? ಈ ಭ್ರಷ್ಟಾಚಾರ ಕೊನೆಯಾಗಬೇಕು ಎಂದಾದರೆ ನೀವು (ಬಿಜೆಪಿ) ಇಲ್ಲಿಗೆ (ಪ್ರತಿಪಕ್ಷದಲ್ಲಿ) ಬರಬೇಕು. ನಾವು (ಕಾಂಗ್ರೆಸ್‌) ಅಲ್ಲಿಗೆ (ಆಡಳಿತ ಪಕ್ಷ) ಹೋಗಬೇಕು ಅಷ್ಟೇ. ನಿಮ್ಮನ್ನು ತಿರಸ್ಕರಿಸಲು ಜನ ಕಾಯುತ್ತಿದ್ದಾರೆ.

ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಸದಸ್ಯ

ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿ ಅಧಿಕಾರ ಬರುತ್ತದೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆ ಕನಸಿನ ಕೂಸಿಗೆ ಪಟ್ಟಾಭಿಷೇಕ ಮಾಡುವ ಮಾತು. ಸಾರ್ವಜನಿಕ ಸಭೆಗಳಲ್ಲಿ ಹೇಳುವಂತೆ ಸದನದಲ್ಲೂ ಭಾಷಣ ಮಾಡುವುದಲ್ಲ. ಸದನದಲ್ಲಿ ಇಂತಹ ಮಾತಿಗೆ ಅವಕಾಶ ಇಲ್ಲ. ಕೇವಲ ದಾಖಲೆಗೆ ಮಾತ್ರ ಇಲ್ಲಿ ಮಾನ್ಯತೆ.

ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

click me!