240 ಕಾರ್ನರ್‌ ಸೈಟ್‌ ಮಾರಾಟ: ಬಿಡಿಎಗೆ 172 ಕೋಟಿ ಆದಾಯ

By Kannadaprabha NewsFirst Published Aug 14, 2020, 8:11 AM IST
Highlights

308 ಮೂಲೆ ನಿವೇಶನಗಳ ಪೈಕಿ 240 ನಿವೇಶನಗಳನ್ನು ಇ-ಹರಾಜಿನ ಮೂಲಕ ಮಾರಾಟ| 171.99 ಕೋಟಿ ರು. ಆದಾಯ|ಹರಾಜು ಪ್ರಕ್ರಿಯೆಲ್ಲಿ ಪಾಲ್ಗೊಂಡಿದ್ದ 1601 ಮಂದಿ ಬಿಡ್‌ದಾರರು|  ಶೀಘ್ರವೇ ಮೂರನೇ ಹಂತದ ಹರಾಜು ಆರಂಭಿಸುವುದಾಗಿ ತಿಳಿಸಿದ ಬಿಡಿಎ| 

ಬೆಂಗಳೂರು(ಆ.14): ಬಿಡಿಎ 2ನೇ ಹಂತದಲ್ಲಿ ವಿವಿಧ ಬಡಾವಣೆಗಳ 308 ಮೂಲೆ ನಿವೇಶನಗಳ ಪೈಕಿ 240 ನಿವೇಶನಗಳನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಿದ್ದು 171.99 ಕೋಟಿ ರು. ಆದಾಯ ಗಳಿಸಿದೆ.

2ನೇ ಹಂತದಲ್ಲಿ 308 ನಿವೇಶನಗಳನ್ನು ಹರಾಜಿಗೆ ಇಡಲಾಗಿದ್ದು, ಅವುಗಳಲ್ಲಿ 45 ನಿವೇಶನಗಳಿಗೆ ಯಾರು ಬಿಡ್‌ ಮಾಡಲಿಲ್ಲ. ಹಾಗೆಯೇ 22 ನಿವೇಶನಗಳಿಗೆ ಶೇ.5ಕ್ಕಿಂತ ಕಡಿಮೆ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಒಟ್ಟು 67 ನಿವೇಶನಗಳನ್ನು ಹರಾಜು ಮಾಡಲಾಗಿಲ್ಲ. ಒಂದು ನಿವೇಶನವನ್ನು ಹಿಂಪಡೆಯಲಾಗಿದೆ. ಉಳಿದಂತೆ 240 ನಿವೇಶನಗಳು ಇ-ಹರಾಜಿನಲ್ಲಿ ಮಾರಾಟ ಮಾಡಲಾಗಿದೆ.

ಬಿಡಿಎ ಮೂಲೆ ನಿವೇಶನಗಳ ಹರಾಜು: 46 ಕೋಟಿ ಆದಾಯ

ಈ ಹರಾಜು ಪ್ರಕ್ರಿಯೆಲ್ಲಿ 1601 ಮಂದಿ ಬಿಡ್‌ದಾರರು ಪಾಲ್ಗೊಂಡಿದ್ದರು. ಐದು ಹಂತಗಳಲ್ಲಿ 240 ಮೂಲೆ ನಿವೇಶನಗಳನ್ನು ಮಾರಾಟ ಮಾಡಲಾಗಿದ್ದು ಈ ನಿವೇಶನಗಳ ಒಟ್ಟು ಮೂಲಬೆಲೆ 103.87 ಕೋಟಿ ರು.ಗಳಾಗಿವೆ. ಆದರೆ ಹರಾಜಿನಿಂದ 171.99 ಕೋಟಿ ರು.ಗಳ ಆದಾಯ ಬಂದಿದ್ದು, ನಿರೀಕ್ಷೆಗಿಂತ 68.12 ಕೋಟಿ ರು.ಗಳ ಲಾಭವನ್ನು ಬಿಡಿಎ ಗಳಿಸಿದೆ ಎಂದು ಬಿಡಿಎ ತಿಳಿಸಿದೆ. ಎರಡು ಹಂತದಲ್ಲಿ ಮೂಲೆ ನಿವೇಶನಗಳ ಇ-ಹರಾಜನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಿಡಿಎ ಶೀಘ್ರವೇ ಮೂರನೇ ಹಂತದ ಹರಾಜು ಆರಂಭಿಸುವುದಾಗಿ ತಿಳಿಸಿದೆ.
 

click me!