
ವಿಧಾನಸಭೆ :ವಿಧಾನಸಭೆ ಸಚಿವಾಲಯದಿಂದ ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ 224 ಶಾಸಕ, ಸಚಿವರಿಗೆ ಸರ್ಕಾರದ ಗಂಡಭೇರುಂಡ ಲಾಂಛನವುಳ್ಳ ಚಿನ್ನ ಲೇಪಿತ ಬ್ಯಾಡ್ಜ್‌ಗಳನ್ನು ವಿತರಿಸಲಾಗಿದೆ. ಬೆಂಗಳೂರಿನ ಐ ಡ್ರೀಮ್ಸ್ ಟ್ರೇಡ್ ಅಂಡ್ ಈವೆಂಟ್ ಲಿಮಿಟೆಡ್ ಕಂಪನಿಯಿಂದ ತಲಾ 2832 ರು. ನಂತೆ ಈ ಬ್ಯಾಡ್ಜ್‌ಗಳನ್ನು ಖರೀದಿ ಮಾಡಲಾಗಿದೆ.
ಮುಂದಿನ ಅಧಿವೇಶನದಿಂದ ಎಲ್ಲ ಸದಸ್ಯರು ಕಡ್ಡಾಯವಾಗಿ ಈ ಬ್ಯಾಡ್ಜ್ ಧರಿಸಿ ಸದನಕ್ಕೆ ಹಾಜರಾಗುವಂತೆ ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದ್ದಾರೆ.
ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯಗೆ ಪ್ರತಿಭಟನೆ ಬಿಸಿ; ಕಪ್ಪುಟ ಬಾವುಟ ಪ್ರದರ್ಶಸಿ ಬಿಜೆಪಿ ಆಕ್ರೋಶ
ಬುಧವಾರ ವಿಧಾನಸಭೆ ಕಾರ್ಯಕಲಾಪದ ವೇಳೆ ಈ ಬಗ್ಗೆ ಮಾಹಿತಿ ಪ್ರಕಟಿಸಿದ ಸ್ಪೀಕರ್, ಇವತ್ತು ವಿಧಾನಸೌಧಕ್ಕೆ ಬರುವವರೆಲ್ಲರೂ ಶಾಸಕ, ಸಚಿವರ ರೀತಿಯಲ್ಲೇ ಉಡುಪು ಧರಿಸಿ ಬರುತ್ತಾರೆ. ಹಾಗಾಗಿ ಮುಂದಿನ ವಿಧಾನಸಭೆ ಅಧಿವೇಶನಕ್ಕೆಎಲ್ಲ ಸದಸ್ಯರೂ ಈ ಬ್ಯಾಡ್ಜ್ ಕಡ್ಡಾಯವಾಗಿ ಧರಿಸಿ ಬರಬೇಕು. ಇದರಿಂದ ನಮ್ಮ ಗಾರ್ಡ್‌ಗಳಿಗೂ ಶಾಸಕರನ್ನು ಗುರುತಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಸಚಿವಾಲಯದಿಂದ ಎಲ್ಲ ಸದಸ್ಯರಿಗೂ ಒಂದು ಕಿಟ್ ಕೊಡಲಾಗಿದೆ. ಅದರಲ್ಲಿ ಪ್ರತಿ ಸದಸ್ಯರಿಗೂ ಗಂಡಭೇರುಂಡ ಲಾಂಛನವುಳ್ಳ ಮೂರು ಬ್ಯಾಡ್ಜ್‌ಗಳನ್ನು ನೀಡಲಾಗಿದೆ. ಅದರಲ್ಲಿ ಒಂದನ್ನು ತಮ್ಮ ಊರಿನಲ್ಲಿ, ಇನ್ನೊಂದು ಬೆಂಗಳೂರಿನಲ್ಲಿ ಇಟ್ಟುಕೊಳ್ಳಬಹುದು. ಮೂರನೆಯದು ಪ್ರತಿ ದಿನ ಬಳಕೆಗೆಂದು ನೀಡಲಾಗಿದೆ. ಶಾಸಕರು ದೆಹಲಿ ಸೇರಿದಂತೆ ಬೇರೆ ಬೇರೆ ಕಡೆ ಕಾರ್ಯಕ್ರಮಗಳಿಗೆ ಹೋಗುವಾಗ ಗೌರವ ಸೂಚಕವಾಗಿ ಈ ಬ್ಯಾಡ್ಜ್ ಧರಿಸಿ ಹೋಗಬಹುದು ಎಂದರು.
ಬಿಜೆಪಿಯವ್ರು ಬರ್ತಾ ಬರ್ತಾ ಸಂವಿಧಾನ ವಿರೋಧಿಗಳಾಗುತ್ತಿದ್ದಾರೆ: ಸಚಿವ ಎನ್‌ಎಸ್ ಬೋಸರಾಜು ಕಿಡಿ
ಆಸ್ಟ್ರೇಲಿಯಾ ಮಾದರಿ:
ಇತ್ತೀಚೆಗೆ ಆಸ್ಟ್ಟೇಲಿಯಾದ ಮೇಯರ್ ಒಬ್ಬರನ್ನು ಭೇಟಿ ಮಾಡಿದಾಗ ಅವರು ತಮಗೆ ಸರ್ಕಾರದ ಲಾಂಛನದ ಬ್ಯಾಡ್ಜ್ ಉಡುಗೊರೆಯಾಗಿ ನೀಡಿದ್ದರು. ಅಲ್ಲದೆ, ಅಲ್ಲಿನ ಜನಪ್ರತಿನಿಧಿಗಳು ಗೌರವ ಸೂಚಕವಾಗಿ ಈ ಲಾಂಛನ ಧರಿಸುವುದಾಗಿ ತಿಳಿಸಿದ್ದರು. ಹಾಗಾಗಿ ಇದೇ ಮಾದರಿಯಲ್ಲಿ ನಮ್ಮಲ್ಲೂ ಗಂಡ ಭೇರುಂಡ ಬ್ಯಾಡ್ಜ್ ನೀಡಲು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್ ಈ ಹಿಂದೆ ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ