ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವರ್ಗ;  ಜವಾಬ್ದಾರಿ ಯಾರಿಗೆ?

By Suvarna News  |  First Published Mar 31, 2021, 8:27 PM IST

ಐಎಎಸ್ ಅಧಿಕಾರಿಗಳ  ವರ್ಗಾವಣೆ/  ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ವರ್ಗಾವಣೆ/ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ/ 17 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ


ಬೆಂಗಳೂರು (ಮಾ.​ 31) ರಾಜ್ಯ ಸರ್ಕಾರ  ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು ಮೇಜರ್ ಸರ್ಜರಿ ಮಾಡಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ 17 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. 

ಮಂಜುನಾಥ್​ ಪ್ರಸಾದ್​ ಆಯುಕ್ತರಾದ ನಂತರ ಬಿಬಿಎಂಪಿಯಲ್ಲಿ  ಬದಲಾವಣೆ ಗಾಳಿ  ಬೀಸಿತ್ತು ಎಂದು ವರದಿಗಳಾಗಿದ್ದವು. ಬಿಬಿಎಂಪಿ ಜನಪ್ರತಿನಿಧಿಗಳ ಆಡಳಿತಾವಧಿ ಸಹ ಮುಗಿದಿತ್ತು.  ಪ್ರಸಾಸ್ ಅವರನ್ನು ಬಿಬಿಎಂಪಿಯಿಂದ ಎತ್ತಂಗಡಿ ಮಾಡಿದ್ದು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ.

Tap to resize

Latest Videos

undefined

UPSC  ಹೊಸ ಹುದ್ದೆಗಳಿವೆ, ಅರ್ಜಿ ಹಾಕಿ

ಮಂಜುನಾಥ್​ ಪ್ರಸಾದ್​ ಸ್ಥಾನದಲ್ಲಿ ಮತ್ತೋರ್ವ ಹಿರಿಯ ಐಎಎಸ್​ ಅಧಿಕಾರಿ ಗೌರವ್​ ಗುಪ್ತಾ ಅವರನ್ನು ನೇಮಕ ಮಾಡಲಾಗಿದ್ದು ಬಿವಿಎಂಪಿ ಆಯುಕ್ತರಾಗಿದ್ದಾರೆ. . ಇದಲ್ಲದೆ, ಎಚ್. ಎನ್ ಗೋಪಾಲಕೃಷ್ಣ ಅವರನ್ನು ಐಟಿಬಿಟಿ ನಿರ್ದೇಶಕರನ್ನಾಗಿ, ಎಸ್. ಹೊನ್ನಾಂಬ ಅವರನ್ನು ಗಣಿ ಮತ್ತು ಭೂ ವಿಜ್ಞಾನ ನಿರ್ದೇಶಕಿಯನ್ನಾಗಿ, ಸಿಂಧು ಬಿ ರೂಪೇಶ್ ಅವರನ್ನು ಪ್ರವಾಸೋದ್ಯಮ‌‌ ಇಲಾಖೆ ನಿರ್ದೇಶಕಿಯನ್ನಾಗಿ ನೇಮಕ ಮಾಡಿ ಆದೇಶ   ಹೊರಡಿಸಲಾಗಿದೆ.

 

click me!